ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತನ್ನ ಪ್ರೀತಿಗೆ ಅಡ್ಡ ಆದ ಮಗುವನ್ನು ದೂರ ಮಾಡಲು ಯವಕ ಮಾಡಿದ ಖರ್ತನಾಕ್ ಪ್ಲ್ಯಾನ್

ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾಗಿದ್ದಳು. ಪ್ರಕರಣ ಭೇದಿಸಿದ ಲಷ್ಕರ್ ಠಾಣಾ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. ಕಳ್ಳ ಪ್ರೇಮಿಗಳು ತಮ್ಮ ಪ್ರೀತಿಗೆ ಅಡ್ಡಿಯಾದ ಮಗುವನ್ನು ಅನಾಥ ಮಗುವೆಂದು ಬಿಂಬಿಸಿದ್ದಾರೆ.

ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತನ್ನ ಪ್ರೀತಿಗೆ ಅಡ್ಡ ಆದ ಮಗುವನ್ನು ದೂರ ಮಾಡಲು ಯವಕ ಮಾಡಿದ ಖರ್ತನಾಕ್ ಪ್ಲ್ಯಾನ್
ಮೈಸೂರು ಬಸ್ಸಿಗಾಗಿ ರಾಯಚೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ಕೈಗೆ 9 ತಿಂಗಳ ಹಸುಗೂಸು ನೀಡಿ ನಾಪತ್ತೆಯಾದ ಮಹಿಳೆ!
Edited By: ಆಯೇಷಾ ಬಾನು

Updated on: May 23, 2022 | 4:02 PM

ಮೈಸೂರು: ಎರಡು ವಾರದ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ 9 ತಿಂಗಳ ಹಸುಗೂಸನ್ನು ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ನಡೆದಿತ್ತು. ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ಎಂಬ ಯುವಕನ ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾಗಿದ್ದರು. ಬಳಿಕ ಮಗುವನ್ನು ಯುವಕ ಪೊಲೀಸರ ಕೈಗೆ ಒಪ್ಪಿಸಿದ್ದ ಸದ್ಯ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾಗಿದ್ದಳು. ಪ್ರಕರಣ ಭೇದಿಸಿದ ಲಷ್ಕರ್ ಠಾಣಾ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. ಕಳ್ಳ ಪ್ರೇಮಿಗಳು ತಮ್ಮ ಪ್ರೀತಿಗೆ ಅಡ್ಡಿಯಾದ ಮಗುವನ್ನು ಅನಾಥ ಮಗುವೆಂದು ಬಿಂಬಿಸಿದ್ದಾರೆ. ಎರಡು ವಾರದ ಹಿಂದೆ ಮಹಿಳೆಯೊಬ್ಬರು ತನ್ನ ಕೈಗೆ ಮಗುಕೊಟ್ಟು ಮತ್ತೆ ಬರಲೇ ಇಲ್ಲ ಎಂದು ಕಥೆ ಕಟ್ಟಿದ್ದ ರಘು ತಾನು ಪ್ರೀತಿಸಿದ ಮಹಿಳೆ ಜೊತೆ ವಿವಾಹವಾಗಲು ಈ ಮಗು ಅಡ್ಡ ಬರುತ್ತಿದೆ ಎಂದು ತನ್ನ ಪ್ರೇಯಸಿಯ ಮಗುವನ್ನೇ ಅನಾಥವೆಂದು ಬಿಂಬಿಸಿದ್ದಾನೆ. ಸದ್ಯ ಪ್ರಕರಣ ಭೇದಿಸಿದ ಪೊಲೀಸರು ಕಳ್ಳ ಪ್ರೇಮಿಗಳ ಆಟ ಬಯಲು ಮಾಡಿದ್ದಾರೆ. ಇದನ್ನೂ ಓದಿ: ಮೈಸೂರು ಬಸ್ಸಿಗಾಗಿ ರಾಯಚೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ಕೈಗೆ 9 ತಿಂಗಳ ಹಸುಗೂಸು ನೀಡಿ ನಾಪತ್ತೆಯಾದ ಮಹಿಳೆ!

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಯುವಕ ರಘು, ಅಪರಿಚಿತ ಮಹಿಳೆ ಬಸ್ ಸ್ಟ್ಯಾಂಡ್ ನಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾದಳು. ದಾರಿ ಕಾಣದೆ ಮೈಸೂರಿಗೆ ತಂದಿರುವುದಾಗಿ ಕಥೆ ಕಟ್ಟಿದ್ದ. ಮಗುವಿನ ಪರಿಸ್ಥಿತಿಗೆ ಮರುಗಿ ತಾಯಿಯನ್ನು ಹುಡುಕಿದ ಪೊಲೀಸರು ಮಹಿಳೆಯಿಂದ ಸ್ಪೋಟಕ ಮಾಹಿತಿ ಕಲೆ ಹಾಕಿದ್ದಾರೆ. ರಘು ಹಾಗೂ ಮಹಿಳೆ ನಡುವೆ ಪ್ರೀತಿ ಇತ್ತು. ಇಬ್ಬರ ನಡುವಿನ ಪ್ರೀತಿಗೆ ತನ್ನ ಮಗು ಅಡ್ಡಿಯಾದ ಹಿನ್ನೆಲೆ ಮಗು ದೂರ ಮಾಡಲು ಇವರಿಬ್ಬರೂ ಸೇರಿ ಪ್ಲ್ಯಾನ್ ಮಾಡಿ ಈ ರೀತಿಯ ನಾಟಕ ಆಡಿದ್ದಾರೆ. ಮಹಿಳೆ ಮೂಲತಃ ರಾಯಚೂರಿನವರು. ವಿವಾಹಿತ ಮಹಿಳೆಯನ್ನ ರಘು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ಒಡನಾಟ ಇತ್ತು. ವಿವಾಹಿತ ಮಹಿಳೆಗೆ ಗಂಡು ಮಗು ಇತ್ತು. ಪತಿಯಿಂದ ದೂರವಾಗಿದ್ದ ಮಹಿಳೆ ಮಗುವನ್ನ ದೂರ ಮಾಡಿಕೊಂಡು ರಘು ಜೊತೆ ಮದುವೆಯಾಗಲು ಪ್ಲ್ಯಾನ್ ಮಾಡಿದ್ದಳು. ಹೀಗಾಗಿ ಇವರಿಬ್ಬರೂ ಸೇರಿ ಇಂತಹ ಡ್ರಾಮಾ ಮಾಡಿದ್ದು ಸದ್ಯ ರಘು ಹಾಗೂ ವಿವಾಹಿತ ಮಹಿಳೆ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನರ್ವಸತಿ ಕೇಂದ್ರದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ.

Published On - 4:02 pm, Mon, 23 May 22

Web contact

TV9 Kannada

Read More
Follow Us