ಕೊವಿಡ್ ಕರ್ತವ್ಯದಲ್ಲಿದ್ದ ವೈದ್ಯರಿಗೆ ಸಂಬಳ ನೀಡದೆ ಒಟ್ಟು ₹1.26 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ವೈದ್ಯರ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Sep 20, 2021 | 11:13 AM

ಎಂ.ಬಿ.ಬಿ.ಎಸ್ ಮುಗಿಸಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯಲ್ಲಿದ್ದ 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು ಸರ್ಕಾರ ಕೋವಿಡ್ ಕರ್ತವ್ಯಕ್ಕಾಗಿ ನಿಯೋಜನೆ ಮಾಡಿಕೊಂಡಿತ್ತು. ಆದ್ರೆ ಈಗ ಸಂಬಳ ಕೊಡದ ಹಿನ್ನೆಲೆಯಲ್ಲಿ ಸದ್ಯ ಇಂದಿನಿಂದ ಆ ಎಲ್ಲಾ ವೈದ್ಯರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಕೊವಿಡ್ ಕರ್ತವ್ಯದಲ್ಲಿದ್ದ ವೈದ್ಯರಿಗೆ ಸಂಬಳ ನೀಡದೆ ಒಟ್ಟು ₹1.26 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ವೈದ್ಯರ ಪ್ರತಿಭಟನೆ
ಕೊವಿಡ್ ಕರ್ತವ್ಯದಲ್ಲಿದ್ದ ವೈದ್ಯರಿಗೆ ಸಂಬಳ ನೀಡದೆ ಒಟ್ಟು ₹1.26 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ವೈದ್ಯರ ಪ್ರತಿಭಟನೆ
Follow us on

ಮೈಸೂರು: ಕೊವಿಡ್ ಕರ್ತವ್ಯದಲ್ಲಿದ್ದ ವೈದ್ಯರಿಗೆ ಸರ್ಕಾರ ವೇತನ ನೀಡದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಎಂಬಿಬಿಎಸ್ ಮುಗಿಸಿ 1 ವರ್ಷ ಕಡ್ಡಾಯ ಗ್ರಾಮೀಣ ಸೇವೆಯಲ್ಲಿದ್ದ 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು ಸರ್ಕಾರ ಕೊವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿತ್ತು. ಆದ್ರೆ ಈಗ ಅವರಿಗೆ ವೇತನ ನೀಡಲ್ಲ. ಹೀಗಾಗಿ ವೈದ್ಯರು ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.

ಕೊವಿಡ್ ಕರ್ತವ್ಯಕ್ಕೆ ಮೈಸೂರು ಮೆಡಿಕಲ್ ಕಾಲೇಜಿನ 126 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ವೈದ್ಯರಿಗೆ ತಲಾ 40 ಸಾವಿರ ರೂಪಾಯಿ ವೇತನ ನಿಗದಿ ಮಾಡಲಾಗಿತ್ತು. ಜೊತೆಗೆ ಕೊವಿಡ್ ವಿಶೇಷ ಕರ್ತವ್ಯಕ್ಕೆ ತಿಂಗಳಿಗೆ 10 ಸಾವಿರದಂತೆ ಹೆಚ್ಚುವರಿಯಾಗಿ ನೀಡುವ ಭರವಸೆ ನೀಡಲಾಗಿತ್ತು. ಆದ್ರೆ ಸರ್ಕಾರ ಜುಲೈ, ಆಗಸ್ಟ್ ತಿಂಗಳ ವೇತನವನ್ನ ಪಾವತಿಸಿಲ್ಲ. ಮೈಸೂರು ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ 126 ವೈದ್ಯರಿಗೆ ತಲಾ 1 ಲಕ್ಷ ರೂಪಾಯಿಯಂತೆ ಒಟ್ಟು ₹1.26 ಕೋಟಿ ವೇತನವನ್ನು ಸರ್ಕಾರ ಪಾವತಿಸಬೇಕಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಸುಳ್ಳು ಹೇಳ್ಕೊಂಡು ಅಧಿಕಾರ ಮಾಡ್ತಿದೆ; ಚಿನ್ನವನ್ನೆಲ್ಲಾ ಬ್ಯಾಂಕ್​ನಲ್ಲಿ ಇಟ್ಟು ಜನ ಜೀವನ ಮಾಡಬೇಕಿದೆ: ಸಿದ್ದರಾಮಯ್ಯ

ಮಿಂಟೋ ಆಸ್ಪತ್ರೆ ವೈದ್ಯರ ಪ್ರತಿಭಟನೆ: ಹಲವು ಜಿಲ್ಲೆಗಳಲ್ಲಿ ಇಂದು ಒಪಿಡಿ ಬಂದ್