ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ, ಅರಮನೆಯ ಪರಂಪರೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ -ಯದುವೀರ್ ಒಡೆಯರ್
Yaduveer Krishnadatta Chamaraja Wadiyar: ಯದುವೀರ ಒಡೆಯರ್ ಅವರು ದೇಶದಲ್ಲಿ ಬ್ರಿಟೀಷ್ ಆಡಳಿತವಿದ್ದಾಗ ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಮರಿಮೊಮ್ಮಗ.
ಬೆಂಗಳೂರು: ಮೈಸೂರು ಮಹಾರಾಜರ ಕೊನೆಯ ಕೊಂಡಿಯಂತಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (30) ಅವರು (Yaduveer Krishnadatta Chamaraja Wadiyar ) ಇಂದು ಅರಮನೆ ರಸ್ತೆಯಲ್ಲಿರುವ ಐತಿಹಾಸಿಕ ಓಣಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ. ನನ್ನ ಕರ್ತವ್ಯ ಇರುವುದು ಪರಂಪರೆ ಮುಂದುವರಿಸಿಕೊಂಡು ಹೋಗುವುದು. ಆ ಜವಾಬ್ದಾರಿ ನಿಭಾಯಿಸುತ್ತೇನೆ. ಸಂಪ್ರದಾಯ ರಕ್ಷಣೆ ಜೊತೆಗೆ ಜನರ ಸೇವೆಯನ್ನು ಮಾಡುತ್ತೇನೆ ಎಂದು ಮಹಾರಾಜ ಯದುವೀರ ಒಡೆಯರ್ ಹೇಳಿದ್ದಾರೆ.
ಯದುವೀರ ಒಡೆಯರ್ ಅವರು ದೇಶದಲ್ಲಿ ಬ್ರಿಟೀಷ್ ಆಡಳಿತವಿದ್ದಾಗ ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ (Jayachamarajendra Wadiyar) ಅವರ ಮರಿಮೊಮ್ಮಗ.
Also Read:
ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಳತೆಗೆ ಅಪಾರ ಮೆಚ್ಚುಗೆ, ಫೋಟೋ ವೈರಲ್