ಮೈಸೂರು, ಸೆ.11: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ದಸರಾಗೆ ಕಾಡುಬಿಟ್ಟು ನಾಡಿಗೆ ಬಂದಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಟೀಂ ಭರ್ಜರಿ ತಾಲೀಮು ಮಾಡುತ್ತಿವೆ. ಇದೀಗ ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಾಯೋಜಕತ್ವದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇನ್ನು ಪ್ರಾಯೋಜಕತ್ವದ ವಿವರ ಇಲ್ಲಿದೆ.
ಇತರೆ ಪ್ರಾಯೋಜಕತ್ವಕ್ಕೆ 5 ರಿಂದ 15 ಲಕ್ಷ ನಿಗದಿ ಮಾಡಲಾಗಿದ್ದು, ದಸರೆಯ 6 ಕಡೆ ಜಾಹೀರಾತಿಗೆ ಅವಕಾಶ ನೀಡಲಾಗಿದೆ.
ಇದನ್ನು ಹೊರತುಪಡಿಸಿ ಎಲ್ಇಡಿ ಫ್ಲೆಕ್ಸ್ ಡಿಜಿಟಲ್ ಜಾಹೀರಾತಿಗೆ ಅವಕಾಶವಿದ್ದು, ಮೈಸೂರಿನ ಪ್ರಮುಖ ವೃತ್ತ ರಸ್ತೆಗಳಲ್ಲಿ ಅವಕಾಶವಿದೆ. ಈ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ:ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ಈ ಕುರತು ಮಾತನಾಡಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ‘ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಲವು ಬದಲಾವಣೆಯೊಂದಿಗೆ ಈ ಬಾರಿಯ ದಸರಾ ಹಬ್ಬ ನಡೆಯಲಿದೆ. ದಸರಾ ಪ್ರಾಯೋಜಕರ ಜೊತೆ ಇಂದು ಸಭೆ ನಡೆಸಿದ್ದೇವೆ. ಕಳೆದ ಬಾರಿ ದಸರಾದಲ್ಲಿ 1ಕೋಟಿ 70 ಲಕ್ಷ ಪ್ರಾಯೋಜಕತ್ವ ಬಂದಿತ್ತು. ಹೆಚ್ಚಿನ ಪ್ರಾಯೋಜಕರು ಬಂದರೆ ಕಾರ್ಯಕ್ರಮ ಆಯೋಜನೆ ಸುಲಭ. ಈಗಾಗಲೇ ದಸರಾ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ನಡೆಯುತ್ತಿವೆ ಎಂದು ಮೈಸೂರಿನಲ್ಲಿ ದಸರಾ ಕುರಿತು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ