ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ಗೆ ಬಂದಿದ್ದ ಲಿಂಕ್‌ ಕ್ಲಿಕ್ಕಿಸಿ 5.48 ಲಕ್ಷ ರೂ ಕಳೆದುಕೊಂಡ ಮೈಸೂರಿನ ವ್ಯಕ್ತಿ

ಮೈಸೂರಿನ ವ್ಯಕ್ತಿಯೊಬ್ಬರು ಹ್ಯಾಕರ್‌ಗಳು ಕಳಿಸಿದ್ದ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಬರೋಬ್ಬರಿ 5.48 ಲಕ್ಷ ರೂ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಕಿ ವಿದ್ಯುತ್​ ಬಿಲ್ ಕಟ್ಟುವಂತೆ ಹೇಳಿ ಮೊಬೈಲ್​ಗೆ ಲಿಂಕ್​ ಕಳುಹಿಸಿ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ವಂಚನೆ ಮಾಡಿದ್ದಾರೆ.​

ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ಗೆ ಬಂದಿದ್ದ ಲಿಂಕ್‌ ಕ್ಲಿಕ್ಕಿಸಿ  5.48 ಲಕ್ಷ ರೂ ಕಳೆದುಕೊಂಡ ಮೈಸೂರಿನ ವ್ಯಕ್ತಿ
ಮೈಸೂರು ಸೈಬರ್ ಪೊಲೀಸ್ ಠಾಣೆ
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on:Aug 10, 2023 | 1:14 PM

ಮೈಸೂರು, (ಆಗಸ್ಟ್ 10): ಕಾಂಗ್ರೆಸ್ (Congress) ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ 200 ಯುನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಸಂಬಂಧ ಇನ್ನೂ ಅನೇಕ ಜನರಲ್ಲಿ ಗೊಂದಲಗಳು ಇವೆ. 200 ಯುನಿಟ್​ಗಿಂತ ಕಡಿಮೆ ಉಪಯೋಗಿಸಿದ್ದರೂ ಬಿಲ್​ ಕೊಟ್ಟಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ನಮಗೆ ಝೀರೋ ವಿದ್ಯುತ್ ಬಿಲ್ (electricity bill)​ ಬಂದಿದೆ ಎಂದು ಫುಲ್ ಖುಷಿಯಾಗಿದ್ದಾರೆ. ಇನ್ನು ಗ್ಯಾರಂಟಿಗಳಿಗೆ ಅರ್ಜಿಗಾಗಿ ನಕಲಿ ಆ್ಯಪ್​ಗಳು ಸಹ ತಲೆ ಎತ್ತಿದ್ದು, ಸೈಬರ್​ ವಂಚಕರು ಸಾರ್ವಜನಿಕರ ಹಣ ಪೀಕಲು ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಅದರಂತೆ ಮೈಸೂರಿನಲ್ಲಿ ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆತಿಂದ​ ಬರೋಬ್ಬರಿ 5.48 ಲಕ್ಷ ರೂ. ದೋಚಿರು ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಫೋನ್​ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕನಿಗೆ ವಂಚಿಸಿದ ಯುವತಿ

ಮೈಸೂರಿನ ಯಾದವಗಿರಿ ಬಡಾವಣೆ ನಿವಾಸಿ ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ವಿದ್ಯುತ್ ಬಿಲ್ ಬಾಕಿ ಇದ್ದು,  ಲಿಂಕ್​ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ. ಕರೆ ಕಡಿತಗೊಳಿಸಿದ ನಂತರ ಖದೀಮರು, ಕಣ್ಣನ್ ಅವರ ಫೋನ್​ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದಾರೆ. ಅದಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಶಾಕ್ ಆದ ಕಣ್ಣನ್​ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.

ಹೀಗೆ ನಿಮ್ಮ ಮೊಬೈಲ್​ಗೆ ನಾನಾ ಬಗೆಯ ಸಂದೇಶಗಳು ಬರುತ್ತಿರುತ್ತವೆ. ನಿಮಗೆ ಲಾಟರಿ ಹೊಡೆದಿದೆ. ನಿಮಗೆ ಕೊಡುಗೆ ನೀಡುತ್ತಿದ್ದೇವೆ ಅಂತೆಲ್ಲಾ ನಾನಾ ಮೆಸೇಜ್​ಗಳು ಬರುತ್ತವೆ. ಆದ್ರೆ, ಈ ಬಗ್ಗೆ ನೀವು ಎಚ್ಚರದಿಂದ ಇರುವುದು ಒಳಿತು. ಒಂದು ವಂಚಕರು ಹೇಳಿದ ಹಾಗೇ ಕೇಳಿದ್ರೆ ನಿಮ್ಮ ಖಾತೆಯಲ್ಲಿರುವ ಹಣ ಕೆಲವೇ ಸೆಕೆಂಡ್​ಗಳಲ್ಲಿ ಮಾಯವಾಗುವುದು ಗ್ಯಾರಂಟಿ. ಯಾರು ಬಲೆ ಬೀಳುತ್ತಾರೆ ಯಾರಿಲ್ಲ ಎಂದು ಸೈಬರ್ ವಂಚಕರು ಬಕಪಕ್ಷಿಗಳಂತೆ ಕಾದು ಕುಳಿತಕೊಂಡಿರುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರಿ.

ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:06 pm, Thu, 10 August 23