ನಾಲೆಗಳಿಗೆ ಸ್ಥಗಿತಗೊಳಿಸಿ ತಮಿಳುನಾಡಿಗೆ ನೀರು ಹರಿಸಿದ ಕಾವೇರಿ ನಿಗಮ: ಸ್ಟಾಲಿನ್ ಸರ್ಕಾರದ ಒತ್ತಡಕ್ಕೆ ಮಣಿಯಿತಾ?
ರೈತರ ನಾಲೆಗಳಿಗೆ ನೀರು ಹರಿಸುವುದನ್ನು ಕಾವೇರಿ ನಿರಾವರಿ ನಿಗಮ ಏಕಾಏಕಿ ಸ್ಥಗಿತಗೊಳಿಸಿದ್ದು, ಇದೀಗ ನದಿಗೆ ಹರಿಸುವ ಮೂಲಕ ತಮಿಳುನಾಡು ಒತ್ತಡಕ್ಕೆ ಮಣಿತಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಮಂಡ್ಯ, (ಆಗಸ್ಟ್ 06): ರೈತನ ಬೆಳೆಗಾಗಿ ನಾಲೆಗಳಿಗೆ ನೀರು ಹರಿಸುವುದನ್ನ ಕಾವೇರಿ ನೀರಾವರಿ ನಿಗಮವು ಸ್ಥಗಿತಗೊಳಿಸಲಾಗಿದೆ. ಆದರೆ, ಕೆಆರ್ ಎಸ್ ಜಲಾಶಯದಿಂದ ಕಾವೇರಿ ನದಿಗೆ 5306 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 113.41 ಅಡಿ ನೀರು ಇದೆ. ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಸ್ಪಷ್ಟಪಡಿಸಿದ್ದರು. ಅಲ್ಲದೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚೆ ನಡೆಸಿ ನಾಲೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದರು. ಅದರಂತೆ ನಾಲೆಗಳಿಗೆ ಕೆಲ ದಿನಗಳ ಕಾಲ ನೀರು ಹರಿಸಿ ನಂತರ ನಿನ್ನೆಯಿಂದ(ಆಗಸ್ಟ್ 05) ಏಕಾಏಕಿ ಕಾವೇರಿ ನೀರು ನಿರ್ವಹಣಾ ನಿಗಮ ನೀರು ಹರಿಸುವುದನ್ನ ಸ್ಥಗಿತಗೊಳಿಸಿದೆ. ಇದರಿಂದ ರಾಜ್ಯ ಸರ್ಕಾರ, ಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿಯಿತಾ? ಎನ್ನುವ ಪ್ರಶ್ನಿಗಳು ಉದ್ಭವಿಸಿವೆ.
ಈ ಹಿಂದೆ ಕೆರೆಕಟ್ಟೆಗಳಿಗೆ, ಜಾನುವಾರುಗಳು ಕುಡಿಯಲು ನದಿಗೆ ನೀರು ಬಿಟ್ಟಿದ್ದೇವೆ ಎಂದಿದ್ದ ಕಾವೇರಿ ನೀರಾವರಿ ನಿಗಮ. ಇದೀಗ ಕ್ರಸ್ಟ್ ಗೇಟ್ ಗಳ ಬದಲು ನಾಲೆಗಳಿಂದ ನದಿಗೆ ನೀರು ಬಿಟ್ಟಿದ್ದಾರೆ. KRS ಜಲಾಶಯದ ಅಚ್ಚುಕಟ್ಟು ಪ್ರದೇಶ ನಾಲೆಗಳಿಗೆ ನೀರು ಹರಿಸುವಂತೆ ಮಂಡ್ಯದಲ್ಲಿ ರೈತರ ಒತ್ತಾಯಿಸಿ ನಿನ್ನೆ (ಆಗಸ್ಟ್ 06) ಪ್ರತಿಭಟನೆ ಮಾಡಿದ್ದರು. ಆದರೂ ನಾಲೆಗಳಿಗೆ ನೀರಿಲ್ಲ. ಬದಲಾಗಿ ನದಿಗೆ ಹರಿಸುತ್ತಿರುವುದು ರೈತರ ಆಕ್ರೋಸಕ್ಕೆ ಕಾರಣವಾಗಿದೆ.
ತಮಿಳುನಾಡು ಸಹ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮುಂದೆ ಬೇಡಿಕೆ ಇಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ರೈತ ನಾಲೆಗಳಿಗೆ ನೀರು ಸ್ಥಗಳಿತಗೊಳಿಸಿ ಇದೀಗ ದಿಢೀರ್ ಕಾವೇರಿ ನದಿಗೆ ನೀರು ಬಿಟ್ಟರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ಪತ್ರ ಬರೆದಿದ್ದ ತಮಿಳುನಾಡು ಸಿಎಂ
ಕರ್ನಾಟಕದಿಂದ ಕಾವೇರಿ ನೀರು ಬಿಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್ (CM Stalin) ಪತ್ರ ಬರೆದಿದ್ದರು. ಜೂನ್, ಜುಲೈ ಅವಧಿಯಲ್ಲಿ ಕರ್ನಾಟಕ 40 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಕೇವಲ 11 ಟಿಎಂಸಿ ನೀರು ಮಾತ್ರ ಹರಿಸಿದೆ. ಕುರುವೈ ಭತ್ತ ಉಳಿಸಿಕೊಳ್ಳಲು ನೀರಿನ ಅಗತ್ಯವಿದೆ. ಕರ್ನಾಟಕದ ಬಳಿ ನೀರಿದ್ದರೂ ರಾಜ್ಯಕ್ಕೆ ನೀರು ಬಿಡದೇ ಬಾಕಿ ಉಳಸಿಕೊಂಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ತಮಿಳುನಾಡಿಗೆ ಯಾವ ತಿಂಗಳಿನಲ್ಲಿ ಎಷ್ಟು ನೀರು?
ಜೂನ್ ತಿಂಗಳಲ್ಲಿ 10 ಟಿಎಂಸಿ, ಜುಲೈ 34 ಟಿಎಂಸಿ, ಅಗಸ್ಟ್ 50 ಟಿಎಂಸಿ, ಸೆಪ್ಟೆಂಬರ್- 40 ಟಿಎಂಸಿ, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನ್ಯಾಯಾಧಿಕರಣ ಈ ಹಿಂದೆ ತಿಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ