ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 23, 2023 | 2:59 PM

Hijab Row‌: ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಿಜಾಬ್ ನಿಷೇಧ ಆದೇಶ ವಾಪಸ್​ಗೆ ಯೋಚನೆ ಮಾಡಿದ್ದೇವೆ. ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ
Follow us on

ಮೈಸೂರು, ಡಿಸೆಂಬರ್​ 23: ರಾಜ್ಯದಲ್ಲಿ ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯ ರಾಜಕೀಯ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಪ್ರಶ್ನೆ ಮಾಡಿದ್ದಕ್ಕೆ ಆ ಉತ್ತರ ಕೊಟ್ಟಿದ್ದೇನೆ. ಹಿಜಾಬ್ ನಿಷೇಧ ಆದೇಶ ವಾಪಸ್​ಗೆ ಯೋಚನೆ ಮಾಡಿದ್ದೇವೆ. ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ

ಹಿಜಾಬ್​ ನಿಷೇಧ ಆದೇಶ ವಾಪಸ್​​ ಬಗ್ಗೆ ಸಿಎಂ ಹೇಳಿಕೆಯನ್ನು ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು. ಸಿಎಂ ನಿಲುವೇ ನನ್ನ ನಿಲುವು‌, ಅವರ ಹೇಳಿಕೆಯೇ ನಮ್ಮ ಹೇಳಿಕೆ. ಯಾವಾಗಲೂ ನಾವು ಸಿಎಂ ಸಿದ್ದರಾಮಯ್ಯ ಹಿಂದೆ ಇರುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಹೇಳಿರುವುದರಲ್ಲಿ ತಪ್ಪೇನಿದೆ: ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ

ದಾವಣಗೆರೆಯಲ್ಲಿ ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ.

ಇದನ್ನೂ ಓದಿ: Hijab Row‌: ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇನೆಂದ ಸಿದ್ದರಾಮಯ್ಯ, ಸಿಡಿದೆದ್ದ ಬಿಜೆಪಿ

ಸಿಎಂ ಹೇಳಿರುವುದರಲ್ಲಿ ತಪ್ಪೇನಿದೆ. ಅವರವರ ಸಮುದಾಯಕ್ಕೆ ಅವರದ್ದೇ ಆದ ಸಂಪ್ರದಾಯ ಇರುತ್ತೆ. ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಬಗ್ಗೆ ಸಿಎಂ ಹೇಳಿಕೆ ಸರಿ ಎಂದಿದ್ದಾರೆ.

ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ವಿದ್ಯಾರ್ಥಿನಿ

ಮಂಡ್ಯದಲ್ಲಿ ಹಿಜಾಬ್ ವಾಪಾಸ್ ಪಡೆಯುವ ಸಿಎಂ ಹೇಳಿಕೆಯನ್ನು ಪಿಇಎಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸ್ವಾಗತಿಸಿದ್ದಾರೆ. ಇಸ್ಲಾಂನಲ್ಲಿ ಹಿಜಾಬ್ ಧರಿಸಬೇಕು ಎಂಬುದು ಇದೆ. ಹೀಗಾಗಿ ನಾವು ಧರಿಸಲೇಬೇಕು. ನಮ್ಮ ಹಕ್ಕು ಅದು. ಈ ಹಿಂದೆ ನಿಷೇಧ ಹೇರಿದ್ದು ತೊಂದರೆ ಆಗಿತ್ತು.

ಹಿಜಾಬ್ ಧರಿಸದೇ ನಾವು ಹೊರಗೆ ಬರಲು ಆಗುವುದಿಲ್ಲ. ಕಾಲೇಜಿಗೆ ಬರಲು ಆಗುತ್ತಿರಲಿಲ್ಲ. ಮತ್ತೆ ಅವಕಾಶ ಮಾಡಿಕೊಡುತ್ತಿರುವುದಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:46 pm, Sat, 23 December 23