ಅಪಘಾತದಲ್ಲಿ ಸತ್ತ ಅಣ್ಣನ ದೇಹ ನೋಡ್ತಿದ್ದಂತೆ ಆಘಾತಕ್ಕೆ ಹಾರಿ ಹೋಯ್ತು ತಂಗಿಯ ಪ್ರಾಣ ಪಕ್ಷಿ, ಮೈಸೂರಿನಲ್ಲಿ ಮನಕಲಕುವ ಘಟನೆ

ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೀರ್ತಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ. ಹಾಗೂ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದವು.

ಅಪಘಾತದಲ್ಲಿ ಸತ್ತ ಅಣ್ಣನ ದೇಹ ನೋಡ್ತಿದ್ದಂತೆ ಆಘಾತಕ್ಕೆ ಹಾರಿ ಹೋಯ್ತು ತಂಗಿಯ ಪ್ರಾಣ ಪಕ್ಷಿ, ಮೈಸೂರಿನಲ್ಲಿ ಮನಕಲಕುವ ಘಟನೆ
ಅಣ್ಣ ಕೀರ್ತಿ ಮತ್ತು ತಂಗಿ ರಶ್ಮಿ

ಮೈಸೂರು: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಅಣ್ಣನ ಮೃತದೇಹ ನೋಡಿ ಆಘಾತದಿಂದ ತಂಗಿ ಮೃತಪಟ್ಟಿದ್ದಾಳೆ. ಅಂತ್ಯ ಸಂಸ್ಕಾರಕ್ಕೆ‌ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ(21) ಅಣ್ಣ ಕೀರ್ತಿ(28) ಮೃತದೇಹ ನೋಡಿ ಸಾವನ್ನಪ್ಪಿದ್ದಾಳೆ.

ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೀರ್ತಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ. ಹಾಗೂ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಇಂದು ಕೀರ್ತಿ ಅಂತ್ಯ ಸಂಸ್ಕಾರಕ್ಕೆ‌ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ ಅಣ್ಣನ ಮೃತ ದೇಹ ನೋಡಿ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ರಶ್ಮಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ರಶ್ಮಿ ಪ್ರಾಣಬಿಟ್ಟಿದ್ದಾಳೆ. ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರನನ್ನ ರಕ್ಷಿಸಲು ಹೋಗಿ ಕಲ್ಲು ಗುಡ್ಡ ಏರಿದ ಬಸ್ ರಾಯಚೂರು: ಬೈಕ್ ಸವಾರರನ್ನು ರಕ್ಷಿಸಲು ಹೋಗಿ ಸಾರಿಗೆ ಬಸ್ ಕಲ್ಲು ಗುಡ್ಡ ಏರಿದೆ. ನಿನ್ನೆ ತಡ ರಾತ್ರಿ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿ ಘಟನೆ ನಡೆದಿದೆ. ಬೈಕ್ ಸವಾರರು ಅತೀವೇಗದಲ್ಲಿ ಬಸ್​ಗೆ ಎದುರು‌ ಬಂದ ಹಿನ್ನೆಲೆ ಬೈಕ್ ಸವಾರರನ್ನ ಕಾಪಾಡಲು ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ ಗುಡ್ಡ ಏರಿದ್ದಾರೆ. ಆದ್ರೆ ಗುಡ್ಡ ಇಳಿಯಲು ಸಾಧ್ಯವಾಗದೆ ಬಸ್​ ನಿಂರಲ್ಲೇ ನಿಂತಿದೆ. ಅದೃಷ್ಟವಶಾತ್ ಬೈಕ್ ಸವಾರರು, ಬಸ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾರಿ ಹರಿದು ಮಹಿಳೆ ಸಾವು ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಹರಿದು ರಮೇಜಾ ನದಾಫ್(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಾಬಾದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ: ತನಿಖಾ ಸಮಿತಿ ಮುಖ್ಯಸ್ಥರನ್ನಾಗಿ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾರನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್

Published On - 11:17 am, Wed, 12 January 22

Click on your DTH Provider to Add TV9 Kannada