ರಾಜ್ಯದಲ್ಲಿಂದು 260 ಜನರಿಗೆ ಕೊರೊನಾ ಸೋಂಕು ದೃಢ; ಕೊಪ್ಪಳದಲ್ಲಿ ಓರ್ವ ಬಲಿ
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,497 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 260 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಬೆಂಗಳೂರಿನಲ್ಲಿಯೇ ಇಂದು ಬರೊಬ್ಬರಿ 134 ಜನರಿಗೆ ಕೋವಿಡ್ ಕೇಸ್(Covid Case) ಬೆಳಕಿಗೆ ಬಂದಿದೆ.
ಬೆಂಗಳೂರು, ಜ.03: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,497 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 260 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಬೆಂಗಳೂರಿನಲ್ಲಿಯೇ ಇಂದು ಬರೊಬ್ಬರಿ 134 ಜನರಿಗೆ ಕೋವಿಡ್ ಕೇಸ್(Covid Case) ಬೆಳಕಿಗೆ ಬಂದಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾಗೆ 39 ವರ್ಷದ ವ್ಯಕ್ತಿ ಬಲಿಯಾಗಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.46 ರಷ್ಷಿದ್ದು, 1,175 ಜನರಲ್ಲಿ ಕೊರೊನಾ ಸಕ್ರಿಯ ಕೇಸ್ಗಳಿವೆ. ಜೊತೆಗೆ ಇವತ್ತು 228 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಷೇಷ್ಟು?
ರಾಜ್ಯದಲ್ಲಿ ಇಂದು 260 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಅದರಲ್ಲಿ ಬೆಂಗಳೂರಿನಲ್ಲಿಯೇ 134 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ ಬಾಗಲಕೋಟೆ 4, ಬಳ್ಳಾರಿ 2, ಬೆಂಂಗಳೂರು ಗ್ರಾಮಾಂತರ 20, ಚಾಮರಾಜನಗರ 4, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 2 ಕೇಸ್ ಗಳು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ರೋಗ ಲಕ್ಷಣ ಇದ್ದರೆ ಕೊರೊನಾ ಟೆಸ್ಟ್: ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ
ಇನ್ನು ದಕ್ಷಿಣ ಕನ್ನಡ 9, ದಾವಣಗೆರೆ 3, ಧಾರವಾಡ 9, ಗದಗ 1, ಹಾಸನ 2, ಕೋಲಾರ 1, ಕೊಪ್ಪಳ 1, ಮಂಡ್ಯ 8, ಮೈಸೂರು 24, ರಾಯಚೂರು 1, ರಾಮನಗರ 7, ಶಿವಮೊಗ್ಗ 11, ತುಮಕೂರು 6, ಉತ್ತರ ಕನ್ನಡ 4 ಹಾಗೂ ವಿಜಯನಗರ ಜಿಲ್ಲೆಯಲ್ಲಿ ಇಂದು 3 ಕೊವಿಡ್ ಕೇಸ್ ಪತ್ತೆಯಾಗಿದೆ. ಜೊತೆಗೆ ಇವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ