ಮೈಸೂರಿಂದ ಕೇದಾರನಾಥದವರೆಗೆ; ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿದ ಅರುಣ್ ಯಾರು ಗೊತ್ತಾ?

Shankaracharya Idol: ಆಕರ್ಷಕವಾದ ಅಪರೂಪದ ಶಂಕರಾಚಾರ್ಯರ ಬೃಹತ್ ಪ್ರತಿಮೆಯ ಶಿಲ್ಪಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಅರುಣ್ ಯೋಗಿರಾಜ್. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ‌ ಮಾತಿಗೆ ಅನ್ವರ್ಥ ಈ ಅರುಣ್.

ಮೈಸೂರಿಂದ ಕೇದಾರನಾಥದವರೆಗೆ; ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿದ ಅರುಣ್ ಯಾರು ಗೊತ್ತಾ?
ಅರುಣ್ ಯೋಗಿರಾಜ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 05, 2021 | 9:07 PM

ಮೈಸೂರು: ಇಂದು ವಿಶ್ವವೇ ಕೇದಾರನಾಥದತ್ತ‌ ಮುಖ ಮಾಡಿದೆ. ಇದಕ್ಕೆ‌ ಕಾರಣ ಇಂದು ಕೇದಾರನಾಥದಲ್ಲಿ ಅನಾವರಣಗೊಂಡ ಅದ್ವೈತ ಸಿದ್ದಾಂತದ ಪ್ರತಿಪಾದಕರಾದ ಶಂಕರಾಚಾರ್ಯರ ಬೃಹತ್ ಪ್ರತಿಮೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥನಲ್ಲಿ ಪುನರ್ ನಿರ್ಮಾಣಗೊಂಡ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಿದರು.‌ಅಷ್ಟೇ ಅಲ್ಲ ಶಂಕರಾಚಾರ್ಯರ ಬೃಹತ್ ಮೂರ್ತಿಯನ್ನು ಅನಾವರಣಗೊಳಿಸಿದರು.

ಆಕರ್ಷಕವಾದ ಅಪರೂಪದ ಶಂಕರಾಚಾರ್ಯರ ಬೃಹತ್ ಪ್ರತಿಮೆಯ ಶಿಲ್ಪಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಅರುಣ್ ಯೋಗಿರಾಜ್. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ‌ ಮಾತಿಗೆ ಅನ್ವರ್ಥ ಈ ಅರುಣ್. 37 ವರ್ಷದ ಅರುಣ್ ಚಿಕ್ಕ ವಯಸ್ಸಿಗೆ ಅದ್ಬುತ ಸಾಧನೆ ಮಾಡಿದ್ದಾರೆ. ಅರುಣ್‌ಗೆ ಮನೆಯೇ ಮೊದಲ ಕಲಾ ಶಾಲೆ. ತಂದೆಯೇ ಮೊದಲ ಗುರು. ಅರುಣ್ ತಂದೆ ಯೋಗಿರಾಜ್ ಶಿಲ್ಪಿ ಖ್ಯಾತ ಶಿಲ್ಪ ಕಲಾವಿದರು. ಅರುಣ್ ಹುಟ್ಟುತ್ತಲೆ‌ ಕಲ್ಲಿನೊಂದಿಗೆ ಸಂಬಂಧ ಬೆಸೆದು ಹೋಗಿತ್ತು. ಅರುಣ್ ಅವರು ಐದನೇ ತಲೆಮಾರಿನವರು.‌ ಇವರ ತಂದೆ ಮಾತ್ರವಲ್ಲ ಅಜ್ಜ ಮುತ್ತಜ್ಜ ಅವರಜ್ಜ ಎಲ್ಲರೂ ಶಿಲ್ಪ ಕಲೆಗೆ ಜೀವ ತುಂಬುವಿದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪೂರ್ವಜರಾದ ಚೌಡಪ್ಪಚಾರ್, ಬಸವಣ್ಣ ಆಚಾರ್, ಬಸವಣ್ಣ ಶಿಲ್ಪಿ, ಯೋಗಿರಾಜ್ ಶಿಲ್ಪಿ ಜನಪ್ರಿಯ ಶಿಲ್ಪಿಗಳಾಗಿದ್ದರು. ಅದರಲ್ಲೂ ಅಜ್ಜ ಬಸವಣ್ಣ ಶಿಲ್ಪಿ ಮೈಸೂರಿನ ರಾಜಾಶ್ರಯ ಪಡೆದಿದ್ದ ಶಿಲ್ಪಿ. ಅರುಣ್ ತಂದೆ ಯೋಗಿರಾಜ್ ಸಹಾ ನುರಿತ ಶಿಲ್ಪಿಯಾಗಿದ್ದರು. ಅಜ್ಜ ತಾತನಿಂದ ಅರುಣ್ ಶಿಲ್ಪ‌ ಕೆತ್ತನೆಯನ್ನು ಕಲಿತವರು.

ಅರುಣ್ ಯೋಗಿರಾಜ್ ಬಾಲ್ಯ:

ಅರುಣ್ ಬಾಲ್ಯದಿಂದಲೂ ಕಲ್ಲಿನೆಡೆಗೆ ಆಕರ್ಷಿತರಾದವರು. ಅಪ್ಪ ಮತ್ತು ಅಜ್ಜನ ಕೈಗೆ ಸಿಕ್ಕ ಕಲ್ಲುಗಳು ದಿನ ಬೆಳಗಾಗುವುದರೊಳಗಾಗಿ ಸುಂದರ ಮೂರ್ತಿಗಳಾಗಿ ಬಿಡುತ್ತಿದ್ದವು. ಕಲ್ಲೊಂದು ಅದೇಗೇ ಸುಂದರ ರೂಪ ಪಡೆದುಕೊಳ್ಳುತ್ತದೆ ಅನ್ನೋದು ಅರುಣ್ ತಲೆಯಲ್ಲಿ ಸದಾ ಕಾಡುತಿತ್ತು. ಇದರ ರಹಸ್ಯ ಭೇದಿಸಲು ಹೊರಟ ಅರುಣ್‌ ಇವತ್ತು ವಿಶ್ವವೇ ನೋಡುವ ಶಿಲ್ಪ ಕಲಾವಿದರಾಗಿ ರೂಪುಗೊಂಡಿದ್ದಾರೆ. ಎಲ್ಲಾ ಮಕ್ಕಳು ಆಟವಾಡಲು ಹೋದರೆ ಅರುಣ್ ಮಾತ್ರ ತನ್ನ ತಂದೆ ಅಜ್ಜ ಮಾಡುವ ಕೆತ್ತನೆ ಕೆಲಸದ ಬಳಿ ಧಾವಿಸುತ್ತಿದ್ದರು. ಸ್ವಯಂಪ್ರೇರಿತರಾಗಿ ತಂದೆ ಅಜ್ಜನಿಗೆ ಸಹಾಯ ಮಾಡುತ್ತಿದ್ದರು. ಅಷ್ಟೇ ಅಲ್ಲ ತಾವೇ ಗುಳಿ ಹಿಡಿದು ಕಲ್ಲು ಕೆತ್ತಲು ಮುಂದಾಗುತ್ತಿದ್ದರು. ಪುಟ್ಟ ಕೋಮಲ ಕೈಗಳಿವೆ ಅದೆಷ್ಟು ಗಾಯಗಳಾದವೋ ಲೆಕ್ಕವಿಲ್ಲ. ಆದರೂ ಅರುಣ್ ಹಿಂದೆ‌ ಸರಿಯಲಿಲ್ಲ. ಶಾಲೆಯಿಂದ ವಾಪಸ್ಸು ಬಂದ ಕೂಡಲೇ ಕೆತ್ತನೆ ಕೆಲಸದಲ್ಲಿ ತೊಡಗಿಸಿಕೊಂಡು ಬಿಡುತ್ತಿದ್ದರು. ಸತತ ಪ್ರಯತ್ನ ಉತ್ಸಾಹದಿಂದಾಗಿ ಅರುಣ್ ಕಾಲೇಜು ದಿನಗಳಲ್ಲೇ ಅತ್ಯುತ್ಯಮ ಶಿಲ್ಪ‌ ಕಲಾವಿದರಾಗಿ ರೂಪಗೊಂಡರು.

ಅರ್ಹತೆಗೆ ಸಿಕ್ಕ ಅವಕಾಶ:

ಅರುಣ್ ಅವರಿಗೆ ಶಂಕರಾಚಾರ್ಯರ ಬೃಹತ್ ಮೂರ್ತಿ ಸಿದ್ದಪಡಿಸಲು ಸಿಕ್ಕ ಅವಕಾಶವೂ ರೋಚಕವೇ. ಯಾಕಂದ್ರೆ ಐತಿಹಾಸಿಕ ಮೂರ್ತಿಯನ್ನು ಸಿದ್ದಪಡಿಸಲು ದೇಶದ ವಿವಿಧ ರಾಜ್ಯಗಳ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಬೇರೆ ಬೇರೆ ರಾಜ್ಯದ ಕಲಾವಿದರ ಆಯ್ಕೆಯಾಗಿದ್ದರು. ಅರುಣ್ ಎರಡು ಅಡಿಯ ಶಂಕರಾಚಾರ್ಯರ ಮಾದರಿ ಮೂರ್ತಿಯನ್ನು ಸಿದ್ದಪಡಿಸಿ ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ಕೇಂದ್ರ ಸರ್ಕಾರದ ಅಧಿಕಾರಿಗಳು ಹಿಂದೆ ಮುಂದೆ ನೋಡದೆ ಐತಿಹಾಸಿಕ ಮೂರ್ತಿ ತಯಾರಿಕೆಯ ಜವಾಬ್ದಾರಿಯನ್ನು ಅರುಣ್ ಯೋಗಿರಾಜ್ ಅವರಿಗೆ ನೀಡಿದರು. ಯಾವಾಗ ಜವಾಬ್ದಾರಿ ಹೆಗಲೇರಿತೋ ಆಗ ಅರುಣ್‌ಗೆ ಒಂದು ಕ್ಷಣ ರೋಮಾಂಚನವಾಯ್ತು. ಯಾಕಂದ್ರೆ ಅದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಹೇಳಿ ಕೇಳಿ ಕೇದಾರನಾಥ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯಂತ ಆಪ್ತವಾದ ಪವಿತ್ರ ಸ್ಥಳ. ಇನ್ನು ಶಂಕರಾಚಾರ್ಯರ ಪ್ರತಿಮೆ ಅಂದರೆ ಕೇಳಬೇಕಾ ? ಆದರೂ ಇದೊಂದು ನನಗೆ ಸಿಕ್ಕ ಪೂಜ್ಯ ಜವಾಬ್ದಾರಿ, ಆ ಶಂಕರನೇ ನನ್ನ ಕೈಯಲ್ಲಿ ಈ ಕೆಲಸ ಮಾಡಿಸುತ್ತಿದ್ದಾನೆ ಅಂತಾ ಮನದಲ್ಲೇ ಶಂಕರನನ್ನು ಪ್ರಾರ್ಥಿಸಿದ ಅರುಣ್ ಎಲ್ಲಾ ಭಾರವನ್ನು ಶಂಕರಾಚಾರ್ಯರ ಮೇಲೆ ಹಾಕಿ ನೀವು ಕಲ್ಲಿನಿಂದ ಶಿಲೆಯಾಗಿ ಹೇಗೆ ಬರುತ್ತಿರೋ ಬನ್ನಿ, ಅಂತಾ ಹೇಳಿದವರೇ ಕೆತ್ತನೆ ಕೆಲಸ ಆರಂಭಿಸಿಯೇ ಬಿಟ್ಟರು.

ಕೃಷ್ಣ ಶಿಲೆ ಬಳಕೆ – ಅದ್ಬುತ ತಂಡದ ಕೆಲಸ:

ಅರುಣ್ ಯೋಗಿರಾಜ್ ನೇತೃತ್ವದಲ್ಲಿ 7 ಜನರ ತಂಡ ಇದಕ್ಕಾಗಿ ಹಗಲು ಇರುಳು ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್ 2020ರಲ್ಲಿ ಕೆತ್ತನೆ ಕೆಲಸ ಆರಂಭವಾಯಿತು. 2021ರ ಜೂನ್ ಅಂದರೆ 9 ತಿಂಗಳ ನಿರಂತರ ಕೆಲಸದ ನಂತರ ಶಂಕರಾಚಾರ್ಯರ ಮೂರ್ತಿ ಕೆಲಸ ಪೂರ್ಣಗೊಂಡಿತು. ಶಂಕರಾಚಾರ್ಯರ ಮೂರ್ತಿ ಕೆತ್ತನೆಗೆ ಕೃಷ್ಣಶಿಲೆ ಕಲ್ಲನ್ನು ಬಳಸಲಾಗಿದೆ. ಸುಮಾರು 80 ಟನ್ ಕೃಷ್ಣ ಶಿಲೆಯನ್ನು ಬಳಸಲಾಗಿದೆ. ಆಕರ್ಷಕವಾದ ಶಂಕರಾಚಾರ್ಯರ ಶಿಲೆ ಮತ್ತು ಪ್ರತ್ಯೇಕವಾಗಿ ಪೀಠವನ್ನು ತಯಾರಿಸಲಾಗಿದೆ. ಮೂರ್ತಿ 28 ಟನ್ ತೂಕವಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಕೃಷ್ಣಶಿಲೆಯನ್ನು ಇದಕ್ಕೆ ಬಳಸಲಾಗಿದೆ. ಕೃಷ್ಣಶಿಲೆಯ ವಿಶೇಷತೆ ಎಂದರೆ ಇದು ಬೆಂಕಿ ಆ್ಯಸಿಡ್ ಗಾಳಿ ನೀರು ಸೇರಿದಂತೆ ಯಾವುದರಿಂದಲೂ ಹಾನಿಯಾಗದಂತೆ ತಡೆಯುವ ಶಕ್ತಿ ಹೊಂದಿದೆ. ಪೂರ್ಣಗೊಂಡ ಮೂರ್ತಿಯನ್ನು ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಉತ್ತರಾಖಂಡದ ಚಮೌಲಿಗೆ ಕಳುಹಿಸಲಾಯಿತು. ನಂತರ ಚಮೌಲಿಯಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಕೇದರನಾಥಕ್ಕೆ ತಲುಪಿಸಲಾಯಿತು.

ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಅರಳಿದ ಇತರ ಮೂರ್ತಿಗಳು:

– ಮೈಸೂರಿಗೆ ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲೆಯ ಮೂರ್ತಿ

– 6 ಅಡಿ ಎತ್ತರದ ಬೃಹತ್ ನಂದಿಯ ಏಕಶಿಲೆಯ ಪ್ರತಿಮೆ

– 5 ಅಡಿ ಎತ್ತರದ ಶಿವಕುಮಾರ ಸ್ವಾಮೀಜಿಗಳ ಪ್ರತಿಮೆ

– 6 ಅಡಿ ಎತ್ತರದ ಬನಶಂಕರಿ ದೇವಿ ಮೂರ್ತಿ

– ಕೈಯಿಂದ ಕೆತ್ತಿದ ಮಂಟಪಗಳು, ವಿವಿಧ ಕಲ್ಲಿನ ಕಂಬದ ಕೆಲಸಗಳು

– ಡಾ.ಬಿ.ಆರ್. ಅಂಬೇಡ್ಕರ್ ಅವರ ಬಿಳಿ ಅಮೃತಶಿಲೆಯ ಕಲ್ಲಿನ ಶಿಲ್ಪ

– ಮೈಸೂರು ಅರಸು ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿಯ ಬಿಳಿ ಅಮೃತಶಿಲೆಯ ಕಲ್ಲಿನ ಶಿಲ್ಪ

– ಮೈಸೂರು ವಿಶ್ವವಿದ್ಯಾನಿಲದ ಸೋಪ್‌ಸ್ಟೋನ್ ಆಧುನಿಕ ಕಲಾ ಶಿಲ್ಪ

– 5 ಅಡಿ ಎತ್ತರದ ಗರುಡ ದೇವರ ಪ್ರತಿಮೆ

– ಕೆಆರ್ ನಗರದಲ್ಲಿ 7 ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿಯ ಪ್ರತಿಮೆ

– ಆಂಧ್ರಪ್ರದೇಶದಲ್ಲಿ 7 ಅಡಿ ಎತ್ತರದ ಮಾಹೇಶ್ವರಿ ದೇವಿಯ ಪ್ರತಿಮೆ

– ಸರ್ ಎಂ. ವಿಶ್ವೇಶ್ವರಯ್ಯನವರ ಹಲವಾರು ಪ್ರತಿಮೆಗಳು

– ಡಾ. ಬಿ.ಆರ್. ಅಂಬೇಡ್ಕರ್ ಅವರ ಹಲವಾರು ಪ್ರತಿಮೆಗಳು

– ಪಂಚಮುಖಿ ಗಣಪತಿ ದೇವರ ಪ್ರತಿಮೆ

– ಸಾಬೂನು ಕಲ್ಲಿನಲ್ಲಿ 7 ಅಡಿ ಎತ್ತರದ ಭಗವಾನ್ ಮಹಾವಿಷ್ಣುವಿನ ಪ್ರತಿಮೆ

– ವಿವಿಧ ಶೈಲಿಗಳಲ್ಲಿ ದೇವರ ಬುದ್ಧನ ಪ್ರತಿಮೆ

– ಭಾರತೀಯ ಗೂಳಿಯ ಏಕಶಿಲೆಯ ಪ್ರತಿಮೆ ಸಾಬೂನು ಕಲ್ಲಿನ ನಂದಿ

– ಸಾಬೂನು ಕಲ್ಲಿನಲ್ಲಿ 5 ಅಡಿ ಎತ್ತರದ ಸ್ವಾಮಿ ಶಿವಬಾಲ ಯೋಗಿಗಳ ಪ್ರತಿಮೆ

– ಸಾಬೂನು ಕಲ್ಲಿನಲ್ಲಿ 6 ಅಡಿ ಎತ್ತರದ ಶಿವನ ಪ್ರತಿಮೆ.

– ಅರುಣ್ ಯೋಗಿ ಅವರಿಗೆ ಬಂದ ಪ್ರಶಸ್ತಿ ಪುರಸ್ಕಾರಗಳು

ಪ್ರದಾನ ಮಾಡಿದ ಪ್ರಶಸ್ತಿಗಳು:

– 2014ರಲ್ಲಿ ಕೇಂದ್ರ ಸರ್ಕಾರದಿಂದ ಯುವ ಪ್ರತಿಭೆ ಪ್ರಶಸ್ತಿ

– ಮೈಸೂರು ಜಿಲ್ಲಾ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ

– ಶಿಲ್ಪಕಲಾ ಸಂಘದಿಂದ ಶಿಲ್ಪ ಕೌಸ್ತುಭ ಪ್ರಶಸ್ತಿ

– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸನ್ಮಾನ

– ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಅರುಣ್ ಯೋಗಿರಾಜ್ ಅವರ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಶ್ಲಾಘನೆ

– ಮೈಸೂರು ರಾಜಮನೆತನದಿಂದ ಸನ್ಮಾನ ಗೌರವ ಸಮರ್ಪಣೆ

– ಮೈಸೂರು ಜಿಲ್ಲಾ ಕ್ರೀಡಾ ಅಕಾಡೆಮಿಯಿಂದ ಸನ್ಮಾನ

– ಅಮರ ಶಿಲ್ಪಿ ಜಕಣಾಚಾರಿ ಟ್ರಸ್ಟ್ ವತಿಯಿಂದ ಸನ್ಮಾನ

– ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಂದ ಸನ್ಮಾನ.

– ಮಗನ ಸಾಧನೆ ನೋಡಲು ತಂದೆಗೆ ಸಿಗದ ಅವಕಾಶ

ಹೌದು, ಮಗ ಸಾಧನೆಯ ಶಿಖರವೇರಿರುವ ಇಂತಹ ಸುವರ್ಣ ಸಂದರ್ಭವನ್ನು ನೋಡಲು ಅವರ ಗುರು ಅವರ ತಂದೆ ಯೋಗಿರಾಜ್ ಶಿಲ್ಪಿ ಇಂದು ಬದುಕಿಲ್ಲ. ಮೂರ್ತಿ ಪೂರ್ಣವಾಗುವವರೆಗೂ ಜೊತೆಯಲ್ಲಿದ್ದ ತಂದೆ ಸೆಪ್ಟೆಂಬರ್ 2021ರಲ್ಲಿ ಮೈಸೂರಿನ ಲಲಿತ್‌ಮಹಲ್ ಬಳಿ ನಡೆದ ಅಪಘಾತದಲ್ಲಿ ಕೊನೆಯುಸಿರೆಳೆದರು.

ಸಾಧನೆಯೇ ಮಾತು – ಮೌನವೇ ಬಂಗಾರ:

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರು ವಿಶ್ವವಿಖ್ಯಾತಿ ಗಳಿಸಿದ್ದರು ಅರುಣ್ ಮಾತ್ರ ಸರಳ ಸಜ್ಜನಿಕೆಯನ್ನು ಮರೆತಿಲ್ಲ. ಈಗಲೂ ಅಷ್ಟೇ ಸರಳವಾಗಿದ್ದಾರೆ. ಮಿತಭಾಷಿಯಾಗಿರುವ ಅರುಣ್ ಇದೆಲ್ಲಾ ದೈವ ಇಚ್ಚೇ ಅಂತಾರೆ. ಒಟ್ಟಾರೆ ದೇಶದ ಗಮನ ಸೆಳೆದು ಸಾಂಸ್ಕೃತಿಕ ನಗರಿ ಮೈಸೂರಿಗೆ ಕೀರ್ತಿ ತಂದ ಅರುಣ್ ಯೋಗಿರಾಜ್ ಅವರಿಂದ ನಾಡಿಗೆ ಕೀರ್ತಿ ತರುವಂತಹ ಮತ್ತಷ್ಟು ಕಲಾಕೃತಿಗಳು ಮೂಡಲಿ ವಿಶ್ವದಾದ್ಯಂತ ಸಾಂಸ್ಕೃತಿಕ ಕೀರ್ತಿ ಪತಾಕೆ ಹಾರಲಿ ಅನ್ನೋದೆ ನಮ್ಮ ಆಶಯ.

(ವಿಶೇಷ ವರದಿ: ರಾಮ್, ಮೈಸೂರು)

ಇದನ್ನೂ ಓದಿ: ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ: ಮೈಸೂರಿನಲ್ಲಿ ನಿರ್ಮಿಸಿರುವ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ

Modi in Kedarnath ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಿದ ನರೇಂದ್ರ ಮೋದಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?