ಮೈಸೂರು, ಏಪ್ರಿಲ್ 16: ಹುಣಸೂರು (Hunasuru) ತಾಲೂಕಿನ ಪಕ್ಷಿರಾಜಪುರದ ನಿವಾಸಿ, ಹಕ್ಕಿಪಿಕ್ಕಿ ಜನಾಂಗದ (Hakkipikki People) ಮಹಿಳೆ ಸುಡಾನ್ನಲ್ಲಿ (Sudan) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನಂದಿನಿ ಮೃತ ದುರ್ದೈವಿ. ನಂದಿನಿ ಅವರು ಸುಡಾನ್ಗೆ ವ್ಯಾಪಾರಕ್ಕಾಗಿ ತೆರಳಿದ್ದರು. ನಂದಿನಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಕ್ಷಿರಾಜಪುರದಲ್ಲಿ ನಂದಿನಿ ಪತಿ ಹಾಗೂ ಮಕ್ಕಳು ವಾಸವಾಗಿದ್ದು, ಮೃತದೇಹನ್ನು ದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸುಡಾನ್ನಲ್ಲಿರುವ ಭಾರತದ ರಾಯಭಾರಿ ಜೊತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮಾತನಾಡಿದ್ದು, ನಂದಿನಿ ಶವ ಏ.17 ರಂದು ಹುಣಸೂರಿಗೆ ಕರೆತರುವ ಸಾಧ್ಯತೆ ಇದೆ.
ದಾವಣಗೆರೆ: ಜಗಳೂರು ತಾಲೂಕಿನ ಸಿದ್ದಯ್ಯನಕೋಟೆ ಹಾಗೂ ಮಾದಾಪುರ ಗ್ರಾಮದ ಕಾಡಂಚಿನಲ್ಲಿ 25 ರಿಂದ 30 ವರ್ಷ ನಡುವಿನ ಶವ ಪತ್ತೆಯಾಗಿದೆ. ಕೊಳತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಯುವಕ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೀಳಿಚೋಡು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಯ ಗುರ್ತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 am, Tue, 16 April 24