Home alone woman Murder: ಮದುವೆಯಾಗಿ 26 ವರ್ಷವಾಗಿತ್ತು, ಮಕ್ಕಳಿರಲಿಲ್ಲ, ಗೃಹಿಣಿಯ ಹತ್ಯೆ ಮಾಡಿ ಹಣ ಒಡವೆ ದೋಚಿರುವ ಹಂತಕರು
Mysore Lady Murder: ದತ್ತು ಮಗಳು ಮೇಘಾ ಶಾಲೆಯಿಂದ ಬಂದ ನಂತರ ಮಂಜುಳಾ ಕೊಲೆಯಾಗಿರುವುದು ಗೊತ್ತಾಗಿದೆ. ಮಂಜುಳಾ ಕುತ್ತಿಗೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊಲೆ ಮಾಡಿ ಮನೆಯಲ್ಲಿದ್ದ ನಗದು ಹಾಗೂ ಒಡವೆ ದೋಚಲಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳ್ಳತನ ಪ್ರಕರಣಗಳು ಜನರ ನಿದ್ದೆಗೆಡಿಸಿದೆ. ಈ ಮಧ್ಯೆ, ಮೊನ್ನೆ ಬುಧವಾರ ನಡೆದಿರುವ ಒಂಟಿ ಮಹಿಳೆಯ ಕೊಲೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಮೇಲಿನ ಪೋಟೋದಲ್ಲಿರುವವರು ಮಂಜುಳಾ. ಮೈಸೂರಿನ ಕುವೆಂಪುನಗರದ ನಿವಾಸಿ. ಪತಿ ನಾಗರಾಜ್ ಎಸ್ ಟಿ ಅಭಿವೃದ್ಧಿ ಮಂಡಳಿಯ ಮ್ಯಾನೇಜರ್ ಆಗಿದ್ದಾರೆ. ಇವರ ಮದುವೆಯಾಗಿ 26 ವರ್ಷವಾಗಿತ್ತು. ಇವರಿಗೆ ಮಕ್ಕಳಿರಲಿಲ್ಲ. ಆ ಕಾರಣಕ್ಕಾಗಿ ನಾಗರಾಜ್ ತನ್ನ ಅಣ್ಣನ ಮೊಮ್ಮಗಳನ್ನು ದತ್ತು ಪಡೆದಿದ್ದರು. ಖುಷಿ ಖುಷಿಯಾಗಿದ್ರು. ಇದೀಗ ಮಂಜುಳಾ ನೆನಪು ಮಾತ್ರ. ಮನೆಯಲ್ಲಿ ಒಂಟಿಯಾಗಿದ್ದ (Home alone woman) ಮಂಜುಳಾ ಅವರನ್ನು ಕೊಲೆ ಮಾಡಲಾಗಿದೆ.
ಮಂಜುಳಾ ಪತಿ ನಾಗರಾಜು ಮೈಸೂರು ಜಿಲ್ಲೆ ಹೆಚ್ ಡಿ ಕೋಟೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದತ್ತು ಮಗಳು 9 ವರ್ಷದ ಮೇಘಾ ಮೂರನೇ ತರಗತಿ ಓದುತ್ತಿದ್ದಳು. ಪ್ರತಿ ದಿನ ಮಗಳು ಶಾಲೆಗೆ ಹೋದ ನಂತರ ಪತಿ ಕೆಲಸಕ್ಕೆ ಹೋಗುತ್ತಿದ್ದರು. ನಂತರ ಮಂಜುಳಾ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಈ ಬಗ್ಗೆ ಗೊತ್ತಿರುವವರೇ ಮಂಜುಳಾ ಕೊಲೆ ಮಾಡಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಹಾಸನ – ಆಗಿಲೆ ಗ್ರಾಮದ ಕುಂತಿ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿ
ಮೊನ್ನೆ ಬುಧವಾರ ಸಂಜೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ದತ್ತು ಮಗಳು ಮೇಘಾ ಶಾಲೆಯಿಂದ ಬಂದ ನಂತರ ಮಂಜುಳಾ ಕೊಲೆಯಾಗಿರುವುದು ಗೊತ್ತಾಗಿದೆ. ಮಂಜುಳಾ ಕುತ್ತಿಗೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊಲೆ ಮಾಡಿ ಮನೆಯಲ್ಲಿದ್ದ ನಗದು ಹಾಗೂ ಒಡವೆ ದೋಚಲಾಗಿದೆ.
ಮೈಸೂರಿನ ಕುವೆಂಪುನಗರ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆ ಮಾಡಿದವರ ಹುಡುಕಾಟದಲ್ಲಿದ್ದಾರೆ. ಆರೋಪಿಗಳು ಸಿಕ್ಕ ನಂತರವೇ ಮಂಜುಳಾ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಇದೆಲ್ಲಾ ಏನೇ ಇರಲಿ ಹಾಡಹಗಲೇ ನಡೆದಿರುವ ಕೊಲೆ ಮೈಸೂರಿಗರನ್ನು ಬೆಚ್ಚಿಬೀಳಿಸಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ