ಮೈಸೂರು: ತಹಶೀಲ್ದಾರ್ ಹುದ್ದೆಯಿಂದ ಮೋಹನ್‌ ಕುಮಾರ್ ಕೆಳಗಿಳಿಸಲು ಕೆಎಟಿ ಆದೇಶ

ಗ್ರೇಡ್ 1 ತಹಶೀಲ್ದಾರ್ ಹುದ್ದೆಗೆ ಮೋಹನ್ ಕುಮಾರ್ ಅನರ್ಹ ಎಂದು ಸದ್ಯ ಕೆಎಟಿ ಆದೇಶ ಹೊರಡಿಸಿದ್ದು, ಉಪ ವಿಭಾಗಾಧಿಕಾರಿಗೆ ಅಧಿಕಾರ ಕೊಟ್ಟು, ಕಂದಾಯ ಇಲಾಖೆಗೆ ವಾಪಸ್ ಹೋಗುವಂತೆ ಆದೇಶ ನೀಡಿದೆ.

ಮೈಸೂರು: ತಹಶೀಲ್ದಾರ್ ಹುದ್ದೆಯಿಂದ ಮೋಹನ್‌ ಕುಮಾರ್ ಕೆಳಗಿಳಿಸಲು ಕೆಎಟಿ ಆದೇಶ
ಮೋಹನ್ ಕುಮಾರ್‌

ಮೈಸೂರು: ಮೋಹನ್ ಕುಮಾರ್‌ರನ್ನು ತಹಶೀಲ್ದಾರ್ ಹುದ್ದೆಯಿಂದ ಕೆಳಗಿಳಿಸುವಂತೆ ಕೆಎಟಿ (Karnataka Appellate Tribunal)  ಆದೇಶ ಹೊರಡಿಸಿದೆ. ಕೆ.ಆರ್.ನಗರ ಚುಂಚನಕಟ್ಟೆ ನಾಡಕಚೇರಿಯಲ್ಲಿ ಆರ್‌ಐ ಆಗಿದ್ದ ಮೊಹನ್ ಕುಮಾರ್​ಗೆ, ಜುಲೈ 23ರಂದು ರಾಜ್ಯ ಸರ್ಕಾರ ಬಡ್ತಿ ನೀಡಿ ಗ್ರೇಡ್ 2 ತಹಶೀಲ್ದಾರ್ ಮಾಡಿತ್ತು. ಇದರ ನಡುವೆ ಗ್ರೇಡ್ 1 ತಹಶೀಲ್ದಾರ್ ಹುದ್ದೆಯಲ್ಲಿ ಕೂಡ ಕೂರಿಸಿತ್ತು. ಹೀಗಾಗಿ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಹಿಂದಿನ ತಹಶೀಲ್ದಾರ್ ಬಸವರಾಜು, ಕೆಎಟಿ ಮೆಟ್ಟಿಲೇರಿದ್ದರು.

ಇದನ್ನು ಪರಿಶೀಲಿಸಿದ ಕೆಎಟಿ (ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ)  ಗ್ರೇಡ್ 1 ತಹಶೀಲ್ದಾರ್ ಹುದ್ದೆಗೆ ಮೋಹನ್ ಕುಮಾರ್ ಅನರ್ಹ ಎಂದು ಆದೇಶ ಹೊರಡಿಸಿದೆ. ಅಲ್ಲದೆ ಉಪ ವಿಭಾಗಾಧಿಕಾರಿಗೆ ಅಧಿಕಾರ ಕೊಟ್ಟು, ಕಂದಾಯ ಇಲಾಖೆಗೆ ವಾಪಸ್ ಹೋಗುವಂತೆ ಆದೇಶ ನೀಡಿದೆ.

ಬೆಂಗಳೂರು: ಬೇಜವಾಬ್ದಾರಿ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿ: ಶಾಸಕ ರಮೇಶ್ ಕುಮಾರ್
ಅವೈಜ್ಞಾನಿಕ ರೋಡ್ ಹಂಪ್‌ಗಳು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಸದನದಲ್ಲಿ ಶಾಸಕ ರಮೇಶ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಹೋಗುವುದಿಲ್ಲ. ಒಬ್ಬ ಜೆಇ, ಇಇ ಯಾರೂ ಸ್ಥಳ ಪರಿಶೀಲನೆ ಮಾಡಲ್ಲ. ಬೇಕಾಬಿಟ್ಟಿಯಾಗಿ ರೋಡ್ ಹಂಪ್‌ಗಳನ್ನ ಹಾಕಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಇಂದು ನಡೆದ ಸದನದಲ್ಲಿ ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಮಾತನಾಡುತ್ತ ಅವರು, ಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಬರಬೇಕಾದ್ರೆ ಹಂಪ್ ಇರಲಿ. ಆದರೆ ಮುಖ್ಯ ರಸ್ತೆಯಲ್ಲಿ ಸ್ಪೀಡ್ ಹಂಪ್‌ಗಳನ್ನು ಹಾಕ್ತಾರೆ. ಬೇಜವಾಬ್ದಾರಿ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕು ಎಂದು ರಮೇಶ್ ಕುಮಾರ್ ಪ್ರಶ್ನೆ ಎತ್ತಿದ್ರು. ಇನ್ನು ಈ ವೇಳೆ ರಮೇಶ್ ಕುಮಾರ್ ಪ್ರಶ್ನೆಗೆ ಸ್ಪೀಕರ್ ಪ್ರತಿಕ್ರಿಯೆ ನೀಡಿದ್ರು.

ಎಲ್ಲಾ ಕಡೆ ಸಮಸ್ಯೆ ಇದೆ, ನಾನು ಕೂಡ ಹಂಪ್ ಸಮಸ್ಯೆ ಬಗ್ಗೆ ಕೆಲವು ಅಧಿಕಾರಿಗಳನ್ನು ಕೇಳಿದೆ. ಹಳ್ಳಿ ಜನ, ಶಾಸಕರು ಒತ್ತಾಯ ಮಾಡಿದ್ದಕ್ಕೆ ಹಾಕಿದ್ದೇವೆ ಅಂತಾ ಹೇಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರೆಂರು ಸ್ಪೀಕರ್ ಕಾಗೇರಿ ಉತ್ತರಿಸಿದರು.

ಬಳಿಕ ಮತ್ತೆ ಪ್ರಶ್ನೆ ಮಾಡಿದ ಶಾಸಕ ರಮೇಶ್ ಕುಮಾರ್ ಯಾರೋ ಹೇಳಿದ ಮಾತು ಅಧಿಕಾರಿಗಳು ಏಕೆ ಕೇಳಬೇಕು? ಎಂದು ವಿಧಾನಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಮರುಪ್ರಶ್ನೆ ಮಾಡಿದ್ದಾರೆ. ನಾನು ನಾಲ್ಕು ಜನರ ತಲೆ ತೆಗೆಯಿರಿ ಅಂತೇನೆ ಕೇಳ್ತಾರಾ ಎಂದು ಅಧಿಕಾರಿಗಳ ಮೇಲೆ ರಮೇಶ್ ಕುಮಾರ್ ಗರಂ ಆಗಿದ್ದಾರೆ.

ಇದಕ್ಕೆ ಬರೀ ಉತ್ತರ‌ಕೊಟ್ಟರೇ ಹೇಗೆ?, ಸಂಜೆಯೊಳಗೆ ಅಧಿಕಾರಿಗಳನ್ನು ಸ್ಪಸ್ಪೆಂಡ್ ಮಾಡಿ, ಎಲ್ಲಾ ಹಂಪ್‌ಗಳು ಸೈಡ್‌ಗೆ ಹೋಗ್ತವೆ, ಏನು ಉತ್ತರ ಕೊಡ್ತಾರೆ ಅಧಿಕಾರಿಗಳು? ಅಧಿಕಾರಿಗಳ ಕಣ್ಣಿಗೆ ನಾವೇನು ಬಪೂನ್‌ಗಳ ತರಾ ಕಾಣ್ತೀವಾ?ಯಾರೋ ನಾಲ್ಕೈದು ಜನ ರೌಡಿಗಳು ಬಟನ್ ಬಿಚ್ಕೊಂಡು ಬರ್ತಾರೆ, ಅವರ ಮಾತು ಕೇಳ್ತಾರೆ ಎಂದು ಗರಂ ಆದ್ರು.

ಇದನ್ನೂ ಓದಿ:
ಕಾಬೂಲ್ ನಗರದ ಮಹಿಳಾ ಉದ್ಯೋಗಿಗಳಿಗೆ ಮನೆಯಲ್ಲೇ ಇರಿ ಎಂದು ಆದೇಶಿಸಿದ ತಾಲಿಬಾನ್

ಎರಡು ತಿಂಗಳಲ್ಲಿ ಸಾಹಿತ್ಯ ಪರಿಷತ್ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

Read Full Article

Click on your DTH Provider to Add TV9 Kannada