ಸಿದ್ದರಾಮಯ್ಯ ಸೋಲಿಸಲು ಅ ಆ ಇ ಈ ಪ್ರಾರಂಭಿಸಿದ್ದಾರೆ: ಸಿದ್ದು ಪರ ಬಿಜೆಪಿ ನಾಯಕ ಬ್ಯಾಟಿಂಗ್
ಸಿದ್ದರಾಮಯ್ಯ ಸೋಲಿಸಲು ಅ ಆ ಇ ಈ ಪ್ರಾರಂಭಿಸಿದ್ದಾರೆ. ಆದ್ರೆ, ಸಿದ್ದರಾಮಯ್ಯ ಗೆಲ್ಲಲಿದ್ದಾರೆ ಎಂದು ಬಿಜೆಪಿ ನಾಯಕ ಅಚ್ಚರಿ ಹೇಳಿಕೆ ನೀಡಿದ್ದಾರೆ
ಮೈಸೂರು: ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ (H Vishwanath) ಅವರು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddarmaiah) ವಿರುದ್ಧ ಗಂಭೀರ ಆರೋಪಗಳನ್ನ ಮಾಡಿ ಕೊನೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದ್ರೆ, ಇದೇ ವಿಶ್ವನಾಥ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು(ನವೆಂಬರ್ 26) ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಸೋಲಿಸಲು ಅ ಆ ಇ ಈ ಪ್ರಾರಂಭಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿಸಿದ ರೀತಿ ತಂತ್ರ ಎಣೆಯುವ ಕಾರ್ಯ ಈಗೀಗ ಪ್ರಾರಂಭವಾಗುತ್ತಿದೆ. ಆದರೆ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರು ಗೆಲ್ಲಲಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸಿದರೂ ಗೆಲ್ಲಲಿದ್ದಾರೆ ಎಂದು ಹಳ್ಳಿ ಹಕ್ಕಿ ಸಿದ್ದು ಬಗ್ಗೆ ಸಾಫ್ಟ್ ಕಾರ್ನರ್ ತೋರಿದರು.
ಈ ಹಿಂದೆ ಕಾಂಗ್ರೆಸ್ ಬಿಟ್ಟ ಬಿಟ್ಟ ಮೇಲೆ ರಾಜಕೀಯವಾಗಿ ಸಿದ್ದರಾಮಯ್ಯನವರನ್ನು ಕಡು ವಿರೋಧಿ ರೀತಿಯಲ್ಲಿ ಕಾಣುತ್ತಿದ್ದ ವಿಶ್ವನಾಥ್, ಇತ್ತೀಚೆಗೆ ಏಕಾಏಕಿ ಸಿದ್ದರಾಮಯ್ಯನವರ ಮೇಲೆ ಕನಿಕರದ ಮಾತುಳನ್ನಾಡುತ್ತಿದ್ದ ಕುತೂಲಹಲಕ್ಕೆ ಕಾರಣವಾಗಿದೆ.
ಸಿಎಂ ಕೂಡಲೇ ಹಣಕಾಸು ಇಲಾಖೆಗೆ ಒಬ್ಬ ಸಚಿವರನ್ನು ನೇಮಿಸಬೇಕು. ಸಿಎಂ ಬಳಿ 8ರಿಂದ 10 ಇಲಾಖೆಗಳಿವೆ. ಯಾವ ಯಾವ ಇಲಾಖೆಗಳು ಸಿಎಂ ಬಳಿ ಇರುತ್ತದೆಯೋ ಅದು ಸತ್ತು ಹೋಗುತ್ತದೆ. ಈ ಹಿಂದೆ ದೇವರಾಜ ಅರಸು, ವೀರಪ್ಪ ಮೊಯ್ಲಿ ಅಂತವರು ಹಣಕಾಸು ಖಾತೆಯನ್ನು ತಾವೇ ನಿಭಾಯಿಸದೆ ಇತರರಿಗೆ ನೀಡಿದ್ದರು. ಹಣಕಾಸು ಖಾತೆ ನಿಭಾಯಿಸಲು ಹೆಚ್ಚು ಸಮಯಬೇಕು. ಆದರೆ ಸಿಎಂ ಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸಿಎಂ ತಮ್ಮ ಬಳಿ ಇರುವ ಹಣಕಾಸು ಖಾತೆಯನ್ನ ಬೇರೆಯವರಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಇನ್ನು ಇದೇ ವೇಳೆ ಜಿಎಸ್‌ಟಿ ವಿರುದ್ಧ ಕಿಡಿಕಾರಿದ ವಿಶ್ವನಾಥ್, ಉಪ್ಪಿನ ಮೇಲೆ ತೆರಿಗೆ ಹಾಕಿದ್ದಕ್ಕೆ ಅಂದು ಗಾಂಧೀಜಿ ಸತ್ಯಾಗ್ರಹ ಮಾಡಿದ್ರು. ಇಂದು ಅದೇ ಉಪ್ಪಿನ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ರಾಜ್ಯದಲ್ಲಿ GSTಯಿಂದ 24ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ. ಈ ಪೈಕಿ 12 ಸಾವಿರ ಕೋಟಿ ಹಣವನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. ಹೆಚ್ಚು GST ಕಟ್ಟುವವರ ಪೈಕಿ ದೇಶದಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ. ಗುಜರಾತ್ ಮೊದಲನೇ ಸ್ಥಾನದಲ್ಲಿ ಇದೆ ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:59 pm, Sat, 26 November 22