AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಕಲ್ಲನ್ನೂ ಬಿಡದ ಖದೀಮರು, ಲಕ್ಷಾಂತರ ರೂ. ಮೌಲ್ಯದ ಕಲ್ಲಿನ ವಿಗ್ರಹಗಳನ್ನು ಕದ್ದು ಸಿಕ್ಕಿಬಿದ್ದರು

ಮೈಸೂರು-ಬೆಂಗಳೂರು ಹೆದ್ದಾರಿಯ ನಾಗನಹಳ್ಳಿ ಗೇಟ್ ಬಳಿ ಕಸ್ತೂರಿ ನಿವಾಸ ಹೋಟೆಲ್ ಪಕ್ಕದ ಕಲ್ಲಿನ ವಿಗ್ರಹ ತಯಾರಿಸುವ ಕಾರ್ಯಾಗಾರದಿಂದ 2 ಲಕ್ಷ ರೂ. ಮೌಲ್ಯದ ಕಲ್ಲಿನ ಆನೆ ವಿಗ್ರಹಗಳನ್ನು ಟಾಟಾ ಜೀಪ್​ನಲ್ಲಿ ಸಾಗಿಸುತ್ತಿದ್ದಾಗ ಇನ್ಸ್​ಪೆಕ್ಟರ್ ದಿವಾಕರ್‌ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಮೈಸೂರು: ಕಲ್ಲನ್ನೂ ಬಿಡದ ಖದೀಮರು, ಲಕ್ಷಾಂತರ ರೂ. ಮೌಲ್ಯದ ಕಲ್ಲಿನ ವಿಗ್ರಹಗಳನ್ನು ಕದ್ದು ಸಿಕ್ಕಿಬಿದ್ದರು
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Aug 24, 2023 | 12:57 PM

ಮೈಸೂರು, ಆ.24: ಮೈಸೂರು-ಬೆಂಗಳೂರು ಹೆದ್ದಾರಿಯ ನಾಗನಹಳ್ಳಿ ಗೇಟ್ ಬಳಿ ಲಕ್ಷಾಂತರ ಮೌಲ್ಯದ ಕಲ್ಲಿನ ವಿಗ್ರಹಗಳನ್ನು ಕದ್ದು(Theft) ಸಾಗಿಸುತ್ತಿದ್ದ 6 ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ(Arrest). ಮನೋಜ್(26), ಕೆ.ಸಚಿನ್(24), ಎನ್.ಸಂತೋಷ್ ಕುಮಾರ್(33), ಚಂದ್ರಶೇಖರ್ ಮೂರ್ತಿ(42), ಗೋಪಾಲ್(36), ನಾಗೇಶ್(30) ಬಂಧಿತ ಆರೋಪಿಗಳು. ಕಸ್ತೂರಿ ನಿವಾಸ ಹೋಟೆಲ್ ಪಕ್ಕದ ಕಲ್ಲಿನ ವಿಗ್ರಹ ತಯಾರಿಸುವ ಕಾರ್ಯಾಗಾರದಿಂದ 2 ಲಕ್ಷ ರೂ. ಮೌಲ್ಯದ ಕಲ್ಲಿನ ಆನೆ ವಿಗ್ರಹಗಳನ್ನು ಟಾಟಾ ಜೀಪ್​ನಲ್ಲಿ ಸಾಗಿಸುತ್ತಿದ್ದಾಗ ಇನ್ಸ್​ಪೆಕ್ಟರ್ ದಿವಾಕರ್‌ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಮತ್ತೆ ಚಿರತೆ ದಾಳಿ, ಹಸು ಸಾವು

ಮೈಸೂರಿನಲ್ಲಿ ಮತ್ತೆ ಚಿರತೆ ಹಸು ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಸಾಲಿಗ್ರಾಮ ತಾಲೂಕು ಕಾವಲ್ ಹೊಸೂರು ಗ್ರಾಮದಲ್ಲಿ ರಾಜೇಶ್ವರಿ ಪ್ರಸನ್ನ ಎಂಬುವರಿಗೆ ಸೇರಿದ ಹಸು ಕೊಟ್ಟಿಗೆಯಲ್ಲಿತ್ತು. ಈ ವೇಳೆ ಚಿರತೆ ಹಸು ಮೇಲೆ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿದ ಹಸುವನ್ನು ಎಳೆದುಕೊಂಡು ಹೋಗಿದೆ. ಕಾವಲು ಅರಣ್ಯ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಕುರಿಗಳು, ನಾಯಿ ಹಾಗೂ ಹಸುಗಳ ಮೇಲೆ ಚಿರತೆಗಳು ನಿರಂತರವಾಗಿ ದಾಳಿ ಮಾಡುತ್ತಿವೆ. ಹೊಸೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನ್ ಅಳವಡಿಸುವಂತೆ ಜನರು ಒತ್ತಾಯಿಸಿದ್ದಾರೆ.

ಸ್ನೇಹಿತರಿಂದಲೇ ಯುವಕನ ಕೊಲೆ, ಆರೋಪಿಯ ತಂದೆ-ತಾಯಿ ಸಾವು

ಮೈಸೂರಿನ ವಿದ್ಯಾನಗರದಲ್ಲಿ ಸ್ನೇಹಿತರಿಂದಲೇ ಯುವಕನ ಕೊಲೆ ನಡೆದಿದೆ. ಮೃತ ಬಾಲರಾಜ್ 28ರ ಯುವಕ. ಸಖತ್ ಆ್ಯಕ್ಟೀವ್ ಆಗಿದ್ದ. ಬಾಲರಾಜ್‌ಗೆ ಸಾಕಷ್ಟು ಸ್ನೇಹಿತರಿದ್ದರು. ಸ್ನೇಹಿತರೆಂದರೆ ಬಾಲರಾಜ್‌ಗೆ ವಿಶೇಷ ಪ್ರೀತಿ. ತಾಯಿ ಪಿಂಚಣಿ ಹಣ ನೀಡಿದ್ರೆ ಅರ್ಧದಷ್ಟು ಸ್ನೇಹಿತರಗೆ ಖರ್ಚು ಮಾಡುತ್ತಿದ್ದ. ವಿಪರ್ಯಾಸ ಅಂದ್ರೆ ಬಾಲರಾಜ್ ತಾನು ಇಷ್ಟಪಡುತ್ತಿದ್ದ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ.

ಇದನ್ನೂ ಓದಿ: ಗಂಡನಿಂದಲೇ ಹೆಂಡತಿಯ ಕೊಲೆ? 20 ದಿನಗಳ ನಂತರ ಶವ ಹೊರತೆಗೆದು ಶವಪರೀಕ್ಷೆ

ಬಾಲರಾಜ್ ವಿದ್ಯಾನಗರದ ತನ್ನ ನಿವಾಸದ ಬಳಿ ಸ್ನೇಹಿತ ತೇಜಸ್ ಜೊತೆ ಮಾತನಾಡುತ್ತಿದ್ದ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮತ್ತಿಬ್ಬರು ಸ್ನೇಹಿತರಾದ ಕಿರಣ್ ಹಾಗೂ ಸಂಜಯ್ ಸಹಾ ಅಲ್ಲಿಯೇ ಇದ್ದರು. ತೇಜಸ್ ಹಾಗೂ ಬಾಲರಾಜ್ ನಡುವೆ ಮಾತಿಗೆ ಮಾತು ಬೆಳೆದಿದೆ. ಬಾಲರಾಜ್ ತೇಜಸ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ತೇಜಸ್ ಈ ವೇಳೆ ತನ್ನ ತಂದೆ ಸಾಮ್ರಾಟ್‌ನನ್ನು ಕರೆ ತಂದಿದ್ದಾನೆ. ಆಗ ಗಲಾಟೆ ಜೋರಾಗಿದೆ. ಬಾಲರಾಜ್ ತೇಜಸ್ ತಂದೆ ಸಾಮ್ರಾಟ್‌ಗೂ ಬೈದಿದ್ದಾನೆ. ಇದರಿಂದ ಆಕ್ರೋಶಗೊಂಡ ತೇಜಸ್ ಬಾಲರಾಜ್‌ಗೆ ಚಾಕುವಿನಿಂದ ಇರಿದಿದ್ದಾನೆ. ಅಷ್ಟೇ ಬಾಲರಾಜ್ ಅಲ್ಲೇ ಕುಸಿದು ಬಿದ್ದಿದ್ದಾನೆ. ತೇಜಸ್ ಆತನ ತಂದೆ ಸಾಮ್ರಾಟ್ ಜೊತೆಯಲ್ಲಿದ್ದ ಕಿರಣ್ ಸಂಜಯ್ ಅಲ್ಲಿಂದ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲರಾಜ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಲರಾಜ್ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡ ನಜರ್‌ಬಾದ್ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬೆಂಗಳೂರಿನಿಂದ ಹಿಡಿದು ತಂದಿದ್ದಾರೆ. ಇಲ್ಲಿ ಮಗನನ್ನು ಮಗನನ್ನು ಕಳೆದುಕೊಂಡ ದುಖಃದಲ್ಲಿ ತಾಯಿ ಹಿಡಿ ಶಾಪ ಹಾಕಿದ್ದರು. ತೇಜಸ್ ಕೊಲೆ ಮಾಡುವಾಗ ಜೊತೆಯಲ್ಲಿದ್ದ ತಂದೆ ಸಾಮ್ರಾಟ್ ಕೂಡ ಬಾಲರಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ಅದೇ ಕಾರಣಕ್ಕೆ ತೇಜಸ್ ಜೊತೆ ಸಾಮ್ರಾಟ್‌ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಮನನೊಂದ ತೇಜಸ್ ತಾಯಿ ಇಂದ್ರಾಣಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಪತ್ನಿಯ ಸಾವಿನ ಸುದ್ದಿ ತಿಳಿದ ಪತಿ ಸಾಮ್ರಾಟ್‌ಗೆ ಜೈಲಿನಲ್ಲಿ ಹೃದಯಾಘಾತವಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ