ಮೈಸೂರು: ಹೃದಯಾಘಾತದಿಂದ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ನಿಧನ

ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ದೆಹಲಿಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆ ಮೈಸೂರಿನ ಕೆಆರ್​ಎಸ್ ರಸ್ತೆಯ ಅಪಾರ್ಟ್​ಮೆಂಟ್​ವೊಂದರ ಫ್ಲಾಟ್​ನಲ್ಲಿ ವಾಸಿಸುತ್ತಿದ್ದರು. 68 ವಯಸ್ಸಿನ ಅವರಿಗೆ ಇಂದು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಮೈಸೂರು: ಹೃದಯಾಘಾತದಿಂದ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ನಿಧನ
ಹೃದಯಾಘಾತದಿಂದ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ನಿಧನ
Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2023 | 5:08 PM

ಮೈಸೂರು, ಸೆ.08: ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್(Ajith Ninan) (68) ಇಂದು (ಸೆ.08) ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೈದರಾಬಾದಿನಲ್ಲಿ ಜನಿಸಿದ ಅವರು, ಚೆನ್ನೈನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ನಂತರ ವ್ಯಂಗ್ಯಚಿತ್ರಕಾರ(Cartoonist) ರಾದರು. ಪ್ರಮುಖ ಪತ್ರಿಕೆಗಳಾದ ಇಂಡಿಯಾ ಟುಡೆ, ಔಟ್ ಲುಕ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ್ದಾರೆ. ಇಂಡಿಯಾ ಟುಡೆ ಪತ್ರಿಕೆ ಬಳಗದ ‘ಟಾರ್ಗೆಟ್’ ಎಂಬ ಮಕ್ಕಳ ಪತ್ರಿಕೆಗೆ ‘ಡಿಟೆಕ್ಟಿವ್‌ ಮೂಚುವಾಲಾ’ ಎಂಬ ಸರಣಿ ವ್ಯಂಗ್ಯಚಿತ್ರಗಳನ್ನು ಇವರು ಪ್ರಕಟಿಸಿದರು. ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನಿತ್ಯ ವ್ಯಂಗ್ಯಚಿತ್ರ ಬರೆಯುತ್ತಿದ್ದರು.

ಇನ್ನು ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ದೆಹಲಿಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆ ಮೈಸೂರಿನ ಕೆಆರ್​ಎಸ್ ರಸ್ತೆಯ ಅಪಾರ್ಟ್​ಮೆಂಟ್​ವೊಂದರ ಫ್ಲಾಟ್​ನಲ್ಲಿ ವಾಸಿಸುತ್ತಿದ್ದರು. 68 ವಯಸ್ಸಿನ ಅವರಿಗೆ ಇಂದು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಇನ್ನು ಅವರ ಅಂತ್ಯಕ್ರಿಯೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಭಾನುವಾರ (ಸೆಪ್ಟೆಂಬರ್ 10) ಮಧ್ಯಾಹ್ನ ಒಂದು ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Fri, 8 September 23