ಸಿಎಂ ಆಪ್ತ, ಸಚಿವ ಕೆ ವೆಂಕಟೇಶ್​​ನಿಂದ ಮೈಮುಲ್ ಅಧ್ಯಕ್ಷನಿಗೆ ಕಿರುಕುಳ, ಆರೋಪ

| Updated By: ವಿವೇಕ ಬಿರಾದಾರ

Updated on: Jun 25, 2024 | 9:54 AM

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವ ಕೆ. ವೆಂಕಟೇಶ್ ಅವರು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಪಿ.ಎಂ.ಪ್ರಸನ್ನ ಅವರಿಗೆ ಕಳೆದ 6 ತಿಂಗಳ ಅಂತರದಲ್ಲಿ 24 ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಆಪ್ತ, ಸಚಿವ ಕೆ ವೆಂಕಟೇಶ್​​ನಿಂದ ಮೈಮುಲ್ ಅಧ್ಯಕ್ಷನಿಗೆ ಕಿರುಕುಳ, ಆರೋಪ
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ
Follow us on

ಮೈಸೂರು, ಜೂನ್​ 25: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಪ್ತ ಸಚಿವ ಕೆ. ವೆಂಕಟೇಶ್ (K Venkatesh)​ ಅವರು ಕಿರುಕುಳ ನೀತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಮಹದೇವ್ ಅವರ ಪುತ್ರ, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ (PM Prasnna) ಗಂಭೀರ ಆರೋಪ ಮಾಡಿದ್ದಾರೆ. ಸಚಿವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಅಧಿಕಾರಿಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ.

ಪಿ.ಎಂ.ಪ್ರಸನ್ನ ಅವರಿಗೆ ಕಳೆದ 6 ತಿಂಗಳ ಅಂತರದಲ್ಲಿ 24 ನೋಟಿಸ್ ಕೊಟ್ಟಿದ್ದಾರೆ. ಮೈಮುಲ್ ಅಧ್ಯಕ್ಷ ಸ್ಥಾನದಿಂದ ಇಳಿಸಲು ಸಚಿವ ಕೆ.ವೆಂಕಟೇಶ್ ಅವರು ಸತತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ನಿಗಮ-ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆಗೆ ಸಮಿತಿ ರಚಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ವಿಧಾನಸಭೆ ಚುನಾವಣೆಗೆ ತಮ್ಮ ಮಗನ ಭವಿಷ್ಯಕ್ಕಾಗಿ ನನ್ನನ್ನು ಅಧಿಕಾರದಿಂದ ಇಳಿಸಲು ಯತ್ನಿಸುತ್ತಿದ್ದಾರೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಮೈಮುಲ್​ನ ಇತರ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ವಾಸಸ್ಥಳ ದೃಡೀಕರಣ ಪತ್ರ, 65 ಎನ್‌ಕ್ವೈರಿ, 64 ಎನ್‌ಕ್ವೈರಿ ಹೆಸರಿನ್ನಲ್ಲಿ ಪದೇ ಪದೇ ಕಿರುಕುಳ ನೀಡಲಾಗುತ್ತಿದೆ ಎಂದರು.

ಅಲ್ಲದೆ ಅಧಿಕಾರಿಗಳನ್ನು ನಸುಕಿನ 5 ಗಂಟೆಗೆನೇ ಹಾಲು ಉತ್ಪಾದಕ ಕೇಂದ್ರಗಳಿಗೆ ಕಳುಹಿಸಿ ತೊಂದರೆ ಕೊಡುತ್ತಿದ್ದಾರೆ. ಮೈಮುಲ್​ನ ಇತರ ನಿರ್ದೇಶಕರ ಮೇಲೂ ಒತ್ತಡ ಹಾಕುತ್ತಿದ್ದಾರೆ. ಕೆ.ವೆಂಕಟೇಶ್ ಸಚಿವರಾದ ದಿನದಿಂದಲೇ ತೊಂದರೆ ನೀಡುತ್ತಿದ್ದಾರೆ ಎಂದು ಪಿ.ಎಂ.ಪ್ರಸನ್ನ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:54 am, Tue, 25 June 24