ಮೈಸೂರಿನಲ್ಲಿ ರಾಮ್ ಚರಣ್: ಶೂಟಿಂಗ್ ಮೊಟಕುಗೊಳಿಸಿ ಹೈದರಾಬಾದ್ಗೆ ವಾಪಸ್ ಹೋಗಿದ್ದು ಯಾಕೆ?
ಟಾಲಿವುಡ್ ನಟ ರಾಮ್ ಚರಣ್ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮೈಸೂರಿನಿಂದ ಹೈದರಾಬಾದ್ಗೆ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..
ಖ್ಯಾತ ನಟ ರಾಮ್ ಚರಣ್ (Ram Charan) ಅವರು ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದರು. ಆದರೆ ಅವರು ಸದ್ಯಕ್ಕೆ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದಾರೆ. ಖಾಸಗಿ ವಿಮಾನದಲ್ಲಿ ಅವರು ಹೈದರಾಬಾದ್ಗೆ ವಾಪಸ್ ಹೋಗಿದ್ದಾರೆ. ಶಂಕರ್ ನಿರ್ದೇಶನದ ‘ಗೇಮ್ ಚೇಂಚರ್’ (Game Changer) ಚಿತ್ರಕ್ಕೆ ಮೈಸೂರಿನಲ್ಲಿ ಶೂಟಿಂಗ್ ಮಾಡಲಾಗುತ್ತಿರುವುದು ವಿಶೇಷ. ಈ ನಡುವೆ ರಾಮ್ ಚರಣ್ ಅವರು ಶೂಟಿಂಗ್ ಮೊಟಕುಗೊಳಿಸಿ ವಾಪಸ್ ಹೋಗಿದ್ದಕ್ಕೆ ವಿಶೇಷ ಕಾರಣ ಇದೆ. ನವೆಂಬರ್ 30ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ (Telangana Election) ಮತ ಚಲಾಯಿಸುವ ಸಲುವಾಗಿ ಅವರು ‘ಗೇಮ್ ಚೇಂಜರ್’ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ರಾಮ್ ಚರಣ್ ಅವರು ಕಾಣಿಸಿಕೊಂಡಿದ್ದಾರೆ. ಖಾಸಗಿ ವಿಮಾನದಲ್ಲಿ ಅವರು ಮೈಸೂರಿನಿಂದ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ರಾಮ್ ಚರಣ್ ಅವರು ವಿಮಾನ ಹತ್ತುವಾಗ ಅವರ ಜೊತೆ ಅಲ್ಲಿನ ಸಿಬ್ಬಂದಿ ಫೋಟೋ ತೆಗೆಸಿಕೊಂಡಿದ್ದಾರೆ. ಗಡಿಬಿಡಿಯಲ್ಲಿ ಇದ್ದರೂ ಕೂಡ ರಾಮ್ ಚರಣ್ ಅವರು ಅಭಿಮಾನಿಗಳ ಜೊತೆ ತಾಳ್ಮೆಯಿಂದ ಫೋಟೋಗೆ ಪೋಸ್ ನೀಡಿದ್ದಾರೆ.
Man Of Masses @AlwaysRamCharan is heading to Hyderabad from Mysore to cast his vote, emphasizing civic duty 🗳️ amidst the Shoot of His Upcoming Film #GameChanger. We Request You All to Use Your Right to Vote like Our Idol !!#TelanganaElections2023pic.twitter.com/BPlI6ZrMvz
— Trends RamCharan (@TweetRamCharan) November 29, 2023
‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಜಕೀಯ ಮತ್ತು ಚುನಾವಣೆ ಕುರಿತಾದ ಕಥಾಹಂದರ ಇದೆ ಎಂದು ನಿರೀಕ್ಷಿಸಲಾಗಿದೆ. ಸಿನಿಮಾದಲ್ಲಿ ಜನರಿಗೆ ಸಂದೇಶ ನೀಡುವ ನಟರು ನಿಜ ಜೀವನದಲ್ಲಿಯೂ ತಮ್ಮ ಕರ್ತವ್ಯವನ್ನು ಮರೆಯುವಂತಿಲ್ಲ. ಹಾಗಾಗಿ ರಾಮ್ ಚರಣ್ ಅವರು ತಪ್ಪದೇ ಮತ ಚಲಾಯಿಸಲಿದ್ದಾರೆ. ಮತದಾನದ ಜವಾಬ್ದಾರಿ ನಿಭಾಯಿಸುವ ಸಲುವಾಗಿ ಅವರು ಚಿತ್ರೀಕರಣವನ್ನು ಮೊಟಕುಗೊಳಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಮತ್ತು ಫೋಟೋ ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Ram Charan: ರಾಮ್ ಚರಣ್ ಮಗಳಿಗೆ ಅಂಬಾನಿ, 1 ಕೋಟಿ ರೂ. ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟಿದ್ದು ನಿಜವೇ?
ಗುರುವಾರ (ನವೆಂಬರ್ 30) ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ ಬಳಿಕ ರಾಮ್ ಚರಣ್ ಅವರು ಪುನಃ ಮೈಸೂರಿಗೆ ಬರಲಿದ್ದಾರೆ. ‘ಗೇಮ್ ಚೇಂಚರ್’ ಸಿನಿಮಾದ ಶೂಟಿಂಗ್ ಮುಂದುವರಿಯಲಿದೆ. ‘ಆರ್ಆರ್ಆರ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಾಮ್ ಚರಣ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ‘ಗೇಮ್ ಚೇಂಚರ್’ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಶಂಕರ್ ಅವರು ನಿರ್ದೇಶನ ಮಾಡುತ್ತಿರುವುದರಿಂದ ಹೈಪ್ ಜೋರಾಗಿದೆ. ಈ ಸಿನಿಮಾಗೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.