Namma Clinics: ನಮ್ಮ ಕ್ಲಿನಿಕ್​ಗಳಿಗೆ ಮೈಸೂರಿನಲ್ಲಿ ಭರ್ಜರಿ ಯಶಸ್ಸು, ಎರಡೇ ತಿಂಗಳಲ್ಲಿ 46,000 ಜನರಿಗೆ ಚಿಕಿತ್ಸೆ

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಒಟ್ಟು 6 ನಮ್ಮ ಕ್ಲಿನಿಕ್​ಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಇನ್ನೂ 3 ನಮ್ಮ ಕ್ಲಿನಿಕ್​ಗಳನ್ನು ತೆರೆಯಲು ಚಿಂತನೆ ನಡೆಸುತ್ತಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕೇವಲ 2 ತಿಂಗಳ ಅವಧಿಯಲ್ಲಿ 46,000 ಜನರು ನಮ್ಮ ಕ್ಲಿನಿಕ್​​ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುವುದೇ ಇದಕ್ಕೆ ಕಾರಣ.

Namma Clinics: ನಮ್ಮ ಕ್ಲಿನಿಕ್​ಗಳಿಗೆ ಮೈಸೂರಿನಲ್ಲಿ ಭರ್ಜರಿ ಯಶಸ್ಸು, ಎರಡೇ ತಿಂಗಳಲ್ಲಿ 46,000 ಜನರಿಗೆ ಚಿಕಿತ್ಸೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 14, 2024 | 7:30 AM

ಮೈಸೂರು, ಫೆಬ್ರವರಿ 14: ಬಡವರಿಗೆ ಉತ್ತಮ ಆರೋಗ್ಯ ಸೇವೆಗಳನ್ನು (Health service) ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ‘ನಮ್ಮ ಕ್ಲಿನಿಕ್​’ಗಳಿಗೆ (Namma Clinics) ಮೈಸೂರಿನಲ್ಲಿ (Mysuru) ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಈ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಬಡವರು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇನ್ನೂ ಮೂರು ಕ್ಲಿನಿಕ್‌ಗಳನ್ನು ಸ್ಥಾಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಂತನೆ ನಡೆಸಿದೆ.

ರಾಜ್ಯ ಸರ್ಕಾರವು ಸದ್ಯ ಮೈಸೂರು ನಗರದಲ್ಲಿ ಮೂರು ನಮ್ಮ ಕ್ಲಿನಿಕ್​ಗಳನ್ನು ಸ್ಥಾಪಿಸಿದೆ. ಹೂಟಗಳ್ಳಿ, ಶ್ರೀರಾಂಪುರ, ಯರಗನಹಳ್ಳಿ (ರಮ್ಮನಹಳ್ಳಿ) ಮತ್ತು ಜಿಲ್ಲೆಯಾದ್ಯಂತ ಮೂರು ನಮ್ಮ ಕ್ಲಿನಿಕ್​ಗಳು (ಎಚ್‌ಡಿ ಕೋಟೆ, ಕೆಆರ್ ನಗರ ಮತ್ತು ಟಿ. ನರಸೀಪುರ) 2022 ರ ಡಿಸೆಂಬರ್​ನಿಂದ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (NUHM) ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ನಮ್ಮ ಕ್ಲಿನಿಕ್​​ಗಳು ರೋಗಗಳನ್ನು, ವಿಶೇಷವಾಗಿ ಸಾಂಕ್ರಾಮಿಕವಲ್ಲದ ಮತ್ತು ಜೀವನಶೈಲಿಯ ರೋಗಗಳನ್ನು ಆರಂಭಿಕ ಹಂತದಲ್ಲಿ ಪರೀಕ್ಷಿಸಲು ಸಹಾಯ ಮಾಡುತ್ತವೆ. ಇದರಿಂದಾಗಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವುದ ಜತೆಗೆ ಜೀವಕ್ಕೆ ಅಪಾಯಕಾರಿಯಾಗುವಂಥ ಸಮಸ್ಯೆಗಳ ನಿರ್ಮೂಲನೆ ಸುಲಭವಾಗುತ್ತದೆ.

ನಮ್ಮ ಕ್ಲಿನಿಕ್​ಗಳು ಉಪ ಕೇಂದ್ರಗಳಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸುತ್ತವೆ. 15 ತಿಂಗಳ ಹಿಂದೆ ನಮ್ಮ ಕ್ಲಿನಿಕ್ ಆರಂಭಿಸಿದ ನಂತರ ಸಾವಿರಾರು ಬಡ ರೋಗಿಗಳು ಈ ಆರೋಗ್ಯ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ. ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪರಿಗಣಿಸಿ, ಆರೋಗ್ಯ ಇಲಾಖೆಯು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಎರಡು ಕ್ಲಿನಿಕ್‌ಗಳ ಸಮಯವನ್ನು ರಾತ್ರಿ 8 ರವರೆಗೆ ವಿಸ್ತರಿಸಿದೆ.

2023 ರ ಏಪ್ರಿಲ್​​ನಿಂದ 2024 ರ ಜನವರಿ ಅಂತ್ಯದವರೆಗೆ, ಮೈಸೂರು ಜಿಲ್ಲೆಯ 6 ಕ್ಲಿನಿಕ್‌ಗಳಿಗೆ 46,000 ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಅವರಲ್ಲಿ 23,055 ಪುರುಷರು ಮತ್ತು 23,843 ಮಹಿಳೆಯರಾಗಿದ್ದಾರೆ.

ನಗರ ಜನಸಂಖ್ಯೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಪಿಎಚ್‌ಸಿಗಳಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಪರಿಗಣಿಸಿ, ನಗರ ಬಡವರ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸರ್ಕಾರ ನಮ್ಮ ಕ್ಲಿನಿಕ್​ಗಳನ್ನು ಸ್ಥಾಪಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಪಿಸಿ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಗೆ ಬರಲಿದೆ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ: ಸ್ವಯಂಚಾಲಿತ ಶುಲ್ಕ ಪಾವತಿ

ಮೈಸೂರು ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನೂ ಮೂರು ಕ್ಲಿನಿಕ್‌ಗಳನ್ನು ತೆರೆಯುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ. ಈ ಕ್ಲಿನಿಕ್​ಗಳಲ್ಲಿ 41,940 ರೋಗಿಗಳಿಗೆ ಉಚಿತ ಔಷಧಿಗಳನ್ನು ನೀಡಲಾಗಿದ್ದು, 11,465 ರೋಗಿಗಳು ಕ್ಲಿನಿಕ್‌ಗಳಲ್ಲಿನ ಡಯಾಗ್ನೋಸ್ಟಿಕ್ ಲ್ಯಾಬ್‌ಗಳಲ್ಲಿ ರೋಗ ಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್