Crime News: ಬೆಳಗಿನ ಕ್ರೈಂ ಸುದ್ದಿಗಳು.. ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿ ಅರ್ಧ ಕೆ.ಜಿ. ಚಿನ್ನ, ನಗದು ಕದ್ದ ದುಷ್ಕರ್ಮಿಗಳು

ಸುಮನ್ ಫಂಕ್ಷನ್ ಹಾಲ್ ಮಾಲೀಕನ ಮನೆಗೆ ನುಗ್ಗಿ 6 ಲಕ್ಷ ರೂ., ಅರ್ಧ ಕೆ.ಜಿ. ಚಿನ್ನ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದು ಅವರನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Crime News: ಬೆಳಗಿನ ಕ್ರೈಂ ಸುದ್ದಿಗಳು.. ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿ ಅರ್ಧ ಕೆ.ಜಿ. ಚಿನ್ನ, ನಗದು ಕದ್ದ ದುಷ್ಕರ್ಮಿಗಳು
ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾದ ದಂಪತಿ
Updated By: ಆಯೇಷಾ ಬಾನು

Updated on: Jul 27, 2021 | 10:51 AM

ಮೈಸೂರು: ಮನೆಗೆ ನುಗ್ಗಿ ನಗದು, ಅರ್ಧ ಕೆ.ಜಿ. ಚಿನ್ನಾಭರಣ ದರೋಡೆ(Robbery )ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ನಗರದಲ್ಲಿ ನಡೆದಿದೆ. ಮನೆಯಲ್ಲಿದ್ದವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

ಸುಮನ್ ಫಂಕ್ಷನ್ ಹಾಲ್ ಮಾಲೀಕನ ಮನೆಗೆ ನುಗ್ಗಿ 6 ಲಕ್ಷ ರೂ., ಅರ್ಧ ಕೆ.ಜಿ. ಚಿನ್ನ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದು ಅವರನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿವಿ ಕತ್ತರಿಸಿ ಕಿವಿಯೊಲೆ ದೋಚಿದ ಖದೀಮ
ಇನ್ನು ಮತ್ತೊಂದೆಡೆ ಹಸು ಮೇಯಿಸುತ್ತಿದ್ದ ಒಂಟಿ ಮಹಿಳೆ ಕಿವಿ ಕತ್ತರಿಸಿ ಖದೀಮ ಕಿವಿಯೊಲೆ ದೋಚಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೊನ್ನಸಂದ್ರದಲ್ಲಿ ನಡೆದಿದೆ. ಗಾಯಳು ಸಿದ್ದಗಂಗಮ್ಮಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 6ಗ್ರಾಂ ತೂಕದ 25ಸಾವಿರ ಬೆಲೆಬಾಳುವ ಚಿನ್ನದ ಒಡವೆಯನ್ನು ಕದ್ದು ಖದೀಮ ಪರಾರಿಯಾಗಿದ್ದಾನೆ. 4ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಂತರಾಮು ಮನೆಯಲ್ಲಿ ಹಣ ಕದ್ದೊಯ್ದಿರುವ ಕಳ್ಳರು
ಸಂಬಂಧಿ ಮನೆಗೆ ತೆರಳಿದ್ದಾಗ ಮನೆಯ ಬಾಗಿಲು ಮುರಿದು 1.21 ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಬಳಿಯ ಆದರ್ಶ ನಗರದಲ್ಲಿ ನಡೆದಿದೆ. ಅನಂತರಾಮು ಮನೆಯಲ್ಲಿ ಕಳ್ಳರು ನಡೆದಿದ್ದು ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವ್ಯಕ್ತಿ ನೇಣಿಗೆ ಶರಣು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ. ಶಿವರಾಂ(42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರಾನ್ಸ್‌ಫಾರ್ಮರ್‌ ದುರಸ್ತಿ, ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು
ಟ್ರಾನ್ಸ್‌ಫಾರ್ಮರ್‌ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಕರಿನಾಯ್ಕ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊಸಪುರ ಗ್ರಾಮದಲ್ಲಿ ನಡೆದಿದೆ. ಲೈನ್‌ಮನ್ ಜತೆಗಿದ್ದ ಕೆಇಬಿ ನೌಕರ ಪ್ರಶಾಂತ್‌ಗೆ ಗಾಯಗಳಾಗಿದ್ದು ಗಾಯಾಳುವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹೈಟೆಕ್ ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಮೆಚ್ಚುಗೆ; 1 ಲಕ್ಷ ರೂ. ಬಹುಮಾನ ನೀಡಿ ಗೌರವ

Published On - 7:52 am, Tue, 27 July 21