ಮೈಸೂರು ದಸರಾದಲ್ಲಿ ಕಲಾರಸಿಕರಿಗೆ ರಸದೌತಣ; ಇಂದಿನ ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ

| Updated By: ಆಯೇಷಾ ಬಾನು

Updated on: Oct 04, 2024 | 7:28 AM

ದಸರಾ ಮಹೋತ್ಸವದ ಪ್ರಯುಕ್ತ ಅ. 3ರಿಂದ 12ರವರೆಗೆ 10 ದಿನ ನಗರದ ನಾನಾ ಭಾಗಗಳಲ್ಲಿ21 ವೇದಿಕೆಗಳಲ್ಲಿ ನಾನಾ ಕಾರ‍್ಯಕ್ರಮಗಳು ನಡೆಯಲಿವೆ. ಅದರಲ್ಲಿ 11 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳೇ ಇರಲಿವೆ. ಹಾಗಾದ್ರೆ ದಸರಾ ಮಹೋತ್ಸವದ 2ನೇ ದಿನವಾದ ಇಂದು ಯಾವೆಲ್ಲಾ ಕಾರ್ಯಕ್ರಮಗಳಿವೆ ಇಲ್ಲಿ ತಿಳಿಯಿರಿ.

ಮೈಸೂರು ದಸರಾದಲ್ಲಿ ಕಲಾರಸಿಕರಿಗೆ ರಸದೌತಣ; ಇಂದಿನ ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಮೈಸೂರು, ಅ.04: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಲರವ ಶುರುವಾಗಿದೆ (Mysuru Dasara). ನಿನ್ನೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು ದಸರಾ ಮಹೋತ್ಸವದ ಪ್ರಯುಕ್ತ ಅ. 3ರಿಂದ 12ರವರೆಗೆ 10 ದಿನ ನಗರದ ನಾನಾ ಭಾಗಗಳಲ್ಲಿ21 ವೇದಿಕೆಗಳಲ್ಲಿ ನಾನಾ ಕಾರ‍್ಯಕ್ರಮಗಳು ನಡೆಯಲಿವೆ. ಅದರಲ್ಲಿ 11 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳೇ ಇರಲಿವೆ. ಹಾಗಾದ್ರೆ ದಸರಾ ಮಹೋತ್ಸವದ 2ನೇ ದಿನವಾದ ಇಂದು ಯಾವೆಲ್ಲಾ ಕಾರ್ಯಕ್ರಮಗಳಿವೆ ಇಲ್ಲಿ ತಿಳಿಯಿರಿ.

ವಿಶ್ವವಿಖ್ಯಾತ ಮೈಸೂರು ದಸರಾದ 2ನೇ ದಿನದ ಕಾರ್ಯಕ್ರಮ ವೇಳಾಪಟ್ಟಿ

ಈ ಬಾರಿ 508 ಕಲಾತಂಡಗಳ 6500 ಕಲಾವಿದರು ಅರಮನೆ ಸೇರಿದಂತೆ 11 ವೇದಿಕೆಗಳಲ್ಲಿ ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ. ದಸರಾ 2ನೇ ದಿನವೂ ಹಲವು ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 7 ಗಂಟೆಗೆ ಟೌನ್​ಹಾಲ್​ ಬಳಿ ಪಾರಂಪರಿಕ ಜಾವಾ ಬೈಕ್ ಱಲಿಗೆ ಸಚಿವ ಹೆಚ್.ಕೆ.ಪಾಟೀಲ್‌ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 7.30ಕ್ಕೆ ಅರಮನೆ ಒಳ ಆವರಣದಲ್ಲಿ ರಂಗೋಲಿ ಸ್ಪರ್ಧೆ ಇರಲಿದೆ. ಇದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಮಕ್ಕಳ ದಸರಾ ಕಲಾಥನ್ ಪ್ರದರ್ಶನ ನಡೆಯಲಿದೆ. ಸಚಿವ ಡಾ ಹೆಚ್.ಸಿ. ಮಹದೇವಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಮೈಸೂರಿನ ಜೆ.ಕೆ.ಮೈದಾನದಲ್ಲಿ ಬೆಳಗ್ಗೆ 10ಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಿಳಾ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾದ ಮೊದಲ ದಿನ ಮುಡಾಮಯ: ಮಹಿಷ ಮರ್ಧಿನಿ ಪೂಜೆಯಲ್ಲಿ ಮಾರ್ದನಿಸಿದ ಜಿಟಿ ದೇವೇಗೌಡ ಮಾತು

ಇನ್ನು ಬೆಳಗ್ಗೆ 10 ಗಂಟೆಗೆ ಸಚಿವ ಡಾ ಹೆಚ್.ಸಿ. ಮಹದೇವಪ್ಪರಿಂದ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಸಂಜೆ 5 ಗಂಟೆಗೆ ಮೈಸೂರಿನ ಮೆಡಿಕಲ್ ಕಾಲೇಜು ಆವರಣದಲ್ಲಿ ಯೋಗ ದಸರಾಗೆ ಸಚಿವ ದಿನೇಶ್​ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಸಂಜೆ 6 ಗಂಟೆಗೆ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ, ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ. ಸಿದ್ದಾರ್ಥ ನಗರದಲ್ಲಿರುವ ಕಾವಾದಲ್ಲಿ ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದಸರಾ ಸಿಎಂ ಕಪ್‌ ಕ್ರೀಡಾಕೂಟ, ರಂಗಾಯಣ ಜಾನಪದ ರಂಗ ಉತ್ಸವ, ನ್ಯೂ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಹಸಿರು ಮಂಟಪದಲ್ಲಿ ದಸರಾ ವಿದ್ಯುತ್‌ ದೀಪಾಲಂಕಾರ, ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರದ ಆವರಣದಲ್ಲಿ ವಸ್ತು ಪ್ರದರ್ಶನ ಹಾಗೂ ಅರಮನೆ ಆವರಣದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ