ಬಿಗ್ ಬಾಸ್​​​ನಿಂದ ‘ಸೀತಾ ರಾಮ’ ಧಾರಾವಾಹಿ ಮೇಲೆ ನೇರ ಪರಿಣಾಮ; ಇಲ್ಲಿದೆ ಟಿಆರ್​ಪಿ ವಿವರ

ಬಿಗ್ ಬಾಸ್​ನಲ್ಲಿ ಸಾಕಷ್ಟು ಡ್ರಾಮಾಗಳು ನಡೆಯುತ್ತಿವೆ. ಹಲವು ಸ್ಪರ್ಧಿಗಳು ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಪ್ರೀತಿ-ಪ್ರೇಮದ ವಿಚಾರವೂ ಆಗಾಗ ನುಸುಳುತ್ತಿದೆ. ಈ ಎಲ್ಲಾ ಕಾರಣಕ್ಕೆ ಬಿಗ್ ಬಾಸ್ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ.

ಬಿಗ್ ಬಾಸ್​​​ನಿಂದ ‘ಸೀತಾ ರಾಮ’ ಧಾರಾವಾಹಿ ಮೇಲೆ ನೇರ ಪರಿಣಾಮ; ಇಲ್ಲಿದೆ ಟಿಆರ್​ಪಿ ವಿವರ
ವೈಷ್ಣವಿ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Nov 23, 2023 | 2:09 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಆರಂಭ ಆದಾಗಿನಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಹಲವು ಕಾಂಟ್ರವರ್ಸಿಗಳು ಈ ಸೀಸನ್​ನಲ್ಲಿ ಹುಟ್ಟಿಕೊಂಡಿವೆ. ನಿತ್ಯ ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಇದು ಇತರ ವಾಹಿನಿಗಳ ಧಾರಾವಾಹಿಗಳ ಮೇಲೆ ನೇರ ಎಫೆಕ್ಟ್ ಬೀಳುತ್ತಿದೆ. ಬಿಗ್ ಬಾಸ್ ಪೂರ್ಣಗೊಳ್ಳುವವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿದೆ ಎಂಬುದು ಅನೇಕರ ಅಭಿಪ್ರಾಯ.

ಬಿಗ್ ಬಾಸ್​ನಲ್ಲಿ ಸಾಕಷ್ಟು ಡ್ರಾಮಾಗಳು ನಡೆಯುತ್ತಿವೆ. ಹಲವು ಸ್ಪರ್ಧಿಗಳು ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಪ್ರೀತಿ-ಪ್ರೇಮದ ವಿಚಾರವೂ ಆಗಾಗ ನುಸುಳುತ್ತಿದೆ. ಈ ಎಲ್ಲಾ ಕಾರಣಕ್ಕೆ ಬಿಗ್ ಬಾಸ್ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಬಿಗ್ ಬಾಸ್​ಗೆ ನಗರ ಭಾಗದಲ್ಲಿ ವಾರಾಂತ್ಯದಲ್ಲಿ 7.9 ಟಿವಿಆರ್ ಹಾಗೂ ವಾರದ ದಿನಗಳಲ್ಲಿ 7.2 ಟಿವಿಆರ್ ಸಿಕ್ಕಿದೆ.

ಬಿಗ್ ಬಾಸ್ ಎಫೆಕ್ಟ್​ ‘ಸೀತಾ ರಾಮ’ ಧಾರಾವಾಹಿ ಮೇಲೆ ಆಗುತ್ತಿದೆ. ಈ ಮೊದಲು ‘ಸೀತಾ ರಾಮ’ ಉತ್ತಮ ಟಿಆರ್​ಪಿ ಪಡೆಯುತ್ತಿತ್ತು. ಆದರೆ, ಬಿಗ್ ಬಾಸ್ ಪ್ರಸಾರ ಕಾಣಲು ಆರಂಭಿಸಿದ ಬಳಿಕ ‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿಯಲ್ಲಿ ಇಳಿಕೆ ಆಗಿದೆ. ಬಿಗ್ ಬಾಸ್ ಹಾಗೂ ಸೀತಾ ರಾಮ ಧಾರಾವಾಹಿಯ ಪ್ರಸಾರದ ಸಮಯ ಒಂದೇ ಆಗಿದೆ. ಹೀಗಾಗಿ, ಎಫೆಕ್ಟ್ ಉಂಟಾಗಿದೆ. ಇನ್ನು, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗೂ ಕೊಂಚ ಹಿನ್ನಡೆ ಆಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿಲ್ಲ ಸ್ವಚ್ಛತೆ; ಅಡುಗೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾಯ

ಧಾರಾವಾಹಿ ಟಿಆರ್​ಪಿ ವಿವರ..

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ‘ಅಮೃತಧಾರೆ’ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಇದೆ. ಐದನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ತಗ್ಗುತ್ತಲೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ