ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ(Mysuru) ಬೈಕ್ ವ್ಹೀಲಿಂಗ್ (Bike Wheeling) ಪ್ರಕರಣಗಳು ಹೆಚ್ಚಾಗಿವೆ. ಒಂದು ವಾರದಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಸದ್ಯ ಬೈಕ್ ಸ್ಟಂಟ್ಗೆ(Bike Stunt) ಬ್ರೇಕ್ ಹಾಕಲು ಮೈಸೂರು ಪೊಲೀಸರು(Mysuru Police) ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಬೈಕ್ ಸ್ಟಂಟ್ ಮಾಡುತ್ತಿರುವ ಯುವಕರು ಹಾಗೂ ಸ್ಟಂಟ್ಗೆ ಬಳಸಿದ ಬೈಕ್ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ವಾಹನಗಳ ಮಧ್ಯೆ ವ್ಹೀಲಿಂಗ್ ಮಾಡುತ್ತ ಅಪಾಯಕರ ಸಾಹಸ ಪ್ರದರ್ಶಿಸುತ್ತಿರುವ ದೃಶ್ಯಗಳು ಟಿವಿ9ಗೆ ಲಭ್ಯವಾಗಿವೆ. ಬನ್ನಿಮಂಟಪ ಎನ್ಆರ್ ಮೊಹಲ್ಲಾ ರಿಂಗ್ ರಸ್ತೆಗಳಲ್ಲಿ ಬಿಂದಾಸ್ ವ್ಹೀಲಿಂಗ್ ಮಾಡುವ, ಐಶಾರಾಮಿ ಬೈಕ್ಗಳು ಟಿವಿಎಸ್ ಮೊಪೆಡ್ನಲ್ಲೂ ವ್ಹೀಲಿಂಗ್ ಮಾಡುವವರಿಗೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೈಕ್ ವ್ಹೀಲಿಂಗ್ ವಿರುದ್ದ ಕಠಿಣ ಕ್ರಮ ಎಫ್ಐಆರ್ ದಾಖಲಿಸುವುದಾಗಿ ವಿದ್ಯಾರ್ಥಿಗಳು, ಪೋಷಕರಿಗೂ ವಾರ್ನಿಂಗ್ ನೀಡಲಾಗಿದೆ. ಮಕ್ಕಳ ಬೈಕ್ ಚಾಲನೆ ಬಗ್ಗೆ ನಿಗಾ ಇಡಿ. ಎಫ್ಐಆರ್ ದಾಖಲಾದರೆ ಭವಿಷ್ಯಕ್ಕೆ ಮಾರಕವಾಗಲಿದೆ. ಬೈಕ್ ವೀಲಿಂಗ್ ಬೇರೆ ವಾಹನ ಸವಾರರಿಗೂ ಸಮಸ್ಯೆಯಾಗುತ್ತದೆ ಎಂದು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: Bengaluru News: ಗಂಡನ ಮನೆಯಲ್ಲಿ ಪ್ರಾಣಬಿಟ್ಟ ಮಹಿಳಾ ಟೆಕ್ಕಿ, ಕಾರಣ ನಿಗೂಢ
ಮೈಸೂರು ಜಿಲ್ಲೆ ಹುಣಸೂರು ನಗರದ ಬ್ಯಾಂಕ್ ಆಫ್ ಬರೋಡಾ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ಗಳ ನಡುವೆ ಅಪಘಾತವಾಗಿದ್ದು ತಾತ ರಾಮಶೆಟ್ಟಿ(72) ಸಾವು, ಮೊಮ್ಮಗ ವಿನಯ್ಗೆ ಗಾಯಗಳಾಗಿವೆ. ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಬುಲೆಟ್ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಕೆಳಗೆ ಬಿದ್ದ ರಾಮಶೆಟ್ಟರ ತಲೆ, ಕೈಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿತ್ತು. ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರಾಮಶೆಟ್ಟಿ ಮೃತಪಟ್ಟಿದ್ದಾರೆ. ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:04 am, Tue, 18 July 23