ಸೀರಿಯಲ್​ಗೆ ಬಂದ ‘ಗಾಳಿಪಟ’ ನಟಿ ನೀತು; ‘ಕನ್ಯಾದಾನ’ ಧಾರಾವಾಹಿಯಲ್ಲಿ ವಿಶೇಷ ಪಾತ್ರ

ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ‘ಉದಯ’ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತದೆ. ನಟಿ ನೀತು ಅವರ ಆಗಮನದಿಂದ ಸೀರಿಯಲ್​ ಮೆರುಗು ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರು ನಿಭಾಯಿಸಿರುವ ವಿಶೇಷ ಪಾತ್ರವು ಜನರಿಗೆ ಇಷ್ಟ ಆಗಲಿದೆ ಎಂಬ ನಂಬಿಕೆ ಈ ತಂಡಕ್ಕಿದೆ.

ಸೀರಿಯಲ್​ಗೆ ಬಂದ ‘ಗಾಳಿಪಟ’ ನಟಿ ನೀತು; ‘ಕನ್ಯಾದಾನ’ ಧಾರಾವಾಹಿಯಲ್ಲಿ ವಿಶೇಷ ಪಾತ್ರ
‘ಕನ್ಯಾದಾನ’ ಧಾರಾವಾಹಿ ಕಲಾವಿದರು
Follow us
ಮದನ್​ ಕುಮಾರ್​
|

Updated on:Nov 29, 2023 | 6:02 PM

‘ಉದಯ’ (Udaya TV) ವಾಹಿನಿಯಲ್ಲಿ ಅನೇಕ ಬಗೆಯ ಸೀರಿಯಲ್​ಗಳು ಪ್ರಸಾರ ಕಾಣುತ್ತಿವೆ. ದಶಕಗಳಿಂದ ಪ್ರೇಕ್ಷಕರಿಗೆ ಧಾರಾವಾಹಿಗಳ ಮೂಲಕ ಮನರಂಜನೆ ನೀಡಿದ ಈ ಚಾನೆಲ್​ನಲ್ಲಿ ಈಗ ಒಂದಷ್ಟು ಸೀರಿಯಲ್​ಗಳು ಗಮನ ಸೆಳೆಯುತ್ತಿವೆ. ಅವುಗಳ ಪೈಕಿ ‘ಕನ್ಯಾದಾನ’ ಸೀರಿಯಲ್​ (Kanyadana Serial) ಕೂಡ ಪ್ರಮುಖವಾಗಿದೆ. ಇದು ಐವರು ಹೆಣ್ಣುಮಕ್ಕಳ ತಂದೆಯ ಕಥೆ. ಐವರು ಪುತ್ರಿಯರ ಜೀವನ ಯಾವಾಗಲೂ ಸುಂದರವಾಗಿ ಇರಬೇಕು ಎಂದು ಪರಿತಪಿಸುವ ಅಪ್ಪನ ಭಾವನಾತ್ಮಕ ಹೋರಾಟದ ಕಥೆ ಇರುವ ಈ ಧಾರಾವಾಹಿ​ ಈಗಾಗಲೇ 600 ಸಂಚಿಕೆಗಳ ಗಡಿ ದಾಟಿದೆ. ಈ ಧಾರಾವಾಹಿಗೆ ಈಗ ಖ್ಯಾತ ನಟಿ ನೀತು (Neethu) ಅವರು ಎಂಟ್ರಿ ನೀಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಕನ್ಯಾದಾನ’ ಧಾರಾವಾಹಿಯಲ್ಲಿ ವಿಶೇಷ ಸಂಚಿಕೆಗಳ ಪ್ರಯೋಗ ನಡೆದಿದ್ದು ಇದೇ ಮೊದಲೇನೂ ಅಲ್ಲ. ಈ ಮೊದಲು ಕನ್ನಡ ಚಿತ್ರರಂಗದ ಫೇಮಸ್​ ನಟಿ ಸುಧಾರಾಣಿ ಅವರು ಈ ಧಾರಾವಾಹಿಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ಸೀರಿಯಲ್​ನ ಮೆರುಗು ಹೆಚ್ಚಿಸಿದ್ದರು. ಅದೇ ರೀತಿ ಈಗ ‘ಗಾಳಿಪಟ’ ಚಿತ್ರದ ನಟಿ ನೀತು ಅವರು ‘ಕನ್ಯಾದಾನ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಅವರು ಕಾಣಿಸಿಕೊಳ್ಳಲಿರುವ ಸಂಚಿಕೆಗಳು ವೀಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಲಿವೆ.

ಇದನ್ನೂ ಓದಿ: 8 ತಿಂಗಳ ಗರ್ಭಿಣಿ, ಕಿರುತೆರೆ ನಟಿ ಹೃದಯಾಘಾತದಿಂದ ನಿಧನ; ಮಗು ಪರಿಸ್ಥಿತಿ ಏನು?

ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ‘ಕನ್ಯಾದಾನ’ ಧಾರಾವಾಹಿಯ ಕಥಾಹಂದರ ಇಷ್ಟ ಆಗಿದೆ. ವಿಶೇಷವಾಗಿ ಮಹಿಳೆಯರಿಗೆ ಇದು ಹತ್ತಿರವಾಗಿದೆ. ನಿತ್ಯದ ಬದುಕಿಗೆ ಕೈಗನ್ನಡಿ ಹಿಡಿಯುವಂತಹ ಕಥೆ ಇದರಲ್ಲಿ ಇದೆ. ಹೆಣ್ಣಿನ ಬದುಕಿನ ಹಲವು ಮಜಲುಗಳನ್ನು ಹಾಗೂ ಗಂಡನ ಮನೆಯಲ್ಲಿ ಆಕೆ ಎದುರಿಸಬೇಕಾಗುವ ಸವಾಲುಗಳನ್ನು ಈ ಸೀರಿಯಲ್​ನಲ್ಲಿ ತೋರಿಸಲಾಗುತ್ತಿದೆ. ವೀಕ್ಷಕರ ಮನರಂಜನೆಗೆ ಮೊದಲ ಆದ್ಯತೆ ಎಂಬ ಗುರಿಯೊಂದಿಗೆ ಈ ಧಾರಾವಾಹಿ ಮೂಡಿಬರುತ್ತಿದೆ.

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಕಿರುತೆರೆ ನಟಿ; ಪೊಲೀಸರಿಂದ ತನಿಖೆ

‘ಕನ್ಯಾದಾನ’ ಧಾರಾವಾಹಿ ಕಥೆ:

ಅನ್ಯೋನ್ಯವಾಗಿಯೇ ಬೆಳೆದಿರುವ ಸಹೋದರಿಯರಾದ ಅರ್ಚನಾ ಮತ್ತು ದೀಪು ನಡುವೆ ಸದ್ಯಕ್ಕೆ ಪ್ರತಿಷ್ಠೆಯ ಯುದ್ಧ ನಡೆಯುತ್ತಿದೆ. ಗಂಡಂದಿರ ಸ್ವಾಭಿಮಾನದ ವಿಚಾರದಲ್ಲಿ ಇಬ್ಬರ ನಡುವೆ ಶುರುವಾದ ಮನಸ್ತಾಪವು ತಂದೆ ಅಶ್ವತ್ಥನ ಚಿಂತೆಗೆ ಕಾರಣ ಆಗಿದೆ. ಪುತ್ರಿಯರ ನಡುವೆ ಸಂಧಾನ ಮಾಡಿಸಲು ಸಾಧ್ಯವಾಗದೇ ಆತ ಮನೆ ಬಿಟ್ಟು ಹೋಗಿದ್ದಾನೆ. ಅರ್ಚನಾ ಹಾಗೂ ದೀಪು ಮಧ್ಯೆ ಹುಟ್ಟಿಕೊಂಡಿರುವ ಮನಸ್ತಾಪವನ್ನು ನೀತು ಬಗೆಹರಿಸುತ್ತಾರಾ? ಬದುಕಿನಲ್ಲಿ ಹೆಣ್ಣು ಮತ್ತು ಗಂಡಿನ ಸಾಮರಸ್ಯದ ಮಹತ್ವವನ್ನ ಅವರು ಹೇಗೆ ಮನವರಿಕೆ ಮಾಡಿಸುತ್ತಾರೆ ಎಂಬುದನ್ನು ಈ ವಿಶೇಷ ಸಂಚಿಕೆಗಳಲ್ಲಿ ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:21 pm, Wed, 29 November 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್