ಮೈಸೂರು: ಬಸ್‌ನಲ್ಲಿ ಸಿಕ್ಕಿದ ಚಿನ್ನದ ಒಡವೆ; ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ
ರಾವಂದೂರು-ಪಿರಿಯಾಪಟ್ಟಣ ಮಾರ್ಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ಪರ್ಸ್ನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಆನಂದ್ ಪರ್ಸ್ ತೆಗೆದುಕೊಂಡು ಅದರಳೊಗಡೆ ನೋಡಿದ್ದಾರೆ. ವೋಟರ್ ಐಡಿ, 40ಗ್ರಾಂ ಚಿನ್ನದ ಮಾಂಗಲ್ಯ ಸರ, 20ಗ್ರಾಂ ಚಿನ್ನದ ಸರ, 15ಗ್ರಾಂ ಚಿನ್ನದ ಓಲೆ ಮತ್ತು ಜುಮಕಿ ಹಾಗೂ 1 ಸಾವಿರ ಹಣ ಇರುವುದನ್ನು ತಿಳಿದ ಅವರು, ಪ್ರಯಾಣಿಕರ ಮಾಹಿತಿ ಕಲೆಹಾಕಿ ವಾಪಾಸ್ ಹಿಂದಿರುಗಿಸಿದ್ದಾರೆ.

ಮೈಸೂರು, ನ.29: ಬಸ್‌ನಲ್ಲಿ ಸಿಕ್ಕಿದ ಬರೊಬ್ಬರಿ 4 ಲಕ್ಷ ಮೌಲ್ಯದ ಚಿನ್ನದ ಒಡವೆಯನ್ನು ಪಿರಿಯಾಪಟ್ಟಣ(Periyapatna) ಸಾರಿಗೆ ಘಟಕ ನಿರ್ವಾಹಕ ಎಸ್.ಆನಂದ್ ಎಂಬುವವರು ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರದಿದ್ದಾರೆ. ಕರ್ತವ್ಯದ ವೇಳೆ ಬಸ್‌ನಲ್ಲಿ ದೊರೆತ ಸುಮಾರು 75 ಗ್ರಾಂ ಚಿನ್ನದ ಒಡವೆಗಳನ್ನು ವಾರಸುದಾರರನ್ನು ಹುಡುಕಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಯ ಸಂದೇಶವನ್ನು ಸಾರಿದ್ದಾರೆ.
ಘಟನೆ ವಿವರ
ಚಾಲಕ ವಸಂತ್ ಜೊತೆ ನಿರ್ವಾಹಕ ಎಸ್.ಆನಂದ್ ರಾವಂದೂರು-ಪಿರಿಯಾಪಟ್ಟಣ ಮಾರ್ಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ಪರ್ಸ್ನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಆನಂದ್ ಪರ್ಸ್ ತೆಗೆದುಕೊಂಡು ಅದರಳೊಗಡೆ ನೋಡಿದ್ದಾರೆ. ವೋಟರ್ ಐಡಿ, 40ಗ್ರಾಂ ಚಿನ್ನದ ಮಾಂಗಲ್ಯ ಸರ, 20ಗ್ರಾಂ ಚಿನ್ನದ ಸರ, 15ಗ್ರಾಂ ಚಿನ್ನದ ಓಲೆ ಮತ್ತು ಜುಮಕಿ ಹಾಗೂ 1 ಸಾವಿರ ಹಣ ಇರುವುದನ್ನು ತಿಳಿದ ಅವರು, ಪರ್ಸ್ನಲ್ಲಿ ದೊರೆತಿದ್ದ ವೋಟರ್ ಐಡಿ ಮುಖಾಂತರ ಪರ್ಸ್ ಕಳೆದುಕೊಂಡಿದ್ದವರ ಮಾಹಿತಿ ಕಲೆ ಹಾಕಿದ್ದ ಆನಂದ್, ಬಳಿಕ ಅವರು ಪಿರಿಯಾಪಟ್ಟಣ ತಾಲೂಕಿನ ಕಂದೇಗಾಲ ಗ್ರಾಮದ ಮಹಿಳೆ ಎಂಬುದು ತಿಳಿದಿದೆ. ನಂತರ ಅವರನ್ನು ಸಂಪರ್ಕಿಸಿ ಪರ್ಸ್ ವಾಪಸ್ಸು ನೀಡಿದ್ದಾರೆ. ಆನಂದ್ ಅವರ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಮಂಗಳೂರು ಕಂಡಕ್ಟರ್ ಪ್ರಾಮಾಣಿಕತೆಗೆ ಜನ ಮೆಚ್ಚುಗೆ: ವ್ಯಾನಿಟ್ ಬ್ಯಾಗ್ ಮಹಿಳೆಗೆ ವಾಪಸ್
ಮೆಟ್ರೋದಲ್ಲಿ ಸಿಕ್ಕಿದ್ದ ಚಿನ್ನದುಂಗುರವನ್ನು ಮಾಲೀಕರಿಗೆ ಒಪ್ಪಿಸಿದ್ದ ಹೋಂಗಾರ್ಡ್ಸ್
ಇದೇ ಸೋಮವಾರ ಇಂತಹ ಘಟನೆ ಒಂದು ನಡೆದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ದಿವ್ಯಾ ಪ್ರಿಯದರ್ಶಿನಿ ಎಂಬುವವರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು. ಬಳಿಕ ತಮ್ಮ ಬ್ಯಾಂಕ್ಗೆ ಹೋಗಿದ್ದಾರೆ. ಆದರೆ, ಅಲ್ಲಿಗೆ ಹೋದ ಬಳಿಕ ಉಂಗುರ ಕಳೆದಿರುವುದು ಗೊತ್ತಾಗಿದೆ. ತಕ್ಷಣವೇ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದರು.
ಆ ಉಂಗುರವನ್ನು ಗಮನಿಸಿದ ಹೋಂಗಾರ್ಡ್‌ಗಳಾದ ಶಿಲ್ಪಾ ಜಿ ಆರ್ ಮತ್ತು ಈಶ್ವರಮ್ಮ ಅವರು ಬಿಎಂಆರ್ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆಎನ್ ರಾಜಣ್ಣ ಅವರಿಗೆ ಹಸ್ತಾಂತರಿಸಿದ್ದಾರೆ. ಸೋಮವಾರ ಸಂಜೆ 6.45ರ ಸುಮಾರಿಗೆ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ 2ನೇ ಪ್ಲಾಟ್ಫಾರ್ಮ್ನಲ್ಲಿ ರೈಲು ನಿಂತಾಗ ರೈಲಿನ ಲೇಡಿಸ್ ಕೋಚ್ ಬಳಿ ಉಂಗುರು ಬಿದ್ದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Wed, 29 November 23