Cauvery ವಿವಾದದ ಗೊಡವೆ ಇಲ್ಲ! ಕೇವಲ ಮೂರೇ ತಿಂಗಳಲ್ಲಿ ತಮಿಳುನಾಡಿಗೆ ಹರಿದಿದೆ 324 ಟಿಎಂಸಿ ಕಾವೇರಿ ನೀರು

Rains Cauvery catchment area: ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಿಂದ ಈ ವರ್ಷವೂ ದಾಖಲೆಯ ಪ್ರಮಾಣದ ಕಾವೇರಿ ನೀರು ನೆರೆಯ ತಮಿಳುನಾಡಿಗೆ ಹರಿದಿದೆ. ಕಳೆದ ಮೂರು ವರ್ಷಗಳಿಗಿಂತ ಈ ಬಾರಿ ಅತಿ ಹೆಚ್ಚಿನ ಪ್ರಮಾಣದ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ. ಈ ವರ್ಷದ ಜೂನ್‌ ನಿಂದ ಸೆಪ್ಟೆಂಬರ್ 1ರವರೆಗೆ ಬರೋಬ್ಬರಿ 324 ಟಿಎಂಸಿ ನೀರು ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಿಂದ ತಮಿಳುನಾಡಿಗೆ ಹರಿದಿದೆ.

Cauvery ವಿವಾದದ ಗೊಡವೆ ಇಲ್ಲ! ಕೇವಲ ಮೂರೇ ತಿಂಗಳಲ್ಲಿ ತಮಿಳುನಾಡಿಗೆ ಹರಿದಿದೆ 324 ಟಿಎಂಸಿ ಕಾವೇರಿ ನೀರು
Cauvery ವಿವಾದದ ಗೊಡವೆ ಇಲ್ಲ! ಕೇವಲ ಮೂರೇ ತಿಂಗಳಲ್ಲಿ ತಮಿಳುನಾಡಿಗೆ ಹರಿದಿದೆ 324 ಟಿಎಂಸಿ ಕಾವೇರಿ ನೀರು Image Credit source: scroll.in
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Sep 02, 2022 | 5:06 PM

ದಕ್ಷಿಣ ಭಾರತದಲ್ಲಿ ಈ ವರ್ಷ ಭಾರಿ ಮಳೆಯಾಗುತ್ತಿದೆ. ಪರಿಣಾಮವಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಈ ವರ್ಷವೂ ಕಾವೇರಿ ನದಿ ನೀರು ಹಂಚಿಕೆಯ ವಿವಾದ ಉದ್ಭವವಾಗುತ್ತಿಲ್ಲ. ಕಾವೇರಿ ನದಿ ನೀರಿನ ಹಂಚಿಕೆಯ ಸಮಸ್ಯೆಗೆ ಮಳೆರಾಯ ಈ ವರ್ಷ ಮಾತ್ರವಲ್ಲ, ಕಳೆದ ನಾಲ್ಕು ವರ್ಷದಿಂದ ವಿರಾಮ ನೀಡಿದ್ದಾನೆ. ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಿಂದ ಕೇವಲ ಮೂರೇ ತಿಂಗಳಲ್ಲಿ ಬರೋಬ್ಬರಿ 324 ಟಿಎಂಸಿ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ. ಇದನ್ನು ಕರ್ನಾಟಕದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟಿವಿ9ಗೆ ತಿಳಿಸಿದ್ದಾರೆ.

ವಾರ್ಷಿಕ 177.25 ಟಿಎಂಸಿ ಕಾವೇರಿ ನೀರುನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಾಗಿತ್ತು. ಆದರೇ, ಅದರ ಎರಡು ಪಟ್ಟಿಗಿಂತ 30 ಟಿಎಂಸಿ ಕಡಿಮೆ ನೀರುನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ 30 ಟಿಎಂಸಿ ನೀರಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಈ ವರ್ಷ ಕರ್ನಾಟಕದಿಂದ ತಮಿಳುನಾಡಿಗೆ 354 ಟಿಎಂಸಿ ಗಿಂತ ಹೆಚ್ಚಿನ ಪ್ರಮಾಣದ ನೀರು ಹರಿಯುವ ಎಲ್ಲ ಸಾಧ್ಯತೆ ಇದೆ.

2018-19ರಲ್ಲಿ ಕರ್ನಾಟಕದ ಕಾವೇರಿ ಕಣಿವೆಯ ನಾಲ್ಕು ಡ್ಯಾಮ್ ಗಳಿಂದ ತಮಿಳುನಾಡಿಗೆ 405 ಟಿಎಂಸಿ ಅಡಿ ನೀರು ಹರಿದಿತ್ತು. 2019-20ರಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 275 ಟಿಎಂಸಿ ಅಡಿ ಕಾವೇರಿ ನೀರು ಹರಿದಿತ್ತು. 2020-21ರಲ್ಲಿ 211 ಟಿಎಂಸಿ ಅಡಿ ಕಾವೇರಿ ನೀರು ಹರಿದಿದ್ದರೇ, 2021-22ರಲ್ಲಿ 281 ಟಿಎಂಸಿ ಅಡಿ ನೀರು ಹರಿದಿದೆ. ಈ ವರ್ಷ ಕೇವಲ ಮೂರೇ ತಿಂಗಳಲ್ಲಿ 324 ಟಿಎಂಸಿ ಅಡಿ ನೀರು ಹರಿದಿರುವುದು ಹೊಸ ದಾಖಲೆ. ಜಲ ವರ್ಷ ಅಂತ್ಯವಾಗಲು ಮೇ 30ರವರೆಗೆ ಸಮಯಾವಕಾಶ ಇದೆ. ಹೀಗಾಗಿ ಮೇ, 30ರೊಳಗೆ ಇನ್ನೂ ಎಷ್ಟು ಟಿಎಂಸಿ ಅಡಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿಯುತ್ತೆ ಎನ್ನುವುದನ್ನು ಕಾದು ನೋಡಬೇಕು.

2021ರ ಜೂನ್ ತಿಂಗಳಲ್ಲಿ 7 ಟಿಎಂಸಿ ಅಡಿ ಕಾವೇರಿ ನೀರು ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಿಂದ ತಮಿಳುನಾಡಿಗೆ ಹರಿದಿತ್ತು. ಜುಲೈ ತಿಂಗಳಲ್ಲಿ 27 ಟಿಎಂಸಿ ಅಡಿ ಹಾಗೂ ಆಗಸ್ಟ್ ತಿಂಗಳಲ್ಲಿ 22 ಟಿಎಂಸಿ ಅಡಿ ಕಾವೇರಿ ನೀರು ತಮಿಳುನಾಡಿಗೆ ಹರಿದಿತ್ತು. 2021ರ ಜೂನ್ ನಿಂದ ಆಗಸ್ಟ್ ವರೆಗೂ ಮೂರು ತಿಂಗಳ ಅವಧಿಯಲ್ಲಿ 56 ಟಿಎಂಸಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿದಿತ್ತು. ಆದರೇ, ಈ ವರ್ಷ ಮೊದಲ ಮೂರು ತಿಂಗಳಲ್ಲೇ ಬರೋಬ್ಬರಿ 324 ಟಿಎಂಸಿ ಅಡಿ ನೀರು ಹರಿದಿರುವುದು ವಿಶೇಷ.

ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಕೆಆರ್‌.ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಸೇರಿದಂತೆ ನಾಲ್ಕು ಡ್ಯಾಮ್ ಗಳಿವೆ. ಇವುಗಳ ಪೈಕಿ ಕೆಆರ್‌ಎಸ್‌ ಡ್ಯಾಮ್ ದೊಡ್ಡ ಡ್ಯಾಮ್. ಕೆಆರ್.ಎಸ್. ಗೆ 49.45 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಇದೆ. ಹಾಸನದ ಹೇಮಾವತಿ ಜಲಾಶಯಕ್ಕೆ 37.10 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಇದೆ. ಹಾರಂಗಿ ಜಲಾಶಯಕ್ಕೆ 8.50 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಇದ್ದರೇ, ಕಬಿನಿ ಜಲಾಶಯಕ್ಕೆ 19.52 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಇದೆ. ಹೀಗೆ ನಾಲ್ಕು ಜಲಾಶಯಗಳಿಂದ ಒಟ್ಟಾರೆ 114.5 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಸೆಪ್ಟೆಂಬರ್ 2ರ ಇಂದು ನಾಲ್ಕು ಜಲಾಶಯಗಳಲ್ಲಿ 112 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ನಾಲ್ಕು ಜಲಾಶಯಗಳೂ ಶೇ.98 ರಷ್ಟು ಭರ್ತಿಯಾಗಿವೆ.

ಮೇಕೆದಾಟು ಬಳಿ ಡ್ಯಾಮ್ ನಿರ್ಮಾಣಕ್ಕೆ ಅಂಕಿಸಂಖ್ಯೆ ಬಲ

ಕರ್ನಾಟಕವು ಮಳೆ ಜಾಸ್ತಿ ಬಿದ್ದ ವರ್ಷಗಳಲ್ಲಿ ಹೆಚ್ಚಿನ ನೀರುನ್ನು ತಮಿಳುನಾಡಿಗೆ ಹರಿಸುತ್ತಿದೆ. ಆದರೇ, ತಮಿಳುನಾಡಿಗೂ ಮೆಟ್ಟೂರು, ಭವಾನಿಸಾಗರ ಸೇರಿದಂತೆ 3 ಜಲಾಶಯಗಳಲ್ಲಿ ಮಾತ್ರ ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಸಾಧ್ಯ. ಮೂರು ಡ್ಯಾಮ್ ಗಳು ಭರ್ತಿಯಾದ ಮೇಲೆ ತಮಿಳುನಾಡು ಸರ್ಕಾರವು ಡ್ಯಾಮ್ ನೀರುನ್ನು ಸಮುದ್ರಕ್ಕೆ ಹರಿಸುತ್ತಿದೆ. ಹೀಗಾಗಿ ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ಕರ್ನಾಟಕದಲ್ಲೇ ಮತ್ತೊಂದು ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿಟ್ಟುಕೊಂಡರೇ, ಸಮುದ್ರಕ್ಕೆ ಕಾವೇರಿ ನೀರು ಹರಿಯುವುದನ್ನು ತಪ್ಪಿಸಬಹುದು, ಜೊತೆಗೆ ತಮಿಳುನಾಡಿಗೆ ನೀರು ಕೊರತೆಯಾದಾಗ ಮೇಕೆದಾಟು ಡ್ಯಾಂನಿಂದ ನೀರು ಹರಿಸಬಹುದು, ಹೀಗಾಗಿ ಮೇಕೆದಾಟು ಬಳಿ ಹೊಸ ಡ್ಯಾಂ ನಿರ್ಮಾಣದಿಂದ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೆ ಅನುಕೂಲ ಎನ್ನುವುದು ಕರ್ನಾಟಕದ ವಾದ. ಆದರೇ, ಕಾವೇರಿ ನದಿ ನೀರಿನ ಸಹಜ ಹರಿವಿಗೆ ಮೇಕೆದಾಟು ಬಳಿ ಹೊಸ ಡ್ಯಾಂ ನಿರ್ಮಾಣದಿಂದ ತಡೆಯಾಗಲಿದೆ ಎಂದು ತಮಿಳುನಾಡು ರಾಜ್ಯ ಸರ್ಕಾರ ಆಕ್ಷೇಪಿಸುತ್ತಿದೆ.

ಈಗ ಕಳೆದ 5 ವರ್ಷಗಳಲ್ಲಿ ಕರ್ನಾಟಕವು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗಿಂತ ಹೆಚ್ಚಿನ ಪ್ರಮಾಣದ ಕಾವೇರಿ ನೀರು ಅನ್ನೇ ತಮಿಳುನಾಡಿಗೆ ಹರಿಸಿದೆ. ತಮಿಳುನಾಡು ಕೂಡ ಈ ಹೆಚ್ಚುವರಿ ನೀರು ಅನ್ನು ತನ್ನ ಡ್ಯಾಂಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗದೇ, ಸಮುದ್ರಕ್ಕೆ ಹರಿಸಿದೆ. ಹೀಗಾಗಿ ಈ ಅಂಶಗಳನ್ನೇ ಈಗ ಕರ್ನಾಟಕ ರಾಜ್ಯ ಸರ್ಕಾರವು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ಗಮನಕ್ಕೆ ತಂದು ಮೇಕೆದಾಟು ಬಳಿ ಡ್ಯಾಂ ನಿರ್ಮಾಣಕ್ಕೆ ಅನುಮತಿ ಪಡೆದುಕೊಳ್ಳಲು ಯತ್ನಿಸುತ್ತಿದೆ.

ಜೂನ್ 1 ರಿಂದ ಮೇ ತಿಂಗಳ 30ರವರೆಗಿನ ಅವಧಿಯನ್ನು ಜಲ ವರ್ಷ ಎಂದು ಪರಿಗಣಿಸಲಾಗುತ್ತೆ. ಜೂನ್ 1ರ ಅಸುಪಾಸಿನಲ್ಲಿ ದಕ್ಷಿಣ ಭಾರತದಲ್ಲಿ ಮಾನ್ಸೂನ್ ಮಳೆ ಆರಂಭವಾಗುತ್ತೆ. ಜೂನ್ ಮೊದಲ ವಾರದ ಹೊತ್ತಿಗೆ ಮಾನ್ಸೂನ್ ಮಳೆ ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡುತ್ತೆ. ದಕ್ಷಿಣ ಭಾರತದಲ್ಲಿ ನೆರೆಹೊರೆಯ ರಾಜ್ಯಗಳ ನಡುವೆ ನದಿ ನೀರು ಹಂಚಿಕೆಯ ವಿವಾದಗಳಿವೆ. ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಶತಮಾನಗಳಿಂದ ಕಾವೇರಿ ನದಿ ನೀರು ಹಂಚಿಕೆಯ ವಿವಾದ ಇದೆ.

ಈಗ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಪ್ರತಿ ವರ್ಷ ಕಾವೇರಿ ವಿವಾದದಲ್ಲಿ ಮೇಲ್ಬಾಗದ ರಾಜ್ಯವಾಗಿರುವ ಕರ್ನಾಟಕವು ಕೆಳಭಾಗದ ತಮಿಳುನಾಡು ರಾಜ್ಯಕ್ಕೆ ಬಿಳಿಗುಂಡ್ಲು ಜಲಮಾಪಕದ ಮೂಲಕ ವರ್ಷಕ್ಕೆ 177.25 ಟಿಎಂಸಿ ನೀರು ಹರಿಸಬೇಕು. ಆದರೆ, ಮಳೆ ಕೊರತೆಯಾದ ವರ್ಷದಲ್ಲಿ ಸಂಕಷ್ಟವನ್ನು ಎರಡೂ ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಬೇಕು ಎನ್ನುವುದು ಕರ್ನಾಟಕದ ವಾದ. ಹೀಗಾಗಿ ಮಳೆ ಕೊರತೆಯಾದ ವರ್ಷದಲ್ಲಿ ಇರುವ ಕಾವೇರಿ ನೀರುನ್ನು ಸಮಾನವಾಗಿ ಎರಡು ರಾಜ್ಯಗಳ ನಡುವೆ ಹಂಚುವ ಮಾನದಂಡವನ್ನು ಸುಪ್ರೀಂಕೋರ್ಟ್ ಅನುಸರಿಸುತ್ತಿದೆ. ಆದರೇ, ಇದುವರೆಗೂ ಕಾವೇರಿ ನದಿ ನೀರು ಸಂಕಷ್ಟ ನೀರು ಹಂಚಿಕೆ ಸೂತ್ರ ಅಂತಿಮವಾಗಿಲ್ಲ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ