ಶಂಕರ ಮಠದ 8 ಜನ ಪುರೋಹಿತರಿಂದ ಮಂತ್ರ ಪಾರಾಯಣ; ಇಫ್ತಾರ್ ಕೂಟದಲ್ಲಿ ಅಪರೂಪದ ಕಾರ್ಯಕ್ರಮ
ಇಫ್ತಾರ್ ಕೂಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಸಾ.ರಾ.ಮಹೇಶ್, ಆರ್.ಅಶ್ವಿನ್‌ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಮೈಸೂರು: ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಜೆಡಿಎಸ್ನಿಂದ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಶಂಕರಮಠದ 8 ಜನ ಪುರೋಹಿತರಿಂದ ವೇದ ಘೋಷ ಮಂತ್ರ ಪಾರಾಯಣ ಮಾಡಲಾಗಿದೆ. ನಗರದಲ್ಲಿ ರಂಜಾನ್ ಮಾಸದ ಇಫ್ತಾರ್ ಕೂಟದಲ್ಲಿ ಮಂತ್ರ ಮೇಳೈಸಿದೆ. ಸಿದ್ದರಾಮಯ್ಯ ಆಯೋಜಿಸಿದ್ದ ಸ್ಥಳದಲ್ಲೇ ಹೆಚ್‌ಡಿ.ಕುಮಾರಸ್ವಾಮಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿದ್ದು, ಇಫ್ತಾರ್ ಕೂಟದ ಪಾಲಿಟಿಕ್ಸ್ ಆರಂಭವಾದಂತೆ ಕಾಣುತ್ತಿದೆ. ಇಫ್ತಾರ್ ಕೂಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಸಾ.ರಾ.ಮಹೇಶ್, ಆರ್.ಅಶ್ವಿನ್‌ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ:
ರಜೆಯ ಮೂಡ್ನಲ್ಲಿ ‘ಕೆಜಿಎಫ್ 2’ ತಂಡ; ವೈರಲ್ ಆಗುತ್ತಿವೆ ಫೋಟೋಗಳು
HPCL Recruitment 2022: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಲ್ಲಿದೆ ಉದ್ಯೋಗಾವಕಾಶ