2 ವರ್ಷದ ಮಗನನ್ನು ಬಕೆಟ್ ನೀರಲ್ಲಿ ಮುಳುಗಿಸಿ ಸಾಯಿಸಿ, ಬಳಿಕ ತಾನೂ ನೇಣಿಗೆ ಶರಣಾದ ತಾಯಿ
Nanjangud police station: ಆತ್ಮಹತ್ಯೆ ಮಾಡಿಕೊಂಡ ಅನ್ನಪೂರ್ಣ ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅವರ ಪತ್ನಿ, ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದ ನಿವಾಸಿ. 2 ವರ್ಷಗಳ ಹಿಂದೆ ಮಹದೇವ ಪ್ರಸಾದ್ನನ್ನು ಅನ್ನಪೂರ್ಣ ವಿವಾಹವಾಗಿದ್ದರು. ಪತಿ ಹಾಗೂ ಪತ್ನಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಜಗಳಗಳು ನಡೆಯುತ್ತಿದ್ದವು.
ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಹೆತ್ತ ಮಗುವನ್ನೂ ಕೊಂದ ಗೃಹಿಣಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 2 ವರ್ಷದ ಮಗು ಮೋಕ್ಷಿತ್‌ನನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಸಾಯಿಸಿದ ತಾಯಿ ಅನ್ನಪೂರ್ಣ(22) ಬಳಿಕ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಅನ್ನಪೂರ್ಣ ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅವರ ಪತ್ನಿ, ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದ ನಿವಾಸಿ. 2 ವರ್ಷಗಳ ಹಿಂದೆ ಮಹದೇವ ಪ್ರಸಾದ್ನನ್ನು ಅನ್ನಪೂರ್ಣ ವಿವಾಹವಾಗಿದ್ದರು. ಪತಿ ಹಾಗೂ ಪತ್ನಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಜಗಳಗಳು ನಡೆಯುತ್ತಿದ್ದವು. ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು, ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಂದಿ ಗೂಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, 150 ಹಂದಿಗಳ ಸಜೀವ ದಹನ ಮಂಡ್ಯ: ಹಂದಿ ಸಾಕಾಣಿಕೆ ಗೂಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು 150 ಹಂದಿಗಳನ್ನು ಸಜೀವ ದಹನ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ. ಪಾಂಡವಪುರದ ಮಹಾತ್ಮಗಾಂಧಿ ನಗರ ಬಡಾವಣೆಯ ಶಿವರಾಜು ಎಂಬುವರಿಗೆ ಸೇರಿದ ಹಂದಿ ಗೂಡು ಇದಾಗಿದೆ. ಶಿವರಾಜು ಪಟ್ಟಣದ ಹೊರ ವಲಯದಲ್ಲಿ ಗೂಡು ನಿರ್ಮಿಸಿಕೊಂಡು ಹಂದಿ ಸಾಕಾಣಿಕೆ ಮಾಡ್ತಿದ್ದರು. ಯಾರೂ ಇಲ್ಲದಿದ್ದನ್ನ ಗಮನಿಸಿ ದುಷ್ಕರ್ಮಿಗಳು ಕುಕೃತ್ಯವೆಸಗಿದ್ದಾರೆ. ಇದರಿಂದ ಶಿವರಾಜು ಸುಮಾರು 15 ಲಕ್ಷ ರೂ ನಷ್ಟ ಅನುಭವಿಸಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳ ಮದುವೆ ಮಾಡಿದ 15 ದಿನಕ್ಕೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಾಲೆಯ ಎಂಜಿನಿಯರ್ ಕುಟುಂಬ
ಹೇಮಾವತಿ ನಾಲಾ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಇಇ) ಹಾಗೂ ಪತ್ನಿ ಮಮತಾ, ಮಗಳು ಶುಭಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುರುವಾರ ಸಂಜೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಿಭಾಗದ ಎಇಇ ರಮೇಶ್ ಹಾಗೂ ಕುಟುಂಬ ಆತ್ಮಹತ್ಯೆ ಶರಣಾಗಿದ್ದಾರೆ. ತಡರಾತ್ರಿ ಓಮಿನಿಯಲ್ಲಿ ಆಗಮಿಸಿದ ರಮೇಶ್, ಪತ್ನಿ ಮಮತ ಹಾಗೂ ಮಗಳು ಶುಭಾ ಅವರುಗಳು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಓಮಿನಿ ಕಾರಿನಲ್ಲಿ ಬಂದಿದ್ದ ಮೂವರೂ ಕೂಡ ಹರಿಯುವ ನೀರಿಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದು ಹಲವು ಅನುಮಾನಗಳು ಹುಟ್ಟು ಹಾಕಿವೆ.
ಇನ್ನು ರಮೇಶ್ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತುಮಕೂರು ನಗರದಲ್ಲಿ ಕುಟುಂಬ ಸಮೇತ ವಾಸವಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಮಗಳು ಶುಭಾಳಿಗೆ ಬೆಂಗಳೂರು ಮೂಲದ ಯುವಕನ ಜೊತೆಗೆ 15 ದಿನಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು.
ಆದರೆ ಮದುವೆಯಾಗಿದ್ದ ಮಗಳ ಜೊತೆ ಏಕಾಏಕಿ ಆಗಮಿಸಿ ನೀರಿಗೆ ಹಾರಿ ಪ್ರಾಣ ಬಿಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಇಇ ರಮೇಶ್ ಗುರುವಾರ ಕೂಡ ಕೆಲಸಕ್ಕೆ ಹಾಜರಾಗಿ ಅರ್ಧ ದಿನ ಕೆಲಸ ಕೂಡ ಮಾಡಿದ್ದರು. ತುಮಕೂರಿನಿಂದ ಕಿಬ್ಬನಹಳ್ಳಿ ಕ್ರಾಸ್ ಗೆ ಪತ್ನಿ ಮತ್ತು ಮಗಳನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಇನ್ನು ಮಗಳ ಮದುವೆ ಬಳಿಕ ಏನಾದರೂ ಕುಟುಂಬದಲ್ಲಿ ಸಮಸ್ಯೆ ಎದುರಾಯಿತಾ ಅಥವಾ ಮಗಳ ಪತಿಯ ಕಡೆಯಿಂದ ಸಮಸ್ಯೆ ಉಂಟಾಗಿದೆಯಾ ಅಂತಾ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
Published On - 7:19 am, Fri, 17 December 21