ಬುಲ್​ಡೋಜರ್ ರಾಜಕಾರಣ ಕರ್ನಾಟಕಕ್ಕೆ ಬೇಡ: ಬಿಜೆಪಿಗೆ ಎಚ್​ ವಿಶ್ವನಾಥ್ ತಾಕೀತು

ಬುಲ್​ಡೋಜರ್ ರಾಜಕಾರಣ ಕರ್ನಾಟಕಕ್ಕೆ ಬೇಡ: ಬಿಜೆಪಿಗೆ ಎಚ್​ ವಿಶ್ವನಾಥ್ ತಾಕೀತು
ಹೆಚ್.ವಿಶ್ವನಾಥ್

ಕರ್ನಾಟಕದಲ್ಲಿ ಶಾಂತಿ ಕದಡುವವರ ಆಸ್ತಿನಾಶಕ್ಕೆ ಬುಲ್ಡೋಜರ್ ಬಳಸುವ ಕ್ರಮ ಸರಿಯಲ್ಲ. ಜನರ ಜೀವನ ಕಿತ್ತುಕೊಳ್ಳಲು ಅಧಿಕಾರ ಕೊಟ್ಟವರು ಯಾರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 25, 2022 | 10:28 AM

ಮೈಸೂರು: ಕರ್ನಾಟಕದಲ್ಲಿ ಶಾಂತಿ ಕದಡುವವರ ಆಸ್ತಿನಾಶಕ್ಕೆ ಬುಲ್ಡೋಜರ್ ಬಳಸುವ ಕ್ರಮ ಸರಿಯಲ್ಲ. ಜನರ ಜೀವನ ಕಿತ್ತುಕೊಳ್ಳಲು ಅಧಿಕಾರ ಕೊಟ್ಟವರು ಯಾರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲಲ್ಲಿ ನಡೆದ ಕೆಲ ಘಟನೆಗಳನ್ನು ವಿಶ್ಲೇಷಿಸಿದರು. 1976ರ ತುರ್ತುಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ ಸಹ ಇದೇ ರೀತಿ ಬುಲ್ಡೋಜರ್ ಕ್ರಮ ಮಾಡಿದರು. ನಂತರದ ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಇದು ನೆನಪಿರಲಿ ಎಂದು ತಾಕೀತು ಮಾಡಿದರು.

ಮಲಬಾರ್ ಗೋಲ್ಡ್​ನಲ್ಲಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಬೇಡಿ ಎಂಬ ಅಭಿಯಾನ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆ ಮುತಾಲಿಕ್ ಯಾರು? ಗ್ರಾಮ ಪಂಚಾಯತಿ ಮೆಂಬರ್ ಆಗಿದ್ರಾ? ಇದು ಮುತಾಲಿಲ್ ಸರಕಾರವೋ? ಆರ್​ಎಸ್ಎಸ್ ಸರಕಾರವೋ ಅಥವಾ ಶ್ರೀರಾಮಸೇನೆ ಸರಕಾರವೋ? ಮುತಾಲಿಕ್ ಸರಕಾರ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸಿದರು. ಕೇವಲ ಕೀಟಲೆ ಮಾಡಿಕೊಂಡು ಮಾತಾಡುವವರಿಗೆ ಮಣೆ ಹಾಕಬೇಡಿ ಎಂದು ಪ್ರಶ್ನಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡಬೇಡಿ ಎಂದು ಯಡಿಯೂರಪ್ಪ ಹೇಳಿರುವುದು ಅವರ ದೊಡ್ಡತನ. ಶಾಂತವೇರಿ ಗೋಪಾಲಗೌಡರು, ಕುವೆಂಪು, ಕಡಿದಾಳು ಮಂಜಪ್ಪ ಅವರಂಥವರ ಹೆಸರು ಸರಕಾರಕ್ಕೆ ನೆನಪಿಗೆ ಬರಲಿಲ್ವಾ? ಸಿದ್ದರಾಮಯ್ಯ ಅವರನ್ನು ಹುಣಸೂರು ಕ್ಷೇತ್ರಕ್ಕೆ ಮತ್ತೆ ಆಹ್ವಾನಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಆಡಳಿತ ಅನುಭವ ಕ್ಷೇತ್ರಕ್ಕೆ ಸಿಗಲಿ ಎಂದು ನಾನು ಆಹ್ವಾನಿಸಿದ್ದೇನೆ. ಆದರೆ, ಈ ರಾಜ್ಯದ ಯಾವ ನಾಯಕರಿಗೂ ಕೃತಜ್ಞತೆ ಇಲ್ಲ. ಯಡಿಯೂರಪ್ಪಗೆ ಕೃತಜ್ಞತೆ ಇದೆಯೇ? ಸಿದ್ದರಾಮಯ್ಯಗೆ ಕೃತಜ್ಞತೆ ಇದೆಯೇ ಎಂದು ಪ್ರಶ್ನಿಸಿದರು.

ಮೋದಿ ಆಡಳಿತ ಬಂದ ಮೇಲೆ ಅಂಬಾನಿ, ಅದಾನಿ ಶ್ರೀಮಂತರಾದರು ಎಂಬ ಸಿದ್ದರಾಮಯ್ಯ ಟೀಕೆ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅದಾನಿ, ಅಂಬಾನಿ ಕೈಗಾರಿಕೋದ್ಯಮಿಗಳು. ಅವರು ಶ್ರೀಮಂತರಾಗೋದು ಸಹಜ. ಸಿದ್ದರಾಮಯ್ಯ ಅವರೇ ನಿಮ್ಮ ಆಸ್ತಿ ಎಷ್ಟು? ಈಗ ನೀವು ಸ್ಥಿತಿವಂತರಾಗಿಲ್ವಾ? ಇದನ್ನು ಹೇಳಿ ಎಂದು ವಾಗ್ದಾಳಿ ನಡೆಸಿದರು.

ಯಾವ ನೇಮಕಾತಿ ಪರೀಕ್ಷೆಯನ್ನು ಸರಕಾರ ಪ್ರಾಮಾಣಿಕವಾಗಿ ನಡೆಸುತ್ತಿಲ್ಲ. ಎಲ್ಲವೂ ದುಡ್ಡು ದುಡ್ಡು ಎನ್ನುವಂತಾಗಿದೆ. ಒಂದು ಸರಕಾರಕ್ಕೆ ಒಂದು ನೇಮಕಾತಿ ಪರೀಕ್ಷೆ ನಡೆಸಲು ಆಗಲ್ಲ ಅಂದರೇ ಅದರ ಅರ್ಥ ಏನು? ವಿಜಯೇಂದ್ರ ಅವರ ಫ್ರೆಂಡ್ ಎಂದು ಒಬ್ಬರನ್ನು ಕೆಪಿಎಸ್​ಸಿ ಸದಸ್ಯೆ ಮಾಡಿದ್ದಾರೆ. ಈ ರೀತಿ ಸಿಕ್ಕಸಿಕ್ಕವರನ್ನೆಲ್ಲಾ ಸದಸ್ಯರಾಗಿ ಮಾಡಿದರೆ ಇನ್ನೇನಾಗುತ್ತೆ? ಯುಪಿಎಸ್​ಸಿ ಮಾದರಿಯಲ್ಲಿ ಕೆಪಿಎಸ್​ಸಿ ಆಡಳಿತ ನಿರ್ವಹಿಸಲು ಸಾಧ್ಯವಿಲ್ಲ? ನಮಗೆ ಯೋಗ್ಯತೆ ಇಲ್ವಾ? ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ 30-40 ಲಕ್ಷ ಕೇಳುತ್ತಿದ್ದಾರೆ. ಇದೊಂದು ಭ್ರಷ್ಟ ಸರ್ಕಾರವೆಂದು ಜನರು ಹೇಳುತ್ತಿದ್ದಾರೆ. ನಾವು ಕೂಡ ಹಾಗೇ ಭ್ರಷ್ಟ ಆಡಳಿತ ನಡೆಸುತ್ತಿದ್ದೇವೆ ಎಂದು ವಿಷಾದಿಸಿದರು.

ಇದನ್ನೂ ಓದಿ: ಜಾತಿ, ಧರ್ಮದ ಆಧಾರದ ರಾಜಕಾರಣ ಬಹಳ ಅಪಾಯಕಾರಿ; ಹೊಟ್ಟೆಗೆ ಇಲ್ಲ ಅಂದ್ಮೇಲೆ ಧರ್ಮ, ಜಾತಿ ತಗೊಂಡು ಏನ್ಮಾಡ್ತೀರಾ? -ಹೆಚ್.ವಿಶ್ವನಾಥ್

ಇದನ್ನೂ ಓದಿ: ಬಿಡಿಎ ಏಜೆಂಟ್​ಗಿರಿ ವಿರುದ್ಧ ಹರಿಹಾಯ್ದ ಅಧ್ಯಕ್ಷ ಎಸ್ಆರ್ ವಿಶ್ವನಾಥ್: ಬಿಡಿಎನಲ್ಲಿ ಏಜೆಂಟ್​ಗಳ ಕಾರುಬಾರು

Follow us on

Related Stories

Most Read Stories

Click on your DTH Provider to Add TV9 Kannada