ಮೈಸೂರಿನಲ್ಲಿ ಮುಂದುವರೆದ ಮಳೆಯ ಆರ್ಭಟ: ಕುಸಿದು ಬಿದ್ದ ಮೋರಿಯ ಸೇವತುವೆ, ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ಪುಟಾಣಿ ಬಾಲಕಿ ಡ್ಯಾನ್ಸ್

ಮೈಸೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಭಾರಿ ಮಳೆಯಿಂದ ನಗರದ ಬೋಗಾದಿಯಲ್ಲಿ ಮೋರಿಯ ಸೇವತುವೆಯೊಂದು ಕುಸಿದು ಬಿದ್ದಿದೆ.

ಮೈಸೂರಿನಲ್ಲಿ ಮುಂದುವರೆದ ಮಳೆಯ ಆರ್ಭಟ: ಕುಸಿದು ಬಿದ್ದ ಮೋರಿಯ ಸೇವತುವೆ, ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ಪುಟಾಣಿ ಬಾಲಕಿ ಡ್ಯಾನ್ಸ್
ಸಾಂದರ್ಭಿಕ ಚಿತ್ರ
Edited By:

Updated on: May 17, 2022 | 1:14 PM

ಮೈಸೂರು: ಮೈಸೂರಿನಲ್ಲಿ (Mysore) ಮಳೆಯ (Rain) ಆರ್ಭಟ ಮುಂದುವರೆದಿದ್ದು, ಭಾರಿ ಮಳೆಯಿಂದ ನಗರದ ಬೋಗಾದಿಯಲ್ಲಿ ಮೋರಿಯ ಸೇವತುವೆಯೊಂದು ಕುಸಿದು ಬಿದ್ದಿದೆ. ನಿರಂತರ ಮಳೆಯಿಂದ ಮೋರಿಗಳು ತುಂಬಿ ಹರಿಯುತ್ತಿವೆ. ಮೋರಿಯ ನೀರು ಮನೆಗಳಿಗೆ ನುಗ್ಗಿದೆ ಇದರಿಂದ ಅವಾಂತರ ಸೃಷ್ಟಿಯಾಗಿದೆ. ಮನೆಯಿಂದ ನೀರು ತೆಗೆದು ತೆಗೆದು ಜನರು ಹೈರಾಣಾಗಿದ್ದಾರೆ.

ಇನ್ನು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಲಕ್ಷ್ಮೀಕಾಂತ ರೆಡ್ಡಿ ಬರುತ್ತಿದ್ದಂತೆ ಸ್ಥಳೀಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆ ಆದಾಗ ಮಾತ್ರ ಬರುತ್ತೀರಾ ಏನು ಮಾಡಲ್ಲ ಅಂತಾ ಸ್ಥಳಿಯರು ಆಯುಕ್ತರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಮಹಡಿ ಮೇಲೆ ನಿಂತ ನೀರಿನಲ್ಲಿ ಪುಟ್ಟ ಮಗುವಿನ ಆಟ

ಇದನ್ನೂ ಓದಿ
ರಸ್ತೆ ಮಧ್ಯದಲ್ಲಿಯೇ ಹಾವುಗಳ ಮಿಲನ: ದೊಡ್ಡ ಹಾವುಗಳನ್ನು ಕಂಡು ಹೆದರಿದ ಜನ
ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ಯಾವುದು? ಇದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದು!
Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ಬೆನ್ನಲ್ಲೇ ಚರ್ಚೆಗೆ ಬಂತು ಎಸ್​ಎಲ್ ಭೈರಪ್ಪ ಬರೆದ ಆವರಣ ಕಾದಂಬರಿ
10ನೇ ತರಗತಿ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆಗೆ ವಿರೋಧ ; ಶಿಕ್ಷಣ ಇಲಾಖೆ ದೇಶದ್ರೋಹಿಯ ಭಾಷಣ ಸೇರಿಸಿದೆ ಕ್ಯಾಂಪಸ್ ಫ್ರಂಟ್ ಸಂಘಟನೆಯ ಆರೋಪ

ಮೈಸೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮೈಸೂರಿನ ಆರ್ ಎಸ್ ನಾಯ್ಡ ನಗರದ ಮೊದಲನೇ ಮಹಡಿ ಮೇಲೆ ನೀರು ನಿಂತಿದೆ. ಮಹಡಿ ಮೇಲೆ ನಿಂತ ನೀರಿನಲ್ಲಿ ಪುಟ್ಟ ಮಗುವೊಂದು ಆಟವಾಡುತ್ತಿದೆ. ನೀರಿನಲ್ಲಿ ಓಡಾಡುತ್ತ ಎಂಜಾಯ್ ಮಾಡುತ್ತಿರುವ ಬಾಲಕ ವಿಡಿಯೋ ಎಲ್ಲಡೆ ವೈರಲ್ ಆಗಿದೆ.

ಮಳೆ ನೀರಲ್ಲಿ ಪುಟಾಣಿಯ ಸಂಭ್ರಮ

ಹಾಗೇ ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ಪುಟಾಣಿ ಬಾಲಕಿ ಕುಣಿದು ಕುಪ್ಪಳಿಸಿದ್ದಾಳೆ. ಮೈಸೂರಿನ ಆನಂದನಗರದ ರಸ್ತೆಯಲ್ಲಿ ನಿಂತಿರುವ ಮಳೆಯ ನೀರಿನಲ್ಲಿ ಬಾಲಕಿ ಕುಣಿದು ಕುಪ್ಪಳಿಸಿದ್ದಾಳೆ. ಅಲ್ಲದೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಾಲಕಿ ಸಡಗರ ಪಟ್ಟಿದ್ದಾಳೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:14 pm, Tue, 17 May 22