ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವಬೆದರಿಕೆ; ಪೊಲೀಸ್​ ಠಾಣೆಗೆ ದೂರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2022 | 9:53 AM

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ನನ್ನ ಮೇಲೆ ಜೀವ ಬೆದರಿಕೆ ಬಂದಿದೆ ಎಂದು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾರೆ.

ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವಬೆದರಿಕೆ; ಪೊಲೀಸ್​ ಠಾಣೆಗೆ ದೂರು
ಅಡ್ಡಂಡ ಕಾರ್ಯಪ್ಪ
Follow us on

ಮೈಸೂರು: ಟಿಪ್ಪು ನಿಜ ಕನಸು ನಾಟಕವನ್ನು ರಚಿಸಿದ್ದ ಅಡ್ಡಂಡ ಕಾರ್ಯಪ್ಪ ಅವರಿಗೆ ಶಿವಮೊಗ್ಗ ಬ್ರಾಹ್ಮಣ ಬೀದಿಯ ವಿಳಾಸದಿಂದ ‘ನೀವಿಗಾ ಸಾಯುವ ಕೊಲೆಯಾಗುವ ಹಂತ ತಲುಪಿದ್ದೀರಾ, ನಿಮ್ಮನ್ನು ನೀವು ನಂಬಿರುವ ದೇವರು ಸಹಾ ಉಳಿಸುವುದಿಲ್ಲ, ಎಂದು ಬರೆದ ಬೆದರಿಕೆ ಪತ್ರ ಬಂದಿರುವ ಕುರಿತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಬೆದರಿಕೆ ನೀಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಪ್ರಾಣ ಬೆದರಿಕೆ ಹಿನ್ನಲೆ ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ತೀವ್ರ ವಿರೋಧದ ನಡುವೆ ಟಿಪ್ಪು ನಿಜಕನಸು ನಾಟಕ ಕೃತಿ ರಚಿಸಿ, ನಾಟಕವನ್ನು ನಿರ್ದೇಶನ
ಮಾಡಿದ್ದರು. ಮೈಸೂರಿನ ಮಹೇಶ್ ಚಂದ್ರ ಗುರುವಿನಿಂದ ನಾಟಕ ಪ್ರದರ್ಶನ ಮಾಡಿದ ಮೇಲೆ ವಿಡಿಯೋ ಮಾಡಿ ನನ್ನ ಬಗ್ಗೆ ಟೀಕೆ ಮಾಡಿದ್ದರು ಇದರಿಂದ ಪ್ರಚೋದನೆಗೊಂಡು ಬೆದರಿಕೆ ಪತ್ರ ಬಂದಿದೆ. ಎಂದಿದ್ದಾರೆ.

ಇತ್ತೀಚೆಗಷ್ಟೇ ಟಿಪ್ಪು ನಿಜಕನಸು ನಾಟಕ ರಂಗಾಯಣದ ಭೂಮಿ ಗೀತದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
25ಪಾತ್ರಧಾರಿಗಳು, ಐವರ ತಾಂತ್ರಿಕ ವರ್ಗ ಸೇರಿ ಒಟ್ಟು 30 ಜನರ ತಂಡದಿಂದ ನಾಟಕ ಪ್ರದರ್ಶನಗೊಂಡಿತ್ತು. ಒಟ್ಟು 3 ಗಂಟೆ 10 ನಿಮಿಷದ ನಡೆದ ಈ ನಾಟಕದಲ್ಲಿ ಮೇಲುಕೋಟೆ ದುರಂತ, ಮಂಡಿಯಂ ಅಯ್ಯಂಗಾರ್​ರ 700 ಬ್ರಾಹ್ಮಣರ ಹತ್ಯೆ ವಿಚಾರ, ಕೊಡಗಿನಲ್ಲಿ ನಡೆದ ದೊಡ್ಡ ಸಂಖ್ಯೆಯ ಮತಾಂತರ, ಕೊಡವರ ಹತ್ಯೆ, ಟಿಪ್ಪು ಸುಲ್ತಾನ್ ಆಡಳಿತದಲ್ಲಿ ತೆಗೆದುಕೊಂಡ ಇಸ್ಲಾಮಿಕ್ ತೀರ್ಮಾನಗಳು, ಆತ ಬರೆದ ಪತ್ರಗಳ‌ ದೃಶ್ಯಾವಳಿಗಳು, ಟಿಪ್ಪು ತಾಯಿ, ಪತ್ನಿಯಿಂದ ಮತಾಂಧತೆಗೆ ವಿರೋಧದ ದೃಶ್ಯಗಳು ಎಲ್ಲರ ಗಮನ ಸೆಳೆದಿತ್ತು.

ಇದನ್ನೂ ಓದಿ:ಮೈಸೂರು: ಆರೋಗ್ಯ ಕರ್ನಾಟಕ ಆಗಬೇಕೆಂಬುದು ಮುಖ್ಯಮಂತ್ರಿಗಳ ಕನಸು ಎಂದ ಡಾ.ಕೆ.ಸುಧಾಕರ್

ನಾಟಕಕ್ಕೆ ಶಾಸಕ ತನ್ವೀರ್ ಸೇಠ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಂಗಾಯಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಈ ನಾಟಕವನ್ನು ಸಾಹಿತಿ ಎಸ್.ಎಲ್.ಭೈರಪ್ಪ, ಶಾಸಕ ಕೆ.ಜಿ ಬೋಪಯ್ಯ ಸೇರಿ ಹಲವು ಗಣ್ಯರು ಈ ನಾಟಕವನ್ನು ವೀಕ್ಷಿಸಿದರು. ರಾಜ್ಯದ ಇತರ ಜಿಲ್ಲೆಗಳಲ್ಲಿ 85 ಪ್ರದರ್ಶನ ಮಾಡಲು ನಿರ್ಧರಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:02 am, Wed, 30 November 22