AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ರತಾಗೆ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್: ಕ್ಯಾಪ್ಟನ್ ನಿರ್ಣಯದ ಬಗ್ಗೆ ಅಸಮಾಧಾನ

Drone Prathap: ಬಿಗ್​ಬಾಸ್ ಮನೆಯಲ್ಲಿ ಎರಡನೇ ಬಾರಿ ತಂಡದ ಕ್ಯಾಪ್ಟನ್ ಆಗಿದ್ದಾರೆ ಪ್ರತಾಪ್, ಆದರೆ ಕ್ಯಾಪ್ಟನ್ ಆದ ಮೊದಲ ದಿನವೇ ತಂಡದ ಸದಸ್ಯರ ಅಸಮಾಧಾನವನ್ನು ಎದುರಿಸಬೇಕಾದ ಸ್ಥಿತಿ ಬಂದಿದೆ.

ನಮ್ರತಾಗೆ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್: ಕ್ಯಾಪ್ಟನ್ ನಿರ್ಣಯದ ಬಗ್ಗೆ ಅಸಮಾಧಾನ
ಮಂಜುನಾಥ ಸಿ.
|

Updated on:Nov 28, 2023 | 11:57 PM

Share

ಮನೆಯ ಕ್ಯಾಪ್ಟನ್ ಈವರೆಗೆ ಆಗದಿರುವ ಡ್ರೋನ್ ಪ್ರತಾಪ್ (Drone Prathap), ಎರಡನೇ ಬಾರಿ ತಂಡದ ಕ್ಯಾಪ್ಟನ್ ಆಗಿದ್ದಾರೆ. ಮೊದಲ ಬಾರಿ ತಂಡದ ಕ್ಯಾಪ್ಟನ್ ಆಗಿದ್ದಾಗ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಡ್ರೋನ್ ಪ್ರತಾಪ್ ಇದೀಗ ಎರಡನೇ ಬಾರಿ ತಂಡದ ಕ್ಯಾಪ್ಟನ್ ಆಗಿರುವಾಗ ಮೊದಲ ದಿನವೇ ತಂಡದ ಸದಸ್ಯರ ಅಸಮಾಧಾನ ಎದುರಿಸುತ್ತಿದ್ದಾರೆ. ಅದರಲ್ಲಿಯೂ ನಮ್ರತಾ ಅಂತೂ ‘ಪ್ರತಾಪ್ ನಿನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಕಣ್ಣೀರು ಹಾಕುತ್ತಾ ಬೇಸರ ತೋಡಿಕೊಂಡಿದ್ದಾರೆ.

ನಮ್ರತಾ, ತಮ್ಮ ಗೆಳೆಯರಾದ ವಿನಯ್, ಸ್ನೇಹಿತ್ ಅವರ ತಂಡವನ್ನು ಬಿಟ್ಟು ಮೊದಲ ಬಾರಿಗೆ ಡ್ರೋನ್ ಪ್ರತಾಪ್ ತಂಡ ಸೇರಿಕೊಂಡರು. ಪ್ರತಾಪ್ ತಂಡದಲ್ಲಿ ಕಾರ್ತಿಕ್, ನಮ್ರತಾ, ಸಿರಿ, ವರ್ತೂರು ಸಂತೋಷ್, ಹೊಸ ಆಟಗಾರ್ತಿ ಪವಿ, ಹಾಗೂ ತುಕಾಲಿ ಸಂತು ಅವರುಗಳು ಇದ್ದರು. ತಂಡದಲ್ಲಿ ಒಬ್ಬರ ಹೆಚ್ಚುವರಿ ಸದಸ್ಯರು ಇರುವ ಕಾರಣ ಒಬ್ಬರನ್ನು ಹೊರಗೆ ಕಳಿಸುವಂತೆ ಬಿಗ್​ಬಾಸ್ ಹೇಳಿದಾಗ, ತಂಡದ ಗಟ್ಟಿ ಆಟಗಾರರಾದ ಕಾರ್ತಿಕ್ ಅನ್ನೇ ಪ್ರತಾಪ್ ಹೊರಗಿಟ್ಟು ತಮ್ಮದೇ ತಂಡವನ್ನು ದುರ್ಬಲಗೊಳಿಸಿಕೊಂಡರು. ಅಸಮಾಧಾನವಿದ್ದರೂ ಸಹ ಕಾರ್ತಿಕ್ ಪ್ರತಾಪ್​ರ ನಿರ್ಣಯವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಬಿಗ್​ಬಾಸ್ ವಹಿಸಿದ ಉಸ್ತುವಾರಿ ಪಟ್ಟವನ್ನು ಉತ್ಸಾಹದಿಂದ ನಿರ್ಣಯಿಸುವುದಾಗಿ ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

ಅದಾದ ಬಳಿಕ ನೀರು ತುಂಬುವ ಟಾಸ್ಕ್​ನಲ್ಲಿ ಪ್ರತಾಪ್​ರ ಎದುರಾಳಿ ತಂಡವಾದ ಮೈಖಲ್ ತಂಡ ಜಯ ಸಾಧಿಸಿತು. ಆಗ ಪ್ರತಾಪ್ ತಂಡದ ಒಬ್ಬರು ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಹೊರಗೆ ಉಳಿಯಬೇಕಾಯ್ತು. ಯಾರನ್ನು ಹೊರಗೆ ಇಡುತ್ತೀರೆಂದಾಗ ಪ್ರತಾಪ್ ತಂಡದ ಎಲ್ಲ ಸದಸ್ಯರು ಹೊಸ ಆಟಗಾರ್ತಿ ಪವಿಯ ಹೆಸರು ಹೇಳಿದರು. ಅಂತಿಮವಾಗಿ ಪ್ರತಾಪ್ ನಿರ್ಣಯವೇ ಅಂತಿಮ ಎಂದು ಬಿಗ್​ಬಾಸ್ ಹೇಳಿದಾಗ, ಪ್ರತಾಪ್, ನಮ್ರತಾ ಹೆಸರು ಹೇಳಿದರು. ಇದು ನಮ್ರತಾಗೆ ತೀವ್ರ ಆಘಾತ ತಂದಿತು.

ನಿಮಗೆ ಕಿಚ್ಚನ ಚಪ್ಪಾಳೆ ಕೊಡಿಸುತ್ತೇನೆ, ಕ್ಯಾಪ್ಟನ್ ಮಾಡಿಸುತ್ತೇನೆ ಎಂದು ಹೇಳಿ ತಂಡಕ್ಕೆ ಕರೆಸಿಕೊಂಡು ಎಲ್ಲರ ಮುಂದೆ ನನಗೆ ಅವಮಾನ ಮಾಡಿದ್ದೀಯ, ಬೇಕೆಂದೇ ಇದನ್ನು ನೀನು ನನಗೆ ಮಾಡಿದ್ದೀಯ, ನಿನ್ನನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ನಮ್ರತಾ ಅತ್ತರು. ಡ್ರೋನ್​ರ ನಿರ್ಣಯವನ್ನು ಅವರ ಗೆಳೆಯರಾದ ತುಕಾಲಿ ಹಾಗೂ ವರ್ತೂರು ಸಂತೋಷ್ ಸಹ ಪ್ರತಾಪ್ ಎದುರೇ ಟೀಕಿಸಿದರು.

ಆದರೆ ತನ್ನ ನಿರ್ಣಯ ಸಮರ್ಥಿಸಿಕೊಂಡ ಪ್ರತಾಪ್, ‘ಇಂದಿನ ಟಾಸ್ಕ್​ನಲ್ಲಿ ನಮ್ರತಾ ಸರಿಯಾಗಿ ಪ್ರದರ್ಶನ ತೋರಲಿಲ್ಲ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಣಯ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು. ಆದರೆ ಅದನ್ನು ಒಪ್ಪುವ ಸ್ಥಿತಿಯಲ್ಲಿ ಅವರದ್ದೇ ತಂಡದ ಸದಸ್ಯರು ಇರಲಿಲ್ಲ. ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 pm, Tue, 28 November 23

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್