AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ, ಧರ್ಮದ ಆಧಾರದ ರಾಜಕಾರಣ ಬಹಳ ಅಪಾಯಕಾರಿ; ಹೊಟ್ಟೆಗೆ ಇಲ್ಲ ಅಂದ್ಮೇಲೆ ಧರ್ಮ, ಜಾತಿ ತಗೊಂಡು ಏನ್ಮಾಡ್ತೀರಾ? -ಹೆಚ್.ವಿಶ್ವನಾಥ್

ಜಾತಿ, ಧರ್ಮದ ಆಧಾರದಲ್ಲಿ 1-2 ಚುನಾವಣೆ ಮಾಡಬಹುದು. ಭಾರತೀಯ ಜನತಾ ಪಕ್ಷ ಹಿಂದೂಗಳ ಓಲೈಕೆ ಮಾಡುವುದು. ಕಾಂಗ್ರೆಸ್ನವರು ಮುಸ್ಲಿಮರನ್ನು ಓಲೈಕೆ ಮಾಡುವುದು ಬೇರೆ -ಹೆಚ್.ವಿಶ್ವನಾಥ್

ಜಾತಿ, ಧರ್ಮದ ಆಧಾರದ ರಾಜಕಾರಣ ಬಹಳ ಅಪಾಯಕಾರಿ; ಹೊಟ್ಟೆಗೆ ಇಲ್ಲ ಅಂದ್ಮೇಲೆ ಧರ್ಮ, ಜಾತಿ ತಗೊಂಡು ಏನ್ಮಾಡ್ತೀರಾ? -ಹೆಚ್.ವಿಶ್ವನಾಥ್
ಹೆಚ್.ವಿಶ್ವನಾಥ್
TV9 Web
| Updated By: ಆಯೇಷಾ ಬಾನು|

Updated on:Mar 27, 2022 | 3:52 PM

Share

ಬೆಳಗಾವಿ: ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಬಾರದು. ಈ ರೀತಿ ಮಾಡುವುದು ಬಹಳ ಅಪಾಯ ಎಂದು ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ MLC ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ 1-2 ಚುನಾವಣೆ ಮಾಡಬಹುದು. ಭಾರತೀಯ ಜನತಾ ಪಕ್ಷ ಹಿಂದೂಗಳ ಓಲೈಕೆ ಮಾಡುವುದು. ಕಾಂಗ್ರೆಸ್ನವರು ಮುಸ್ಲಿಮರನ್ನು ಓಲೈಕೆ ಮಾಡುವುದು ಬೇರೆ ಎಂದಿದ್ದಾರೆ.

ಮುಸ್ಲಿಮರನ್ನು ಹೊರಹಾಕುವಂತೆ ಬಿಜೆಪಿ ಬರೆದುಕೊಂಡಿದೆಯಾ? ಡಾ.ಅಂಬೇಡ್ಕರ್ ಕೊಟ್ಟ ಸಂವಿಧಾನದ ಅಡಿ ದೇಶ ನಡೆಯುತ್ತಿದೆ. ವಿರೋಧ ಪಕ್ಷಕ್ಕೆ ತನ್ನದೇ ಆದ ಕಾನೂನು, ಜವಾಬ್ದಾರಿಗಳು ಇದೆ. ಅವರಿಗೆ ಯಾರೂ ಹೇಳುವವರಿಲ್ಲ ಕೇಳುವವರಿಲ್ಲ ಅನ್ನುವಂತಾಗಿದೆ. ಹೊಟ್ಟೆಗೆ ಇಲ್ಲ ಅಂದ್ಮೇಲೆ ಧರ್ಮ, ಜಾತಿ ತಗೊಂಡು ಏನ್ಮಾಡ್ತೀರಾ? ಎಂದು ಗೋಕಾಕ್ನಲ್ಲಿ ಪರಿಷತ್ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ರಮೇಶ್‌, ನನ್ನನ್ನು ತುಳಿಯಲು ಯಾರಿಂದಲೂ ಆಗುವುದಿಲ್ಲ ಇನ್ನು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಹೆಚ್.ವಿಶ್ವನಾಥ್, ರಮೇಶ್‌ಗೆ ಸಚಿವ ಸ್ಥಾನ ತಪ್ಪಲು ಕಾಣುವ ಕೈಗಳೇ ಕಾರಣ ಎಂದಿದ್ದಾರೆ. ರಮೇಶ್, ನನ್ನನ್ನು ಕಾಣುವ ಕೈಗಳೇ ಮುಗಿಸುತ್ತವೆ. ಸಿದ್ದರಾಮಯ್ಯ, ನಾನು, ಜಾರಕಿಹೊಳಿ ಹಿಂದುಳಿದ ವರ್ಗದವ್ರು. ಹಿಂದುಳಿದ ವರ್ಗದವರು ಯಾರೂ ಬದುಕಂಗಿಲ್ಲ ಇಲ್ಲಿ. BJP ಸರ್ಕಾರ ಸ್ಥಾಪನೆಗೆ ರಮೇಶ್ ಪ್ರಮುಖ ಕಾರಣರಾದವ್ರು. ಅವರಿಗೇ ಹೀಗೆ ಆಟ ಆಡಿಸುತ್ತಾ ಕುಳಿತ್ರೇ ಹೇಗೆ. ಇದೆಲ್ಲಾ ತಾತ್ಕಾಲಿಕ, ನಿಮಗೆ ಅಧಿಕಾರ ನಾವೇ ಕೊಟ್ಟಿದ್ದೇವೆ. ನಾವು ಕೊಟ್ಟ ತ್ರಿಶೂಲದಿಂದಲೇ ನಮ್ಮನ್ನು ತಿವಿಯುತ್ತಿದ್ದೀರಿ. ರಮೇಶ್‌, ನನ್ನನ್ನು ತುಳಿಯಲು ಯಾರಿಂದಲೂ ಆಗುವುದಿಲ್ಲ ಎಂದು ಗೋಕಾಕ್ನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಒಬ್ಬರಾದರೂ ಮೋದಿ ಹೆಸರು ಹೇಳುತ್ತಾರಾ ಭಾರತೀಯ ಜನತಾಪಕ್ಷ ನಮ್ಮನ್ನು ಕಡೆಗಣನೆ ಮಾಡುತ್ತಿಲ್ಲ. ಬಿಜೆಪಿ ನಾಯಕರು ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ. ಯಾರು ಯಾವುದೇ ಪಕ್ಷವನ್ನ ಆಪಾದನೆ ಮಾಡಬಾರದು. ಪಕ್ಷದ ಸಿದ್ಧಾಂತ ಚೆನ್ನಾಗಿರುತ್ತೆ ನಾಯಕರಿಂದಲೇ ಪಕ್ಷ ಹಾಳಾಗುವುದು. ಕರ್ನಾಟಕದಲ್ಲಿ ಒಬ್ಬರಾದರೂ ಮೋದಿ ಹೆಸರು ಹೇಳುತ್ತಾರಾ. ಯಾರ ಹೆಸರೇಳಿ ಮುಂದಿನ ಚುನಾವಣೆಯಲ್ಲಿ ವೋಟ್ ಕೇಳ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮಾತನಾಡಲ್ಲ, ಸಚಿವರು ಮಾತನಾಡಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಈ ಬಗ್ಗೆ ಮಾತಾಡುವುದಿಲ್ಲ. ಮೋದಿ ಕಾರ್ಯಕ್ರಮಗಳ ಬಗ್ಗೆ ಯಾರೂ ಮಾತಾಡುವುದಿಲ್ಲ. ಇದುವರೆಗೂ ಹಿಂದುತ್ವದ ಬಗ್ಗೆ ಮೋದಿ ಮಾತನಾಡಿದ್ದಾರಾ? ಮೋದಿಯವರೇ ಮಾತಾಡಿಲ್ಲ ಇವರೇಕೆ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಹೆಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ.

ನೀನು ಅವನ ಹೊಟ್ಟೆ ಮೇಲೆ ಹೊಡೆದರೆ ಅವನೇನು ತಿನ್ನಬೇಕು ಮುಸ್ಲಿಂರಿಗೆ ದೇಗುಲದ ಆವರಣದಲ್ಲಿ ವ್ಯಾಪಾರ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಹೆಚ್.ವಿಶ್ವನಾಥ್, ಇದು ಸರಿಯಲ್ಲ ಇದನ್ನ ಯಾರೂ ಒಪ್ಪುವುದಿಲ್ಲ. ಅದು ಅವರ ಬದುಕು, ಅವನ ಬಂಡವಾಳ ಎಷ್ಟು ಇರುತ್ತೆ. ವ್ಯಾಪಾರಸ್ಥನ ಬಂಡವಾಳ ಐನೂರು ರೂಪಾಯಿ ಕೂಡ ಇರಲ್ಲ. ನೀನು ಅವನ ಹೊಟ್ಟೆ ಮೇಲೆ ಹೊಡೆದರೆ ಅವನೇನು ತಿನ್ನಬೇಕು. ಹೊಟ್ಟೆ ಮುಖ್ಯ ನಿನ್ನ ಜಾತಿ, ಧರ್ಮ, ನಿನ್ನ ಪಕ್ಷ ಆಮೇಲೆ. ಮುಸ್ಲಿಂರಾದರೂ ಅವರು ಈ ದೇಶದ ಪ್ರಜೆಗಳು ಅಲ್ಲವಾ? ನಾವು ಯೋಚನೆ ಮಾಡದೇ ಏನೇನೋ ತೀರ್ಮಾನಗಳಾಗ್ತಿವೆ. ಮುಸ್ಲಿಂ ರಾಷ್ಟ್ರಗಳು ಭಾರತೀಯರು ಬೇಡ ಎಂದರೆ ಹೇಗಿರುತ್ತೆ. ಬಂದವರಿಗೆಲ್ಲಾ ಕೆಲಸ ಕೊಡ್ತೀರಾ ನೀವು, ಆಗುತ್ತಾ ನಿಮಗೆ? ಈ ರೀತಿ ಆದ್ರೇ ಎಲ್ಲಿಗೆ ಹೋಗುತ್ತೆ ನಮ್ಮ ಭಾರತ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಫುಟ್ಬಾಲ್ ಮೈದಾನದ ಬಳಿ ಕಚ್ಚಾ ಬಾಂಬ್‌ ಪತ್ತೆ

ಶಿಕ್ಷಣ ಸಚಿವರ ಹೇಳಿಕೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಗರಂ; ಕೋರ್ಟ್ ನಿಯಮದನ್ವಯ ನಾವು ಶುಲ್ಕದ ಆದೇಶ ಸ್ವಾಗತಿಸಿದ್ದೇವೆ ಎಂದ ರುಪ್ಸಾ

Published On - 3:22 pm, Sun, 27 March 22