ತಿಪ್ಪರಲಾಗ ಹಾಕಿದರು ಮೆಡಿಕಲ್ ಸೀಟು ಸಿಗಲಿಲ್ಲ: ಕಾಲೇಜು ದಿನಗಳ ನೆನಪು ಮೆಲಕು ಹಾಕಿದ ಸಿಎಂ ಸಿದ್ದರಾಮಯ್ಯ
ನಮ್ಮ ಮನೆಯಲ್ಲಿ ನಾವು ಒಟ್ಟು 6 ಜನ. ಅದರಲ್ಲಿ ನಾನು ಮಾತ್ರ ಓದಿದವನು. ನಮ್ಮಪ್ಪ ನನ್ನನ್ನು ಡಾಕ್ಟರ್ ಮಾಡಬೇಕು ಅಂದುಕೊಂಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಯುವರಾಜ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದಿಂದ 20ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಕಾಲೇಜು ದಿನದ ನೆನಪು ಮೆಲಕು ಹಾಕಿದ್ದಾರೆ.
ಮೈಸೂರು, ಅಕ್ಟೋಬರ್ 16: ನಮ್ಮ ಮನೆಯಲ್ಲಿ ನಾವು ಒಟ್ಟು 6 ಜನ. ಅದರಲ್ಲಿ ನಾನು ಮಾತ್ರ ಓದಿದವನು. ನಮ್ಮಪ್ಪ ನನ್ನನ್ನು ಡಾಕ್ಟರ್ ಮಾಡಬೇಕು ಅಂದುಕೊಂಡಿದ್ದರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಮೈಸೂರಿನ ಯುವರಾಜ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದಿಂದ 20ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಪಿಯುಸಿಯಲ್ಲಿ ಸರಿಯಾಗಿ ಅಂಕ ಬರಲಿಲ್ಲ. ಹಾಗಾಗಿ 2nd ಕ್ಲಾಸ್‌ನಲ್ಲಿ ಪಾಸಾದೆ. ನಾರಾಯಣ್ ಗೌಡ ಮೆಡಿಕಲ್ ಸೇರಿಕೊಂಡಿದ್ದ. ಅದಕ್ಕೆ ನೀನು ಮೆಡಿಕಲ್ ಸೇರಬೇಕು ಅಂತಾ ನಮ್ಮ ಅಪ್ಪ ಪಟ್ಟು ಹಿಡಿದಿದ್ದರು. ಆದರೆ ತಿಪ್ಪರಲಾಗ ಹಾಕಿದರು ಮೆಡಿಕಲ್ ಸೀಟು ಸಿಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ದಿನದ ನೆನಪು ಮೆಲಕು ಹಾಕಿದ್ದಾರೆ.
1968ರಲ್ಲಿ ನಾಲ್ಕು ವರ್ಷ ವಿದ್ಯಾರ್ಥಿಯಾಗಿದ್ದೆ. ಎಂಎಸ್ಸಿ, ಬಾಟ್ನಿ ಸೀಟಿಗಾಗಿ ಬೆಂಗಳೂರಿಗೆ ಹೋಗಿ ಗೋಗರೆದೆ. ಆದಾಯ ಪ್ರಮಾಣ ಪತ್ರ ತರಲು ಹೇಳಿದ್ದರು. ನನಗೆ 54% ಬಾಟ್ನಿಯಲ್ಲಿ ಬಂದಿತ್ತು. ಬಾಟ್ನಿ ಸಿಗದ ಕಾರಣ ಓದು ಬೇಡ ಅಂತ ವ್ಯವಸಾಯ ಮಾಡಲು ಹೋಗಿದ್ದೆ. ಒಂದು ವರ್ಷ ವ್ಯವಸಾಯ ಮಾಡಿಕೊಂಡು ಇದ್ದೆ. ಲಾ ಸೇರುವವರೆಗೂ ಹೊಲ ಗದ್ದೆ ಉಳುತ್ತಿದೆ.
ಇದನ್ನೂ ಓದಿ: ದೇವೇಗೌಡರು ಜೆಡಿಎಸ್ನಿಂದ ಉಚ್ಚಾಟನೆ ಮಾಡಿಕ್ಕೆ ಕಾಂಗ್ರೆಸ್ ಸೇರಬೇಕಾಯ್ತು: ಸಿಎಂ ಸಿದ್ದರಾಮಯ್ಯ
ಪಕ್ಕದ ಜಮೀನಿನವರ ಜೊತೆ ಜಗಳ ಆಡಿಕೊಂಡು ಮೈಸೂರಿಗೆ ಬಂದೆ. ಲಾ ಕಾಲೇಜು ಬೇಡ ಅಂತಾ ನಮ್ಮ ಶಾನಭೋಗ ಚೆನ್ನಪ್ಪ ನಮ್ಮ ಅಪ್ಪನಿಗೆ ಹೇಳಿದ್ದ. ನಿನ್ ಮಗ ಅಲ್ಲಿ ಪೋಲಿ ಬೀಳುತ್ತಾನೆ ಅಂತಾ ಹೇಳಿದ್ದರು. ಅದಕ್ಕೆ ನಮ್ಮ ಅಪ್ಪ ಲಾ ಕಾಲೇಜು ಸೇರಿಸಲ್ಲ ಎಂದಿದ್ದರು.
ವೇದಿಕೆ ಮೇಲೆಯೇ ಗೋವಿಂದರಾಜುಗೆ ಸಿಎಂ ಕ್ಲಾಸ್
ನಾನು ಸೇರಿಸು ಇಲ್ಲ ಆಸ್ತಿ ಪಾಲು ಕೊಡು ಅಂತಾ ಹೇಳಿದ ಮೇಲೆ ಸೇರಿಸಿದರು. ಪ್ರೊ. ನಂಜುಂಡಸ್ವಾಮಿ ಇಲ್ಲದೆ ಇದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ. ಸಿಎಂ ಸಹಾ ಆಗುತ್ತಿರಲಿಲ್ಲ. ಲಾಯರ್ ಅಥವಾ ಪ್ರೊಫೆಸರ್ ಆಗಿರುತ್ತಿದೆ. ಈ ವೇಳೆ ಹಣೆಬರಹ ಎಂದು ಪೊಲಿಟಿಕಲ್ ಸೆಕ್ರೆಟರಿ ಗೋವಿಂದ ರಾಜು ಹೇಳಿದ್ದಾರೆ. ನೀನು ವಿಜ್ಞಾನ ಓದಿ ಹಣೆಬರಹ ಅಂತಾ ನಂಬಿರುವುದು ದುರಂತ ಎಂದು ಗೋವಿಂದರಾಜುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಇದು ಲೂಟಿ ಸರ್ಕಾರ, ಎಟಿಎಂ ಸರ್ಕಾರ; ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ಕಿಡಿ
ಹಣೆ ಬರಹ ಅನ್ನೋದನ್ನು ಬ್ಲೈಂಡ್ ಆಗಿ ಬಳಸುತ್ತಿದ್ದೇವೆ. ಅವಕಾಶಗಳು ಮುಖ್ಯ. ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು. ದೇವರು ಪೊಲಿಟಿಕಲ್ ಸೆಕ್ರೆಟರಿ ಆಗು ಅಂತಾ ಬರೆದಿದ್ದನಾ? ಹೋಗು ಆಪರೇಷನ್ ಮಾಡಿಸಿ ನೋಡಪ್ಪ ಬರೆದಿದೆಯಾ ಅಂತ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.