AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ; ಅಂಗಾಗ ದಾನದ ಮೂಲಕ ನಾಲ್ವರಿಗೆ ಜೀವದಾನ

ನವೆಂಬರ್ 04 ರಂದು ಹೇಮಂತ್ ಕುಮಾರ್ ತನ್ನ ತೋಟದಲ್ಲಿ ತೆಂಗಿ‌ನ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಬಳಿಕ ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಐಸಿಯುನಲ್ಲಿದ್ದ ಹೇಮಂತ್ ಕುಮಾರ್​ಗೆ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಕುಟುಂಬಸ್ಥರು ಅಂಗಾಗ ದಾನಕ್ಕೆ ಮುಂದಾಗಿದ್ದಾರೆ.

ಮೈಸೂರು: ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ; ಅಂಗಾಗ ದಾನದ ಮೂಲಕ ನಾಲ್ವರಿಗೆ ಜೀವದಾನ
ಹೆಮಂತ್​ ಕುಮಾರ್​ ಮತ್ತು ಕುಟುಂಬಸ್ಥರು
TV9 Web
| Edited By: |

Updated on: Nov 12, 2021 | 11:20 AM

Share

ಮೈಸೂರು: ತೆಂಗಿನ ಮರದಿಂದ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡು (Brain dead) ಸಾಯಲು ಆಗದೆ, ಬದುಕಲು ಆಗದ ಸ್ಥಿತಿಯಲ್ಲಿದ್ದಾನೆ. ಇಂತಹ ನೋವಿನಲ್ಲೂ ಮನೆಯವರು ಮಾನವೀಯತೆ ಮೆರೆದಿದ್ದಾರೆ. ಮಗನ ಸಾವು ಸಾರ್ಥಕವಾಗುವಂತೆ ಮಾಡಿ ನಾಲ್ವರ ಜೀವಕ್ಕೆ ನೆರವಾಗಿದ್ದಾರೆ. ಯುವಕನ ಹೆಸರು ಹೇಮಂತ್ ಕುಮಾರ್. ವಯಸ್ಸು 27 ವರ್ಷ. ಮೂಲತಃ ಮಂಡ್ಯ ಜಿಲ್ಲೆ ತೂಬಿನಕೆರೆ ನಿವಾಸಿ. ಹೇಮಂತ್ ಕುಮಾರ್ ಈಗ ಬದುಕುಳಿದಿಲ್ಲ. ಈತ ಸಾವನ್ನಪ್ಪಿದ್ದರು ನಾಲ್ಕು ಜನರಿಗೆ ಜೀವದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾನೆ. ನವೆಂಬರ್ 04 ರಂದು ಹೇಮಂತ್ ಕುಮಾರ್ ತನ್ನ ತೋಟದಲ್ಲಿ ತೆಂಗಿ‌ನ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಬಳಿಕ ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಐಸಿಯುನಲ್ಲಿದ್ದ ಹೇಮಂತ್ ಕುಮಾರ್​ಗೆ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಕುಟುಂಬಸ್ಥರು ಅಂಗಾಗ ದಾನಕ್ಕೆ ಮುಂದಾಗಿದ್ದಾರೆ.

ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಹೇಮಂತ್ ಮೊದಲಿನಂತಾಗುವುದು ಸಾಧ್ಯವಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಪುತ್ರನ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದರು. ಹೇಮಂತ್ ಕುಮಾರ್ ಹೃದಯ ಕವಾಟ, ಒಂದು ಕಿಡ್ನಿಯನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮತ್ತೊಂದು ಕಿಡ್ನಿ ಹಾಗೂ ಲಿವರ್ ಬೆಂಗಳೂರಿನಲ್ಲಿ ಅಪೋಲೋಗೆ ರವಾನೆ ಮಾಡಲಾಯ್ತು. ಇದೇ ವೇಳೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಮೃತ ಹೇಮಂತ್ ಕುಮಾರ್ ಮೃತದೇಹಕ್ಕೆ ವೈದ್ಯರು ಹಾಗೂ ಸಿಬ್ಬಂದಿ ವಿಶೇಷ ಗೌರವ ಸಲ್ಲಿದ್ದಾರೆ. ಇದು ಕುಟುಂಬಸ್ಥರ ಹೆಮ್ಮೆಗೂ ಕೂಡ ಕಾರಣವಾಗಿದೆ ಎಂದು ವೈದ್ಯ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಮೃತ ಹೇಮಂತ್ ಕುಮಾರ್ ತಾನು ಸಾವನ್ನಪ್ಪಿದ್ದರು ನಾಲ್ಕು ಮಂದಿಗೆ ಜೀವ ದಾನ ಮಾಡಿದ್ದಾನೆ. ಆ ಮೂಲಕ ಅಂಗಾಂಗ ದಾನವೇ ಶ್ರೇಷ್ಠ ದಾನ ಎಂದು ತೋರಿಸಿ ಸಾವಿನಲ್ಲೂ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ.

ವರದಿ: ರಾಮ್

ಇದನ್ನೂ ಓದಿ: ಕ್ಯಾನ್ಸರ್​ ಪೀಡಿತರಿಗಾಗಿ ಕೂದಲು ದಾನ; ಮಾಧುರಿ ದೀಕ್ಷಿತ್​ ಪುತ್ರ ರಿಯಾನ್​ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ

ಪುನೀತ್ ರಾಜ್‍ಕುಮಾರ್ ದಾರಿ ಹಿಡಿದ ಅಭಿಮಾನಿಗಳು, ಗಜೇಂದ್ರಗಡ ತಾಂಡದ 40 ಮಂದಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ