ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮೈಸೂರಿನ ರೈತ 19 ಲಕ್ಷದ ಸಾಲ ತೀರಿಸಿದ್ದರೂ ಮನೆ ಹರಾಜಿಗೆ ಹಾಕಿದ ಗ್ರಾಮೀಣ ಬ್ಯಾಂಕ್‌?

ಮೈಸೂರಿನ ರೈತ ದೊರೆಸ್ವಾಮಿ ಹೇಳುವಂತೆ ಇದುವರೆಗೂ ಬಡ್ಡಿ ಸೇರಿ 18, 98,000 ರೂಪಾಯಿ ಸಾಲ ಮರು ಪಾವತಿ ಮಾಡಿದರಂತೆ. ಆದರೂ ಬ್ಯಾಂಕ್‌ನವರು ದೊರೆಸ್ವಾಮಿ ಅವರ ಮನೆಯನ್ನು ಏಕ ವ್ಯಕ್ತಿಗೆ ಹರಾಜು ಹಾಕಿದ್ದಾರಂತೆ.

ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮೈಸೂರಿನ ರೈತ 19 ಲಕ್ಷದ ಸಾಲ ತೀರಿಸಿದ್ದರೂ ಮನೆ ಹರಾಜಿಗೆ ಹಾಕಿದ ಗ್ರಾಮೀಣ ಬ್ಯಾಂಕ್‌?
ಮೈಸೂರಿನ ರೈತ ಸಾಲ ತೀರಿಸಿದ್ದರೂ ಮನೆ ಹರಾಜಿಗೆ ಹಾಕಿದ ಗ್ರಾಮೀಣ ಬ್ಯಾಂಕ್‌?
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Jan 17, 2024 | 2:13 PM

ರೈತ ದೇಶದ ಬೆನ್ನೆಲುಬು, ಅನ್ನದಾತ ಅನ್ನೋದು ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಇದಕ್ಕೆ ಸಾಕ್ಷಿ ರೈತರಿಗೆ ಆಗುತ್ತಿರುವ ಮೋಸ. ಮೈಸೂರಿನಲ್ಲಿ ಬ್ಯಾಂಕೊಂದು ಸಾಲ ಪಡೆದ ರೈತ ಸಾಲ ತೀರಿಸಿದ್ದರೂ ಸಹ ಮನೆ ಹರಾಜು ಹಾಕಿದ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಒಳಗೆ ರೈತರ ಮಾತಿನ ಚಕಮಕಿ. ಹಸಿರು ಶಾಲು ಹಿಡಿದು ಕುಳಿತ ಅನ್ನದಾತರು. ಅಂದ್ಹಾಗೆ ಇದು ಮೈಸೂರಿನ ವಿಜಯನಗರ ಬಡಾವಣೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ನಿನ್ನೆ ನಡೆದಿರುವ ಘಟನೆ. ಇದಕ್ಕೆ ಕಾರಣ ಬ್ಯಾಂಕ್‌ನ ಸಿಬ್ಬಂದಿ. ಹೌದು ರೈತ ದೊರೆಸ್ವಾಮಿ ಎಂಬುವವರು ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ತಮ್ಮ ಮನೆ ಪತ್ರ ನೀಡಿ 15 ಲಕ್ಷ ಸಾಲ ಪಡೆದಿದ್ರು. ಸಾಲ ಪಡೆದ ನಂತರ ಪ್ರತಿ ತಿಂಗಳು ತಮ್ಮ ಕೈಲಾದಷ್ಟು ಬಡ್ಡಿ ಅಸಲು ಕಟ್ಟುತ್ತಿದ್ದರು. ಹೀಗಿದ್ದರೂ ಬ್ಯಾಂಕ್‌ನವರು ದೊರೆಸ್ವಾಮಿ ಅವರ ಮನೆಯನ್ನು ಹರಾಜು ಹಾಕಿದ್ದಾರಂತೆ.

Also Read: ಧಾರವಾಡ ಕರ್ನಾಟಕ ವಿವಿಯಲ್ಲಿ 10 ವರ್ಷ ಹಿಂದಿನ ಅಕ್ರಮಗಳ ತನಿಖೆಗೆ ಮರುಜೀವ ನೀಡಿದ ರಾಜ್ಯಪಾಲ, ಆರೋಪಿಗಳ ಎದೆಯಲ್ಲಿ ಢವಢವ

ದೊರೆಸ್ವಾಮಿ ಪ್ರಕಾರ ಇದುವರೆಗೂ ಬಡ್ಡಿ ಸೇರಿ 18, 98,000 ರೂಪಾಯಿ ಸಾಲ ಮರು ಪಾವತಿ ಮಾಡಿದ್ದಾರಂತೆ. ಆದರೂ ಬ್ಯಾಂಕ್‌ನವರು ದೊರೆಸ್ವಾಮಿ ಅವರ ಮನೆಯನ್ನು ಏಕ ವ್ಯಕ್ತಿಗೆ ಹರಾಜು ಹಾಕಿದ್ದಾರಂತೆ. ಈ ಕಾರಣಕ್ಕೆ ನಿನ್ನೆ ಮಂಗಳವಾರ 50 ಕ್ಕೂ ಹೆಚ್ಚು ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ್ರು. ಇನ್ನು ಬ್ಯಾಂಕ್‌ನವರು ದೊರೆಸ್ವಾಮಿ ಅವರ ಆಸ್ತಿ ಕಬಳಿಸಲು ಈ ರೀತಿ ಮಾಡಿದ್ದಾರೆ ಅನ್ನೋದು ರೈತರ ಆರೋಪ.

ಇನ್ನು ಈ ಬಗ್ಗೆ ಬ್ಯಾಂಕ್‌ನವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ‌. ಆದರೆ ರೈತರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದೆಲ್ಲಾ ಏನೇ ಇರಲಿ. ಮೊದಲೇ ಸಂಕಷ್ಟದಲ್ಲಿರುವ ಅನ್ನದಾತರಿಗೆ ಇದು ಒಂದು ರೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?