Mysuru News: ಇಂದಿನಿಂದ ಮೈಸೂರಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ಅಭಿಯಾನ ಶುರು
60 ವರ್ಷ ಮೇಲ್ಪಟ್ಟ ಹಾಗೂ ಕೊಮಾರ್ಬಿಟಿಸ್ ಆರೋಗ್ಯ ಸಮಸ್ಯೆ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರಿಗೆ ಪ್ರಿಕಾಶನರಿ ವ್ಯಾಕ್ಸಿನ್ ನೀಡಲು ಮುಂದಾಗಿದೆ. ಮೈಸೂರು ಆರೋಗ್ಯ ಅಧಿಕಾರಿಗಳು ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ಅಭಿಯಾನಕ್ಕೆ ಇಂದು ಚಾಲನೆ ನೀಡಲಿದ್ದಾರೆ.
ಮೈಸೂರು, ಜ.04: ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ದಿನದಿಂದ ದಿನಕ್ಕೆ ತನ್ನ ವಿರೂಪ ತೋರಿಸುತ್ತಿದೆ. ರಾಜ್ಯದಲ್ಲಿ ಕೊರೊನಾ (Coronavirus) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮೆಲ್ಲನೆ ಏರಿಕೆಯತ್ತ ಹೆಜ್ಜೆ ಇಡ್ತೀದ್ದು ಸರ್ಕಾರಕ್ಕೆ ಟೆನ್ಷನ್ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತೆ ರಾಜ್ಯದಲ್ಲಿ ವ್ಯಾಕ್ಸಿನ್ (Covid Vaccine Drive) ಮೊರೆ ಹೋಗಿದ್ದು ಮೈಸೂರು ಆರೋಗ್ಯ ಅಧಿಕಾರಿಗಳು (Health Department) ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಿದ್ದಾರೆ.
ಮೈಸೂರು ಆರೋಗ್ಯ ಅಧಿಕಾರಿಗಳು ಈಗಾಗಲೇ ಕಾರ್ಬೆವಾಕ್ಸ್ ಲಸಿಕೆಯ 1,300 ಡೋಸ್‌ಗಳನ್ನು ಪಡೆದಿದ್ದಾರೆ. ಈ ಅಭಿಯಾನವನ್ನು ಆರೋಗ್ಯ ಕಾರ್ಯಕರ್ತರು ನಡೆಸಲಿದ್ದು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮತ್ತು ಕೊಮೊರ್ಬಿಡಿಟಿ ಹೊಂದಿರುವ ಜನರಿಗೆ ಈ ಲಸಿಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಲಸಿಕೆಯನ್ನು ಹಾಕಲಾಗುತ್ತಿದ್ದು ಆಸಕ್ತರು ಲಸಿಕೆಯನ್ನು ಹಾಕಿಸಿಕೊಳ್ಳಬಹುದು.
ಇದನ್ನೂ ಓದಿ: ರಾಜ್ಯದಲ್ಲಿಂದು 260 ಜನರಿಗೆ ಕೊರೊನಾ ಸೋಂಕು ದೃಢ; ಕೊಪ್ಪಳದಲ್ಲಿ ಓರ್ವ ಬಲಿ
ಹೆಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲೂಕುಗಳಿಗೆ ತಲಾ 100 ಡೋಸ್, ನಂಜನಗೂಡು ಮತ್ತು ಟಿ.ನರಸೀಪುರಕ್ಕೆ ತಲಾ 120 ಡೋಸ್ ಹಂಚಲಾಗಿದೆ. ಚೆಲುವಾಂಬ ಆಸ್ಪತ್ರೆ ಮತ್ತು ಮೈಸೂರು ಜಿಲ್ಲಾ ಆಸ್ಪತ್ರೆ ತಲಾ 200 ಡೋಸ್‌ಗಳನ್ನು ಪಡೆದಿವೆ. ಎಸ್‌ಎಂಟಿ ಹೆರಿಗೆ ಆಸ್ಪತ್ರೆ ಮತ್ತು ರಾಜೇಂದ್ರನಗರ UPHCಗೆ ತಲಾ 100, ಕ್ಯಾತಮಾರನಹಳ್ಳಿ UPHCಗೆ 60 ಡೋಸ್ ನೀಡಲಾಗಿದೆ.
ಕೊರೊನಾ ಬಗೆಗಿನ ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಸ್ವಯಂ ಪ್ರೇರಿತವಾಗಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳನ್ನು ಈ ಹಿಂದೆ ತೆಗೆದುಕೊಂಡಿದ್ದರೂ ಸಹ, ಅರ್ಹ ನಿವಾಸಿಗಳು ಕಾರ್ಬೆವಾಕ್ಸ್ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ JN.1 ರೂಪಾಂತರಿ ಹಾವಳಿ ಹಿನ್ನಲೆ ಆರೋಗ್ಯ ಇಲಾಖೆ ಮತ್ತೆ ವ್ಯಾಕ್ಸಿನ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅಂತೆ ಮತ್ತೆ ವ್ಯಾಕ್ಸಿನ್ ನೀಡಲು ಸರ್ಕಾರ ಮುಂದಾಗಿದ್ದು ರಾಜ್ಯದಲ್ಲಿನ ಕೊವಿಡ್ ಸಾವುಗಳನ್ನ ತಡೆಯಲು ಮತ್ತೆ ವ್ಯಾಕ್ಸಿನ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ನಿತ್ಯ ಕೇಸ್ ಗಳು ಶತಕದ ಗಡಿ ದಾಟಿ ದಾಖಲಾಗ್ತೀವೆ ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಜ್ಞರ ಸೂಚನೆ ಮೇರೆಗೆ ಫ್ರಂಟ್ ಲೈನ್ ವಾರಿಯರ್ಸ್, ಹೆಲ್ತ್ ವರ್ಕ್ಸ್, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸೇರಿದಂತೆ ಪ್ರಿಕಾಶನರಿ ಲಸಿಕೆಯನ್ನ ಅಹರ್ತೆ ಪಡೆದಿರುವವರಿಗೆ ಲಸಿಕೆ ನೀಡಲು ಸರ್ಕಾರ ಮಂದಾಗಿದೆ.
60 ವರ್ಷ ಮೇಲ್ಪಟ್ಟ ಹಾಗೂ ಕೊಮಾರ್ಬಿಟಿಸ್ ಆರೋಗ್ಯ ಸಮಸ್ಯೆ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರಿಗೆ ಪ್ರಿಕಾಶನರಿ ವ್ಯಾಕ್ಸಿನ್ ನೀಡಲು ಮುಂದಾಗಿದೆ. ಕೋವಿಶಿಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯನ್ನ 2 ಡೋಸ ಪಡೆದು 6 ತಿಂಗಳು ಅಥವಾ 26 ವಾರ ಪೂರೈಸಿರುವರು ಈ ಲಸಿಕೆಗೆ ಅರ್ಹತೆ ಪಡೆದಿದ್ದಾರೆ.. ರಾಜ್ಯದಲ್ಲಿ ಒಟ್ಟು 1.5 ಕೋಟಿ ಜನರು ಮುನ್ನೆಚ್ಚರಿಕೆ ಲಸಿಕೆ ಪಡೆಯಲು ಅಹರ್ತೆ ಪಡೆದಿದ್ದು ಕೇವಲ 27% ಜನರು ಮಾತ್ರ ಮೂರನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಸದ್ಯ ಸರ್ಕಾರ ಆರಂಭದಲ್ಲಿ 30 ಸಾವಿರ ಪ್ರಿಕಾಶನರಿ ಲಸಿಕೆ ನೀಡಲು ಮುಂದಾಗಿದೆ. ಜೊತೆಗೆ ಆರೋಗ್ಯ ಸಿಬ್ಬಂದಿಗಳಿಗೆ ಪ್ಲೂ ವ್ಯಾಕ್ಸಿನ್ ನೀಡಲು ಸರ್ಕಾರ ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊವಿಡ್ ಕಟ್ಟಹಾಕಲು ಸಾವಿನ ಸಂಖ್ಯೆ ನಿಯಂತ್ರಿಸಲು ಆರೋಗ್ಯ ಇಲಾಖೆ ವ್ಯಾಕ್ಸಿನ್ ಮೊರೆ ಹೋಗಿದ್ದು ಕೋರ್ಮಾಬಿಟಿಸ್ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮುನ್ನೆಚ್ಚರಿಕಾ ಲಸಿಕೆಯನ್ನ ಉಚಿತವಾಗಿ ನೀಡಲು ಮುಂದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ