AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿಂದು ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ: ದೇವೇಗೌಡರಿಗೆ ವಿಶೇಷ ಕಿರೀಟ ರೆಡಿ

ಹೆಚ್​ಡಿ ದೇವೇಗೌಡರಿಗೆಇಮ್ಮಡಿ‌ ಪುಲಕೇಶಿ ಮಾದರಿಯ ವಿಶೇಷವಾದ ಕಿರೀಟ ನೀಡಲು ಹೆಚ್​ಡಿಡಿ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ.

ಆಯೇಷಾ ಬಾನು
|

Updated on: Mar 26, 2023 | 8:25 AM

Share

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Elections 2023) ಹಿನ್ನೆಲೆ ಜೆಡಿಎಸ್ ಕೈಗೊಂಡಿದ್ದ ಪಂಚರತ್ನ ರಥಯಾತ್ರೆ( JDS Pancharatha Yatre) ಇಂದು(ಮಾರ್ಚ್ 26) ಸಂಜೆ 4 ಗಂಟೆಗೆ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಲು ಜೆಡಿಎಸ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು(HD DeveGowda), ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಹೆಚ್​.ಡಿ.ರೇವಣ್ಣ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಇನ್ನು ವಿಶೇಷವೆಂದರೆ ಹೆಚ್​ಡಿ ದೇವೇಗೌಡರಿಗೆಇಮ್ಮಡಿ‌ ಪುಲಕೇಶಿ ಮಾದರಿಯ ವಿಶೇಷವಾದ ಕಿರೀಟ ನೀಡಲು ಹೆಚ್​ಡಿಡಿ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ.

ಮೈಸೂರು ತಾಲೂಕು ಉತ್ತನಹಳ್ಳಿ ಗ್ರಾಮದ ಬಳಿ ಸುಮಾರು 100 ಎಕರೆ ಪ್ರದೇಶದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸುಮಾರು 10 ಲಕ್ಷ ಜನರನ್ನು ಸೇರಿಸುವ ಗುರಿ ಇದೆ. ಹಳೇ ಮೈಸೂರು ಭಾಗದ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಲಿದ್ದಾರೆ. ಮೈಸೂರು, ಮಂಡ್ಯ, ಹಾಸನ, ರಾಮನಗರ, ತುಮಕೂರು, ಚಾಮರಾಜನಗರ ಜಿಲ್ಲೆಯಿಂದ ಕಾರ್ಯಕರ್ತರು ಬರಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಸಹ ಭಾಗಿಯಾಗಲಿದ್ದಾರೆ. ಇದು ಅವರು ವಿಶ್ರಾಂತಿ ನಂತರ ಭಾಗಿಯಾಗುತ್ತಿರುವ ಮೊದಲ ರಾಜಕೀಯ ಕಾರ್ಯಕ್ರಮ.

ಇದನ್ನೂ ಓದಿ: ಗೌಡರಿಗೆ ಅಪಮಾನ: ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ಜೆಡಿಎಸ್, ಕ್ಷಮೆ ಯಾಚಿಸಿದ ಸಂಬರಗಿ

ಇನ್ನು ಬೆಂಗಳೂರು ಮೈಸೂರು ರಸ್ತೆ ಜಂಕ್ಷನ್ ಬಳಿಯಿಂದ ನಡೆಯುವ ರೋಡ್ ಶೋನಲ್ಲೂ ಹೆಚ್​ಡಿಡಿ ಇರಲಿದ್ದಾರೆ. ಪಂಚರತ್ನ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಹೆಚ್​ಡಿ ದೇವೇಗೌಡರಿಗೆ ವಿಶೇಷ ಕಿರೀಟ ನೀಡಲು ತಯಾರಿ ನಡೆದಿದೆ. ಇಮ್ಮಡಿ‌ ಪುಲಕೇಶಿ ಮಾದರಿ ಕಿರೀಟ ನೀಡಲಾಗುತ್ತೆ. ಅಖಂಡ ಭಾರತವನ್ನು ಆಳಿದ ಕನ್ನಡದ ದೊರೆ ಇಮ್ಮಡಿ ಪುಲಕೇಶಿ. ದೇಶವನ್ನು ಆಳಿದ ಪ್ರಧಾನಿ ಹೆಚ್​ಡಿ ದೇವೇಗೌಡ ಎಂದು ಸಂದೇಶ ಸಾರಲಿದ್ದಾರೆ. ಚಿನ್ನದ ಲೇಪನದ ನೇಗಿಲು ನೀಡಲು ಮೈಸೂರಿನ ಹೆಚ್​ಡಿ ದೇವೇಗೌಡ ಅಭಿಮಾನಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಕಲಾವಿದ ನಂದನ್ ಅವರಿಂದ ಕಿರೀಟ ನೇಗಿಲು‌ ನೊಗ ತಯಾರಿಸಲಾಗಿದೆ.

ಕಾರ್ಯಕ್ರಮಕ್ಕೆ ವಿದ್ಯುತ್ ಅಲಂಕಾರ

ಇನ್ನು ಕಾರ್ಯಕ್ರಮಕ್ಕೆ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದೆ. 100×50 ಅಡಿಯ ವಿಶಾಲ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ ನೋಡಲು ಬೃಹತ್ ಎಲ್​ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡರ ಆಗಮನಕ್ಕೆ ವಿಶೇಷ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು ಜನರ ಮಧ್ಯೆದಿಂದ ಬರಲಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ