Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಭದ್ರತಾ ಲೋಪ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜತೆ ಮಾತನಾಡಿದ ಪ್ರತಾಪ್ ಸಿಂಹ

ಸಂಸತ್ತಿನ ಭದ್ರತಾ ಲೋಪ ಪ್ರಕರಣದ ತನಿಖೆಯ ಭಾಗವಾಗಿ ಬಿಜೆಪಿಯ ಲೋಕಸಭೆ ಸದಸ್ಯ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಸಂಸದ ಪ್ರತಾಪ್‌ ಸಂದರ್ಶಕರ ಪಾಸ್‌ ನೀಡಿರುವುದು ಭಾರೀ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಈ ಬಗ್ಗೆ ಇಲ್ಲಿಯವರೆಗೂ ಪ್ರತಾಪ್ ಸಿಂಹ ಯಾವುದೇ ಪ್ರತಿಕ್ರಿಯಿಸಿದೇ ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡಿದ್ದರು. ಇದೀಗ ಅಂತಿಮವಾಗಿ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಲೋಕಸಭಾ ಭದ್ರತಾ ಲೋಪ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜತೆ ಮಾತನಾಡಿದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
Follow us
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Dec 24, 2023 | 10:33 AM

ಮೈಸೂರು, (ಡಿಸೆಂಬರ್ 24): ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಬಳಿಕ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆದ್ರೆ, ಲೋಕಸಭೆಯೊಳಗೆ ನುಗ್ಗಿದ್ದ ಆರೋಪಿಗಳಿಗೆ ಸಂದರ್ಶಕರ ಪಾಸ್ ನೀಡಿರುವ ಬಗ್ಗೆ ಮಾತ್ರ ತುಟಿಕ್ ಪಿಟಿಕ್​ ಎನ್ನದೇ ಕೇವಲ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, ಸ್ಮೋಕ್ ಬಾಂಬ್ ವಿಚಾರಕ್ಕೆ ಪ್ರತಿಕ್ರಿಯೆಗೆ ನಿರಾಕರಿಸಿದ ಪ್ರತಾಪ್ ಸಿಂಹ ಮನೋರಂಜನ್ ವಿಚಾರ ಬಿಟ್ಟು ಕೇಳಿ ಎಂದಿದ್ದಾರೆ. ಪ್ರತಾಪಸಿಂಹ ದೇಶದ್ರೋಹಿನೋ,‌? ದೇಶಪ್ರೇಮಿನೋ ? ಬೆಟ್ಟದಲ್ಲಿ ಕುಳಿತ ಚಾಮುಂಡಿ ತಾಯಿ, ಬ್ರಹ್ಮಗಿರಿಯಲ್ಲಿ ಕುಳಿತ ಕಾವೇರಮ್ಮ ತೀರ್ಮಾನ ಮಾಡುತ್ತಾಳೆ. ಕರ್ನಾಟಕದಲ್ಲಿ ನನ್ನ ಓದುಗರು ತೀರ್ಮಾನಿಸುತ್ತಾರೆ. ಕಳೆದ ಒಂಬತ್ತು ವರ್ಷದಿಂದ ನನ್ನ ಕೆಲಸ‌ ನೋಡಿರುವ ಮೈಸೂರು, ಕೊಡಗು ಜನ ಉತ್ತರ ಕೊಡುತ್ತಾರೆ. 2024 ರ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತೀರ್ಪು ನೀಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭೆ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹ ಅಮಾನತಿಗೆ ಕಾಂಗ್ರೆಸ್ ನಾಯಕರ ಆಗ್ರಹ

ನಾನ್ಯಾರು ಅಂತ ನಿರ್ಧಾರ ಮಾಡುವವರು ಅವರು. ಅವರೇ ಪೂರ್ತಿ ತೀರ್ಮಾನ ಮಾಡುತ್ತಾರೆ. ನಾನು ದೇಶಪ್ರೇಮಿಯೋ, ದೇಶದ್ರೋಹಿಯೋ ಅವರೇ ನಿರ್ಧಾರ ಮಾಡಲಿ.ಆ ವಿಚಾರದಲ್ಲಿ ಏನೂ ಯಾವ ವಿವರಣೆ ಕೊಡುವುದಿಲ್ಲ. ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ ಎಂದರು.

ಸಮವಸ್ತ್ರ ಸಂಹಿತೆ ತಂದಿದ್ದ ಉದ್ದೇಶ ಸಮಾನ ಮನಸ್ಥಿತಿಯಲ್ಲಿ ನಡೆಯಬೇಕು ಎನ್ನುವುದು ಬಡವ ಬಲ್ಲಿದ‌ , ಮೇಲು‌ ಕೀಳು, ಮುಸ್ಲಿಂ‌ ಹಿಂದೂ ಬರಬಾರದು. ನಾವೆಲ್ಲ ಒಂದೇ ಎಂಬ ಭಾವ ಮೂಡಬೇಕು ಎಂಬ ಉದ್ದೇಶ. ಆದರೆ, ಅದನ್ನ ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ವಸ್ತ್ರ ಸಂಹಿತೆ ಎಲ್ಲರಲ್ಲೂ ಒಂದೇ ಎಂಬ ಭಾವ ಮೂಡಿಸುತ್ತದೆ ಎಂದು ಹಿಂಜಾಬ್ ನಿಷೇಧ ವಾಪಸ್ ಪಡೆಯುವುದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಚರ್ಚೆಗೆ ಬಗ್ಗೆ ಪ್ರತಿಕ್ರಿಯಿಸಿ, 2014ರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿತ್ತು. ಈ ವೇಳೆ‌ ಅಲ್ಪ ಸಂಖ್ಯಾತರಿಗೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಯೂನಿವರ್ಸಿಟಿ‌ ನಿರ್ಮಾಣ ಮಾಡಲು ಮುಂದಾಗಿದ್ದರು. ದೇವರಾಜ ಮಾರ್ಕೆಟ್ ವಿಚಾರ ಬಂದಾಗ ಸಿದ್ದರಾಮಯ್ಯ ಮಹರಾಜ ಏನ್ ಅವನ ದೊಡ್ಡು ಕೊಟ್ಟು ತಂದಿದ್ನಾ ಅಂದಿದ್ದರು. ಸಿದ್ದರಾಮಯ್ಯ ಅವರಿಗೆ ಅಭಿಮಾನ ಇರುವುದು ಟಿಪ್ಪುಗೆ ಹೊರೆತು, ರಾಜ ಮನೆತನಕ್ಕಲ್ಲ ಎಂಬುದು ಗೊತ್ತು ಎಂದು ಕಿಡಿಕಾರಿದರು.

ನಮಗೂ ಕೂಡ ಆ ಮನವರಿಕೆ ಬಂದಿದೆ. ವಿಮಾನ ನಿಲ್ದಾಣ‌ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ ನಾಲ್ವಡಿ‌ ಕೃಷ್ಣರಾಜ ಒಡೆಯರ್ ಹೆಸರು ಪ್ರಸ್ತಾಪ‌ ಮಾಡಲಾಗಿದೆ. ಕ್ಯಾಬಿನೇಟ್ ಅಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ‌ ಹೆಸರನ್ನ ಎಂದಿಗೂ ಬದಲಿಸಲು ಸಾಧ್ಯವಿಲ್ಲ ಎಂದರು.

ಇನ್ನು ಸಿದ್ದರಾಮಯ್ಯ ಪ್ರೈವೆಟ್ ಜೆಟ್ ನಲ್ಲಿ ಓಡಾಡಿದ ಬಗ್ಗೆ ಮಾತನಾಡಿ. ನಾನು 2000 ಕೊಟ್ಟೆ, ಕರೆಂಟ್ ಕೊಟ್ಟೆ ಅಂತೀರಿ ಬಿಲ್ ಇವರ ಮನೆಯಿಂದ‌ ಕೊಟ್ರಾ? ನಾನ್ ಮಾಡಿದೆ ಮಾಡಿದೆ ಅಂತೀರಲ್ಲಾ ನಿಮ್ ಮನೆಯಿಂದ ದುಡ್ ತಂದ್ರಾ? ಅವರ ಮಾತಿಗೆ ಅರ್ಥವೇ ಇಲ್ಲ. ಅವರು ವಿವೇಚನಾರಹಿತವಾಗಿ ಮಾತನಾಡುತ್ತಾರೆ. ಪ್ರಧಾನಿ ಅವರಿಗೆ ಪಾರ್ಲಿಮೆಂಟರಲ್ಲಿ‌‌ ತೀರ್ಮಾನಿಸಲಾಗಿದೆ. ಏರ್ ಫೋರ್ಸ್ ಒಂದರಲ್ಲಿ ಅವರು ಓಡಾಡುತ್ತಾರೆ. ಸರ್ಕಾರದ ವಿಮಾನದಲ್ಲಿ ಅವರು ಓಡಾಡುತ್ತಾರೆ. ಪ್ರೈವೇಟ್ ಜೆಟ್ ಅಲ್ಲಿ ಚೇಲಾಗಳನ್ನ ಕೂರಿಸಿಕೊಂಡು ಓಡಾಡಲ್ಲ. ಅವರು ಸರ್ಕಾರದ ವಿಮಾನದಲ್ಲೇ ಓಡಾಡುವುದು. ದೇಶದಲ್ಲಿ 29 ಮಂದಿ ಮುಖ್ಯಮಂತ್ರಿ , 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಎಂ ಇದ್ದಾರೆ. ನೀವು ಅವರ ರೀತಿ ಕಲ್ಪನೆ ಮಾಡಿಕೊಳ್ಳಬೇಡಿ. ನೀವು ಪ್ರಧಾನಿಯನ್ನ ಹೋಲಿಕೆ‌ ಮಾಡಿಕೊಂಡು ಮಾತನಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸೆಂಬರ್ 13 ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಲೋಕಸಭೆಯ ಹಾಲ್‌ಗೆ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಆರೋಪಿಗಳಿಗೆ ಸಂಸದ ಪ್ರತಾಪ್‌ ಸಂದರ್ಶಕರ ಪಾಸ್‌ ನೀಡಿದ್ದರು. ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಾಪ್ ಸಿಂಹ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಆದರೂ ಸಹ ಪ್ರತಾಪ್ ಸಿಂಹ ಇದುವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:24 am, Sun, 24 December 23

ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್