ಮೈಸೂರು, ಜನವರಿ 21: ಜಿಲ್ಲೆಯಲ್ಲಿ ರಾಮ ರಾಜಕಾರಣ ಸಮರ ತಾರಕಕ್ಕೇರಿದ್ದು, 24 ದಿನ ಉರಿಯುವ ಅಗರಬತ್ತಿಗೆ ಮೈಸೂರು ಪೊಲೀಸರು 2 ತಾಸು ಮಾತ್ರ ಅನುಮತಿ ಕೊಟ್ಟಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಿ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ರಂಗರಾವ್ ಅಂಡ ಸನ್ಸ್‌ನಿಂದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ‘ಪರಂಪರಾ’ ಹೆಸರಿನಲ್ಲಿ 111 ಅಡಿ ಉದ್ದದ ಅಗರಬತ್ತಿ ಹಚ್ಚಲು ಸಿದ್ಧತೆ ಮಾಡಲಾಗಿದೆ. ಈ 111 ಅಡಿ ಉದ್ದದ ಅಗರ್ ಬತ್ತಿ 24 ದಿನ ಉರಿಯುತ್ತದೆ. ಹೀಗಾಗಿ ಆಯೋಜಕರು 24 ದಿನ ಇಡಲು ಅನುಮತಿ ಕೇಳಿದ್ದರು. ಆದರೆ, ಪೊಲೀಸರು ಈ ಅಗರಬತ್ತಿ ಇಡಲು ಕೇವಲ 2 ತಾಸು ಅವಕಾಶ ನೀಡಿದ್ದಾರೆ. ಎರಡು ತಾಸಿನ ಒಳಗೆ ಅಗರಬತ್ತಿಯನ್ನು ಅಲ್ಲಿಂದ ತೆಗೆಯಲು ಸೂಚಿಸಿದ್ದಾರೆ.
ಇದ್ದಿಲು, ಜಿಗಟು ಬಿದಿರು, ಶ್ರೀಗಂಧದ ಪುಡಿ, ಜೇನು ತುಪ್ಪ, ಸಾಂಬ್ರಣಿ, ಬಿಳಿ ಸಾಸಿವೆ, ಬೆಲ್ಲ ಸೇರಿದಂತೆ ಹಲವು ಪದಾರ್ಥ ಬಳಕೆ ಮಾಡಲಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ಹೆಸರಿನಲ್ಲಿ 18 ನುರಿತ ಕುಶಲಕರ್ಮಿಗಳಿಂದ 23 ದಿನ ಕೆಲಸ ಮಾಡಿ 111 ಅಡಿ ಉದ್ದದ ವಿಶೇಷ ಅಗರಬತ್ತಿ ತಯಾರಿಕೆ ಮಾಡಲಾಗಿದೆ.
ಮೈಸೂರು ಅಶೋಕ ರಸ್ತೆಯಲ್ಲಿ ನಡೆಯಬೇಕಿದ್ದ ಲಕ್ಷ ದೀಪೋತ್ಸವಕ್ಕೆ ನೀಡಿದ್ದ ಅನುಮತಿ ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಜ 22 ರಂದು ಲಕ್ಷ ದೀಪೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅನುಮತಿ ರದ್ದುಪಡಿಸಿದ ಪೊಲೀಸ್ ಹಿಂಬರಹ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ರಾಮಮಂದಿರ ಉದ್ಘಾಟನೆ, ಆ ದಿನ ನೆತ್ತರು ಹರಿಯುವುದು ಗ್ಯಾರಂಟಿ ಎಂದ ಅನ್ಯಕೋಮಿನ ವ್ಯಕ್ತಿ
ಹೀಗಾಗಿ ಪೊಲೀಸರ ಅನುಮತಿ ನಿರಾಕರಣೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರಿಂದ ಅನುಮತಿ ಸಹಾ ಪಡೆಯಲಾಗಿತ್ತು. ಇದೀಗ ಹೆಚ್ಚು ವಾಹನ ಸಂಚಾರ ಜನ ಸಂದಣಿ ಕಾರಣ ನೀಡಿ ಅನುಮತಿ ರದ್ದು ಮಾಡಲಾಗಿದೆ.
ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನಲೆ ರಾಮನ ಫೋಟೋಗೆ ಬೇಡಿಕೆ ಹೆಚ್ಚಾಗಿದೆ. ಫೋಟೋ ಮಾರಾಟ ಮಳಿಗೆಗಳಲ್ಲಿ ರಾಮನ ಫೋಟೋಗೆ ಭಾರಿ ಡಿಮ್ಯಾಂಡ್ ಬಂದಿದೆ. ಹುಬ್ಬಳ್ಳಿಯ ಪಾನ ಬಜಾರ್ ಬಳಿ ಇರುವ ಫೋಟೋ ಅಂಗಡಿ ಮುಂದೆ ಜನ ಸೇರಿದ್ದಾರೆ. ರಾಮನ ಪೂಜೆ ಮಾಡಲು ಫೋಟೋ ಖರೀದಿಗೆ ಜನ ಬರುತ್ತಿದ್ದಾರೆ. ಕೆಲ ಅಂಗಡಿಗಳಲ್ಲಿ ಫೋಟೋಗಳೇ ಸಿಗುತ್ತಿಲ್ಲ.
ಕಳೆದ ನಾಲ್ಕೈದು ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋ ಮಾರಾಟ ಮಾಡಿದ್ದೇವೆ ಎಂದು ಮಾಲೀಕ ಹೇಳಿದ್ದಾರೆ. ಫೋಟೋಗಳ ಖರೀದಿ ಮಾಡಲು ಅಂಗಡಿ ಮುಂದೆ ಜನ ಜಮಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.