ಮೈಸೂರು, ಏ.20: ‘ನಾವು ನಿನ್ನ ಬೆನ್ನಿಗೆ ಚೂರಿ ಹಾಕಿದ್ವಾ ಎಂದು ಹೆಚ್ ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ಡಿಕೆ ಶಿವಕುಮಾರ್(DK Shivakumar) ವಾಗ್ದಾಳಿ ನಡೆಸಿದ್ದಾರೆ. ಇಂದು(ಏ.20) ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಾತನಾಡಿದ ಅವರು, ‘ನನ್ನ ಜಮೀನಲ್ಲಿ ಕಲ್ಲು ಒಡೆಯೋಕೆ ಇವನ ಅನುಮತಿ ಕೇಳಬೇಕಾ?, ಎ ಟೀಂ, ಬಿ ಟೀಂ ಅಲ್ಲ ಈಗ ಬಿಜೆಪಿ ಜೆಡಿಎಸ್ ಪಾರ್ಟ್ನರ್ಸ್ ಆಗಿದ್ದಾರೆ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಅಲ್ಲ ಅಭ್ಯರ್ಥಿ, ಸಿದ್ದರಾಮಯ್ಯ, ಡಿಕೆ ಅಭ್ಯರ್ಥಿ. ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಕುಮಾರಸ್ವಾಮಿಯನ್ನು ವಾಪಸ್ ಚನ್ನಪಟ್ಟಣಕ್ಕೆ ಕಳುಹಿಸಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಒಂದು ಜಾತಿ, ಧರ್ಮದ ಮೇಲೆ ನಿಂತಿಲ್ಲ. ಮೋದಿ ಅವರು 15 ಲಕ್ಷ ಹಣ ಹಾಕ್ತೇವೆ ಅಂದಿದ್ದರು. ಯಾರಿಗಾದರೂ ಬಂತಾ?, ಆದಾಯ ಡಬಲ್ ಆಯ್ತಾ ಅಥವಾ ಯುವಕರಿಗೆ ಸರ್ಕಾರಿ ಕೆಲಸ ಸಿಕ್ತಾ?. ಮತ್ತೆ ಏಕೆ ಪ್ರಧಾನಿ ಮೋದಿಗೆ ವೋಟ್ ಕೇಳುವುದಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು. ‘ನಾವು ಭ್ರಷ್ಟಾಚಾರ ತೆಗೆಯಬೇಕು ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ, ಹೆಚ್ಡಿಕೆ ಅವರು ಇದರಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆ ಹೆಚ್ಡಿಕೆ ವಿರುದ್ಧ ಮಂಡ್ಯದ ಹೆಣ್ಣು ಮಕ್ಕಳು ರೊಚ್ಚಿಗೆದ್ದಿದ್ದಾರೆ.
ಇದನ್ನೂ ಓದಿ:ಮಂಡ್ಯ-ಮೈಸೂರು ಭಾಗಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಅವರು ನಮ್ಮ ಬದುಕಿನ ಪ್ರಶ್ನೆ ಮಾಡುತ್ತಿದ್ದಾರೆ. ನೀನು ಸಿಎಂ, ನಿಮ್ಮ ತಂದೆ ಪ್ರಧಾನಿ ಆಗಿದ್ದರೋ ಅಲ್ಲೇ ನಿಲ್ಲಬೇಕಿತ್ತು. ಸಾ.ರಾ.ಮಹೇಶ್, ಪುಟ್ಟರಾಜು, ತಮ್ಮಣ್ಣಗೆ ಚಾಕಲೇಟ್ ಕೊಟ್ಟರು, ಜೆಡಿಎಸ್ನಲ್ಲಿ ಯಾರು ಕಾರ್ಯಕರ್ತರು ಇಲ್ಲವೇ. ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ. ಒಕ್ಕಲಿಗ ನಾಯಕ ಎಂದು ಹೇಳಿದ್ನಾ, ನಾನು ಸರ್ವಜನಾಂಗದ ನಾಯಕ ಎಂದು ವಿಪಕ್ಷಗಳ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ