AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್​ನವರಿಗೆ ಸಮಾಜದಲ್ಲಿ ಬದಲಾವಣೆ ಬೇಕಿಲ್ಲ, ದೇಶಕ್ಕೆ ಅವರಿಂದ ಕೊಡುಗೆ ಏನೂ ಇಲ್ಲ: ಸಿದ್ಧರಾಮಯ್ಯ ವಾಗ್ದಾಳಿ

ಆರ್​ಎಸ್​ಎಸ್‌ನ ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನ ತೋರಿಸಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರ್​​ಎಸ್​​ಎಸ್​ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಆರ್​ಎಸ್​ಎಸ್​ನವರಿಗೆ ಸಮಾಜದಲ್ಲಿ ಬದಲಾವಣೆ ಬೇಕಿಲ್ಲ, ದೇಶಕ್ಕೆ ಅವರಿಂದ ಕೊಡುಗೆ ಏನೂ ಇಲ್ಲ: ಸಿದ್ಧರಾಮಯ್ಯ ವಾಗ್ದಾಳಿ
Siddaramaiah
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 30, 2022 | 3:03 PM

Share

ಮೈಸೂರು: ಆರ್​ಎಸ್​ಎಸ್​ನವರಿಗೆ (rss) ಸಮಾಜದಲ್ಲಿ ಬದಲಾವಣೆ ಬೇಕಿಲ್ಲ. ದೇಶಕ್ಕೆ ಅವರಿಂದ ಕೊಡುಗೆ ಏನೂ ಇಲ್ಲ. ಆರ್​ಎಸ್​ಎಸ್‌ನ ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನ ತೋರಿಸಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಆರ್​​ಎಸ್​​ಎಸ್​ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಕುರುಬ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾಮಾಜಿಕ ಅವ್ಯವಸ್ಥೆ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ದೇಶಭಕ್ತ. ಶೋಷಣೆ ಮಾಡಲು ಅಸಮಾನತೆ ಇರಬೇಕೆಂದು ಬಯಸುತ್ತಾರೆ. ಮುಸ್ಲಿಮರನ್ನು ಬೆದರು ಗೊಂಬೆಯಾಗಿಟ್ಟುಕೊಂಡು‌ ದೇಶ ಇಬ್ಭಾಗ ಮಾಡಿದರು ಎಂದು ಹೇಳಿದರು.

1988ರಲ್ಲಿ ಸಾರಿಗೆ ಇಲಾಖೆಯ ಸಚಿವನಾಗಿದ್ದೆ. ಕನಕದಾಸರ ಕೃತಿ ಕಡಿಮೆ ದರದಲ್ಲಿ ಹಂಚುವ ಕೆಲಸ ಮಾಡಿದ್ದೆ. ಬಳಿಕ ಎಲ್ಲ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕನಕದಾಸರ ಜಯಂತಿ ಆಚರಣೆ ಆರಂಭವಾಯಿತು. ಬಳಿಕ ನಮ್ಮ ಕುರುಬ ಸಮಾಜ ಜಾಗೃತಿಗೊಂಡಿತು. 1971-72ರಲ್ಲಿ ಕಾಳಿದಾಸ ವಿದ್ಯಾರ್ಥಿ ಬಳಗವನ್ನು ಆರಂಭಿಸಿದೆವು. ಹೆಚ್.ವಿಶ್ವನಾಥ್ ಮತ್ತು ನಾನು ವಿದ್ಯಾರ್ಥಿ ಬಳಗವನ್ನು ಆರಂಭಿಸಿದೆವು. ಇತಿಹಾಸ ಗೊತ್ತಿಲ್ಲದವರು ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ಅಸಮಾನತೆ ವಿರುದ್ಧ ಧ್ವನಿ ಎತ್ತಿದವರು ಕನಕದಾಸರು, ಬುದ್ಧ, ಬಸವಣ್ಣ. ಹಿಂದುಳಿದವರು ಇಂದು ಉನ್ನತ ಸ್ಥಾನಕ್ಕೇರಲು ಸಂವಿಧಾನ​​ ಕಾರಣ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಅ ಆ ಇ ಈ ಪ್ರಾರಂಭಿಸಿದ್ದಾರೆ: ಸಿದ್ದು ಪರ ಬಿಜೆಪಿ ನಾಯಕ ಬ್ಯಾಟಿಂಗ್

ಸಿದ್ದರಾಮಯ್ಯ ಫೋಟೋ ಹಿಡಿದು ಶಬರಿಮಲೆ ಯಾತ್ರೆಗೆ ಸಾಗಿದ ಅಭಿಮಾನಿಗಳು

ಸಿದ್ಧರಾಮಯ್ಯ ಸಿಎಂ ಆಗಬೇಕೆಂದು ಅಯ್ಯಪ್ಪಸ್ವಾಮಿ ಭಕ್ತರಿಂದ ಹರಕೆ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಫೋಟೋ ಹಿಡಿದು ಶಬರಿಮಲೆ ಯಾತ್ರೆಗೆ ಸಾಗಿದ್ದಾರೆ. ಮೈಸೂರಿನ ಟಿ.ಕೆ.ಬಡಾವಣೆಯ ಅಯ್ಯಪ್ಪ ಮಾಲಾಧಾರಿಗಳಿಂದ ಹರಕೆ ಕೈಗೊಳ್ಳಲಾಗಿದೆ. ಇರುಮುಡಿ ಜೊತೆ ಅಭಿಮಾನಿಗಳು ಸಿದ್ದರಾಮಯ್ಯ ಫೋಟೋ ಹಿಡಿದು ಶಬರಿಮಲೆ ಬೆಟ್ಟ ಏರಿದ್ದಾರೆ. ಅಯ್ಯಪ್ಪನ ಭಜನೆ ಜೊತೆಗೆ ಸಿದ್ದರಾಮಯ್ಯಗೂ ಅಭಿಮಾನಿಗಳು ಜೈಕಾರ ಹಾಕಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬೆನ್ನಲ್ಲೇ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಮುನಿಯಪ್ಪ: ಕುತೂಹಲ ಕೆರಳಿಸಿದ ನಾಯಕರ ನಡೆ

ಸಿದ್ದರಾಮಯ್ಯ ಸ್ವಾಭಿಮಾನದ ಪ್ರತೀಕ, ಅವರು ಮತ್ತೆ ಸಿಎಂ ಆಗುವ ಅವಕಾರವಿದೆ:  ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ

ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು. ಸಿದ್ದರಾಮಯ್ಯ ಬಗ್ಗೆ ಯುವಕನೋರ್ವ ಬರೆದ ಪುಸ್ತಕವನ್ನು ಓದಿದೆ. ಮೊದಲ ಮತ ಹಾಕಿದ ವ್ಯಕ್ತಿ ಸಿಎಂ ಆಗಿದ್ದಾರೆ ಎಂದು ಬರೆದಿದ್ದಾನೆ. ಸದ್ಯ ಯುವಕರಿಗೆ ಮತ್ತೊಂದು ಅವಕಾಶವಿದೆ. ಹೀಗಾಗಿ ಯುವಕರು ಮತ್ತೊಮ್ಮೆ ಸಿದ್ದರಾಮಯ್ಯಗೆ ಮತ ಹಾಕಿ. ಕನಕದಾಸರ ಜಯಂತಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಎರಡನ್ನು ಒಟ್ಟಿಗೆ ಆಚರಣೆ ಮಾಡಲಾಗಿದೆ.

75 ನೇ ವರ್ಷಕ್ಕೆ 75 kg ತೂಕದ ಕೇಕ್ ಕಟ್ ಮಾಡಿದ್ದಾರೆ. ಸಿದ್ದರಾಮಯ್ಯ ಸ್ವಾಭಿಮಾನದ ಪ್ರತೀಕ. ಅನ್ನವಿಲ್ಲದೆ ಬದುಕಬಹುದು, ಆದರೆ ಸ್ವಾಭಿಮಾವಿಲ್ಲದೆ ಬದುಕಲಾರದು. ಸಿದ್ದರಾಮಯ್ಯ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಕೆಳ ಸಮುದಾಯ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟಿದ್ದಾರೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ