ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ವ್ಯವಸ್ಥೆ; ಇದರ ಅನುಕೂಲಗಳೇನು?
ಸದ್ಯ ಇಲ್ಲಿಯವರೆಗೆ ಈ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿಲ್ಲ. ಆದರೆ ಈ ಯೋಜನೆ ಅಳವಡಿಸಲು ಇದೀಗ ಮುಂದಾಗಿದ್ದೇವೆ. ಹೆಚ್ಚುವರಿ ಕಾಮಗಾರಿಗಳ ಅಡಿಯಲ್ಲಿ ಹಣ ಪಡೆಯಲಾಗುತ್ತದೆ ಎಂಧು ಶ್ರೀಧರ್ ಹೇಳಿದ್ದಾರೆ.
ಮೈಸೂರು: ಮೈಸೂರು-ಬೆಂಗಳೂರು ದಶಪಥದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ (Traffic) ಕಿರಿಕಿರಿ ತಪ್ಪಿಸಲು ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ (ITS- Intelligent Transport System) ಅಳವಡಿಸಲಾಗುತ್ತದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ನಿರ್ದೇಶಕ ಶ್ರೀಧರ್ ತಿಳಿಸಿದ್ದಾರೆ. ಟ್ರಾಫಿಕ್ ನಿಯಂತ್ರಣದ ಜೊತೆಗೆ ಪ್ರಯಾಣಿಕರ ಹೆಚ್ಚಿನ ಸುರಕ್ಷತೆ ಹಿನ್ನೆಲೆ ಐಟಿಎಸ್ನ ಅಳವಡಿಸಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣ ಮಾತ್ರವಲ್ಲ ಅಪಘಾತಗಳನ್ನ ತಡೆಗಟ್ಟಬಹುದು.
ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡುವ ಮೊದಲು ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ನ ಅಳವಡಿಸಲಾಗುವುದು ಎಂದು ಶ್ರೀಧರ್ ಹೇಳಿದ್ದಾರೆ. ಇಂದು (ಜೂನ್ 29) ಬೆಳಗ್ಗೆ ಸ್ಟಾರ್ ಆಫ್ ಮೈಸೂರು ವೆಬ್ಸೈಟ್ ಜೊತೆ ಮಾತನಾಡಿದ ಅವರು, ಮಾರ್ಗ ಉದ್ದಕ್ಕೂ ಈ ವ್ಯವಸ್ಥೆ ಮಾಡಲಾಗುತ್ತದೆ. ಸೆನ್ಸರ್ಗಳು, ಕ್ಯಾಮೆರಾಗಳು ಮತ್ತು ನೈಟ್ ವಿಷನ್ ಗ್ಯಾಜೆಟ್ಗಳನ್ನ ಹೆದ್ದಾರಿಯ ಉದ್ದಕ್ಕೂ 2 ಕಿಲೋಮೀಟರ್ ಅಂತರದಲ್ಲಿ ಇರಿಸಲಾಗುತ್ತದೆ ಎಂದು ತಿಳಿಸಿದರು.
ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ ಎಂದರೇನು?: ಸದ್ಯ ಇಲ್ಲಿಯವರೆಗೆ ಈ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿಲ್ಲ. ಆದರೆ ಈ ಯೋಜನೆ ಅಳವಡಿಸಲು ಇದೀಗ ಮುಂದಾಗಿದ್ದೇವೆ. ಹೆಚ್ಚುವರಿ ಕಾಮಗಾರಿಗಳ ಅಡಿಯಲ್ಲಿ ಹಣ ಪಡೆಯಲಾಗುತ್ತದೆ ಎಂದು ಮಾತನಾಡಿದ ಶ್ರೀಧರ್ ಅವರು, ಎಲ್ಇಡಿ ಪರದೆಗಳೊಂದಿಗೆ ಸಂಚಾರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸಿದರೆ ಕೇಂದ್ರೀಯ ಕಮಾಂಡ್ ಸೆಂಟರ್ ಅಥವಾ ಕಂಟ್ರೋಲ್ ರೂಮ್ನಿಂದ ಮಾಹಿತಿಯನ್ನು ನೀಡಲಾಗುತ್ತದೆ. ಇದರಿಂದ ಬಾರೀ ಅನುಕೂಲವಾಗುತ್ತದೆ ಎಂದರು.
ಇದನ್ನೂ ಓದಿ: Shivarajkumar: ‘ಬೈರಾಗಿ’ ಡೈಲಾಗ್ಗಳು ಹೇಗಿವೆ? ರಿಲೀಸ್ಗೂ ಮುಂಚೆ ವೇದಿಕೆಯಲ್ಲೇ ಝಲಕ್ ತೋರಿಸಿದ ಶಿವಣ್ಣ
ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್‌ಕಾನ್ ಕಂಪನಿಯು ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಪಡೆದಿದೆ. 2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಾಮಗಾರಿ ಕೆಲಸ ಬಹುತೇಕ ಮುಗಿದಿದ್ದು, ಕೆಲವೇ ತಿಂಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: GST: 1000 ರೂಪಾಯಿ ಒಳಗಿನ ಹೋಟೆಲ್ ಕೋಣೆಗಳಿಗೆ ವಿನಾಯಿತಿ ವಾಪಸ್, ಪ್ರೀ ಪ್ಯಾಕ್ಡ್ ಆಹಾರಗಳಿಗೆ ಜಿಎಸ್ಟಿ
Published On - 11:18 am, Wed, 29 June 22