AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan: ರಾಮ್​ ಚರಣ್​ ಮಗಳಿಗೆ ಅಂಬಾನಿ, 1 ಕೋಟಿ ರೂ. ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟಿದ್ದು ನಿಜವೇ?

Klin Kaara Konidela: ರಾಮ್ ಚರಣ್-ಉಪಾಸನಾ ಮಗಳಿಗೆ ಮುಖೇಶ್ ಅಂಬಾನಿ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ.

Ram Charan: ರಾಮ್​ ಚರಣ್​ ಮಗಳಿಗೆ ಅಂಬಾನಿ, 1 ಕೋಟಿ ರೂ. ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟಿದ್ದು ನಿಜವೇ?
ಬಂಗಾರದ ತೊಟ್ಟಿಲು, ರಾಮ್​ ಚರಣ್​, ಉಪಾಸನಾ
Follow us
ಮದನ್​ ಕುಮಾರ್​
| Updated By: ಮಂಜುನಾಥ ಸಿ.

Updated on:Jun 30, 2023 | 8:37 PM

ಟಾಲಿವುಡ್​ ಸ್ಟಾರ್​ ನಟ ರಾಮ್​ ಚರಣ್​ (Ram Charan) ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ರಾಮ್​ ಚರಣ್​ ಅವರ ಪತ್ನಿ ಉಪಾಸನಾ ಕೊನಿಡೆಲ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಮುದ್ದಾದ ಮುಗುವಿಗೆ ಇಂದು (ಜೂನ್​ 30) ನಾಮಕರಣ ಮಾಡಲಾಗಿದೆ. ಕ್ಲಿನ್​ ಕಾರಾ ಕೊನಿಡೆಲಾ (Klin Kaara Konidela) ಎಂದು ಹೆಸರು ಇಡಲಾಗಿದೆ. ಈ ಖುಷಿಯ ನಡುವೆ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ರಾಮ್​ ಚರಣ್​-ಉಪಾಸನಾ ಅವರ ಮಗಳಿಗೆ ಚಿನ್ನದ ತೊಟ್ಟಿಲು (Golden Cradle) ಉಡುಗೊರೆಯಾಗಿ ಬಂದಿದೆ, ಮುಖೇಶ್ ಅಂಬಾನಿ ನೀಡಿರುವ ಆ ಚಿನ್ನದ ತೊಟ್ಟಿಲಿನ ಬೆಲೆ  1 ಕೋಟಿ ರೂಪಾಯಿ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ.

ರಾಮ್​ ಚರಣ್​ ಕುಟುಂಬದವರಾಗಲಿ, ಅಂಬಾನಿ ಕುಟುಂಬದವರಾಗಲಿ ಈ ಬಗ್ಗೆ ಮಾತನಾಡಿಲ್ಲ. ಹಾಗಿದ್ದರೂ ಕೂಡ ಈ ರೀತಿ ಸುದ್ದಿ ಹರಿದಾಡುತ್ತಿದೆ. ರಾಮ್​ ಚರಣ್​ ಅವರ ತಂದೆ ಮೆಗಾ ಸ್ಟಾರ್​ ಚಿರಂಜೀವಿ ಅವರು ಚಿತ್ರರಂಗದಲ್ಲಿ ದಿಗ್ಗಜ ನಟ ಎನಿಸಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ವಿವಿಧ ಕ್ಷೇತ್ರದ ಗಣ್ಯರ ಜೊತೆಗೆ ನಂಟು ಇದೆ. ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ರಾಮ್​ ಚರಣ್​ ಮತ್ತು ಉಪಾಸನಾ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ಬಂದಿದೆ ಎಂಬುದು ಸುಳ್ಳು ಸುದ್ದಿ ಎಂಬುದು ಮೂಲಗಳಿಂದ ಖಾತ್ರಿಯಾಗಿದೆ.

ಇದನ್ನೂ ಓದಿ: Oscar Members: ಜೂ. ಎನ್​ಟಿಆರ್​, ರಾಮ್​ ಚರಣ್​ ಮತ್ತೊಂದು ಸಾಧನೆ; ಸಿಕ್ತು ಆಸ್ಕರ್​ ಸದಸ್ಯತ್ವ

ಚಿರಂಜೀವಿ ಮೊಮ್ಮಗಳ ನಾಮಕರಣ ಶಾಸ್ತ್ರವನ್ನು ಸಖತ್​ ಅದ್ದೂರಿಯಾಗಿ ನೆರವೇರಿಸಲಾಗಿದೆ. ಆ ಸಂಭ್ರಮದ ಕ್ಷಣಗಳ ಫೋಟೋಗಳು ವೈರಲ್ ಆಗಿವೆ. ರಾಮ್ ಚರಣ್ ಹಾಗೂ ಉಪಾಸನಾ ಅವರು ಶಾಸ್ತೋಪ್ತವಾಗಿ ಬಿಳಿ ಬಣ್ಣದ ಬಟ್ಟೆಯನ್ನೇ ತೊಟ್ಟಿಲಿನ ಮಾದರಿಯಲ್ಲಿ ಎರಡು ಕಂಬಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಮಲಗಿಸಿ ಶಾಸ್ತ್ರ ಮಾಡಿದ್ದಾರೆ. ಆದರೆ ಮುಖೇಶ್ ಅಂಬಾನಿ ನೀಡಿದ್ದಾರೆ ಎನ್ನಲಾದ ಬಂಗಾರದ ಬಣ್ಣದ ತೊಟ್ಟಿಲಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಆ ಬಂಗಾರದ ಬಣ್ಣದ ತೊಟ್ಟಿಲಿಗೂ ರಾಮ್-ಉಪಾಸನಾಗೂ ಸಂಬಂಧವಿಲ್ಲ.

ಇದನ್ನೂ ಓದಿ: ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟ ರಾಮ್ ಚರಣ್-ಉಪಾಸನಾ: ಹೆಸರಿನ ಅರ್ಥವೇನು?

ಇದು ಸೋಶಿಯಲ್​ ಮೀಡಿಯಾ ಜಮಾನಾ. ಸೆಲೆಬ್ರಿಟಿಗಳ ಮಕ್ಕಳ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗುತ್ತದೆ. ರಾಮ್​ ಚರಣ್​ ಮತ್ತು ಉಪಾಸನಾ ದಂಪತಿಯ ಮಗಳಿಗೆ ಕ್ಲಿನ್​ ಕಾರಾ ಕೊನಿಡೆಲಾ ಎಂದು ನಾಮಕರಣ ಮಾಡಿದ್ದಾರೆ ಎಂಬುದು ಗೊತ್ತಾದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಇದೇ ಹೆಸರಿಲ್ಲಿ ಹಲವಾರು ಖಾತೆಗಳನ್ನು ತೆರೆಯಲಾಗಿದೆ. ಕ್ಲಿನ್​ ಕಾರಾ ಕೊನಿಡೆಲಾ ಫ್ಯಾನ್​ ಪೇಜ್​ ಕೂಡ ಕ್ರಿಯೇಟ್​ ಆಗಿದೆ. ಅದರ ಸ್ಕ್ರೀನ್​ ಶಾಟ್​ ವೈರಲ್​ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:10 pm, Fri, 30 June 23

ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ