AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತ್ಸೇ ಪ್ರೀತ್ಸೇ ಎಂದು ಪೀಡಿಸಿದ ಸ್ನೇಹಿತ್; ರೋಸಿ ಹೋಗಿ ಕಣ್ಣೀರು ಹಾಕಿದ ನಮ್ರತಾ ಗೌಡ

‘ನಾನು ಮಾತನಾಡುವುದನ್ನು ನಿಲ್ಲಿಸಲೇ? ನಿಮ್ಮಿಂದ ದೂರ ಹೋಗಲೇ’ ಎಂದು ಸ್ನೇಹಿತ್​ ನೇರವಾಗಿ ಪ್ರಶ್ನೆ ಎಸೆದಿದ್ದಾರೆ. ಇದು ನಮ್ರತಾ ಕೋಪಕ್ಕೆ ಕಾರಣವಾಗಿದೆ.

ಪ್ರೀತ್ಸೇ ಪ್ರೀತ್ಸೇ ಎಂದು ಪೀಡಿಸಿದ ಸ್ನೇಹಿತ್; ರೋಸಿ ಹೋಗಿ ಕಣ್ಣೀರು ಹಾಕಿದ ನಮ್ರತಾ ಗೌಡ
ನಮ್ರತಾ-ಸ್ನೇಹಿತ್
ರಾಜೇಶ್ ದುಗ್ಗುಮನೆ
|

Updated on: Nov 23, 2023 | 7:27 AM

Share

ಸ್ನೇಹಿತ್ ಗೌಡ ಅವರು ನಮ್ರತಾ ಗೌಡ (Namratha Gowda) ಹಿಂದೆ ಸುತ್ತಾಡುತ್ತಿದ್ದಾರೆ. ಹೇಗಾದರೂ ಮಾಡಿ ಅವರ ಜೊತೆ ಆಪ್ತತೆ ಬೆಳೆಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಲೇ ಇದ್ದಾರೆ. ಇದು ಕೆಲವೊಮ್ಮೆ ನಮ್ರತಾಗೆ ಇರಿಟೇಷನ್ ಎನಿಸುತ್ತಿದೆ. ಆದರೂ ಸ್ನೇಹಿತ್ ಗೌಡ ಅವರು ಇದನ್ನು ಮುಂದುವರಿಸುತ್ತಲೇ ಇದ್ದಾರೆ. ಈ ಬಗ್ಗೆ ಕೆಲವೊಮ್ಮೆ ನಮ್ರತಾ ಗೌಡ ನೇರವಾಗಿ ಹೇಳಿದ್ದಿದೆ. ಈಗ ಅವರು ಕಣ್ಣೀರು ಹಾಕುವ ಹಂತಕ್ಕೆ ಹೋಗಿ ತಲುಪಿದೆ.

‘ಸ್ಮೈಲ್ ಮಾಡ್ಕೊಂಡು ಎಲ್ಲದನ್ನೂ ಚಿಲ್ಲಾಗಿ ತೆಗೆದುಕೊಳ್ಳುತ್ತಿದ್ದೀನಿ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದಲ್ಲ’ ಎಂದಿದ್ದಾರೆ ನಮ್ರತಾ ಗೌಡ. ‘ನಾನು ಮಾತನಾಡುವುದನ್ನು ನಿಲ್ಲಿಸಲೇ? ನಿಮ್ಮಿಂದ ದೂರ ಹೋಗಲೇ’ ಎಂದು ಸ್ನೇಹಿತ್​ ನೇರವಾಗಿ ಪ್ರಶ್ನೆ ಎಸೆದಿದ್ದಾರೆ. ಇದು ನಮ್ರತಾ ಕೋಪಕ್ಕೆ ಕಾರಣವಾಗಿದೆ. ‘ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡುತ್ತಿದ್ದೀರಿ’ ಎಂದು ಬೇಸರ ಹೊರಹಾಕಿದರು ನಮ್ರತಾ ಗೌಡ.

‘ನಾವು ಒಬ್ಬರಿಗೊಬ್ಬರು ಹರ್ಟ್ ಮಾಡಿಕೊಳ್ಳುತ್ತಿದ್ದೇವೆ. ಕಾರ್ತಿಕ್ ಹಾಗೂ ಸಂಗೀತಾ ಸಂಬಂಧದ ರೀತಿ ಟಾಕ್ಸಿಕ್ ಆಗುವ ಮೊದಲು ನಾವು ಇದನ್ನು ಸ್ಟಾಪ್ ಮಾಡಬೇಕು. ನಿಮಗೆ ನಿಜಕ್ಕೂ ಏನು ಬೇಕು’ ಎಂದು  ನಮ್ರತಾ ಗೌಡ ಪ್ರಶ್ನೆ ಮಾಡಿದ್ದಾರೆ. ‘ನಿಮಗೆ ಯಾವಾಗಾದರೂ ಒನ್ ಸೈಡ್ ಲವ್ ಇತ್ತ’ ಎಂದು ಸ್ನೇಹಿತ್ ಮರು ಪ್ರಶ್ನೆ ಹಾಕಿದ್ದಾರೆ.

‘ನೀವು ನನ್ನನ್ನು ಲೈಕ್ ಮಾಡ್ತೀರಿ ಅನ್ನೋದು ಗೊತ್ತು. ನನಗೆ ಓಪನ್​ ಆಗೋಕೆ ಸಾಕಷ್ಟು ಸಮಯ ಬೇಕು. ಒಂದು ತಿಂಗಳಲ್ಲಿ ಇದೆಲ್ಲ ಆಗಬೇಕು ಅಂದ್ರ ಆಗಲ್ಲ’ ಎಂದು ನಮ್ರತಾ ಗೌಡ ಬೇಸರ ಹೊರಹಾಕಿದರು. ಈ ಸಂದರ್ಭದಲ್ಲಿ ಅವರ ಕಣ್ಣಲ್ಲಿ ನೀರು ತುಂಬಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿಲ್ಲ ಸ್ವಚ್ಛತೆ; ಅಡುಗೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾಯ

‘ನನಗೆ ಕಳೆದು ಹೋದ ಭಾವನೆ ಕಾಡುತ್ತಿದೆ. ನಾನು ಅಮ್ಮನ ಮಿಸ್ ಮಾಡುಕೊಳ್ಳುತ್ತಿದ್ದೇನೆ. ನನಗೆ ಎಲ್ಲರೂ ಫೇಕ್ ಎನಿಸುತ್ತಾರೆ. ನಾನು ಯಾರನ್ನೂ ನಂಬಲ್ಲ’ ಎಂದು ನೇರವಾಗಿ ಹೇಳಿದ್ದಾರೆ ನಮ್ರತಾ. ಈ ಮೂಲಕ ಸ್ನೇಹಿತ್​ ಅವರಿಂದ ದೂರ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ