ಹುಣಸೂರು: ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣ; ಓರ್ವ ಆರೋಪಿಯ ಬಂಧನ
ಹುಣಸೂರಿನ ಹನಗೋಡಿನಲ್ಲಿ ಓರ್ವ ಬಾಲಕನನ್ನು ಅಪಹರಿಸಿ ನಂತರ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಉಳಿದವರಿಗೆ ಶೋಧ ನಡೆದಿದೆ.
ಹುಣಸೂರು: ಬಾಲಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಣಸೂರು ಗ್ರಾಮಾಂತರ ಪೊಲೀಸರಿಂದ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡಿನ ಕಾರ್ತಿಕ್(9) ಎಂಬ ಬಾಲಕನನ್ನು ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಲಾಗಿತ್ತು. ಅಪಹರಣದ ನಂತರ ಅಪಹರಣಕಾರರು 4 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಕಾರ್ತಿಕ್ ತಂದೆ ನಾಗರಾಜ್‌ಗೆ ಒಡ್ಡಿದ್ದರು. ಇದಾದ ಬಳಿಕ ಕುಂಟೇರಿ ಕೆರೆ ಬಳಿ ಬಾಲಕನ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆದಿದೆ.
ನೆಲಮಂಗಲ: ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ 5ಜನರ ಬಂಧನ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ 5 ಜನರನ್ನು ಬಂಧಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರಿಂದ ಅರ್ಜುನ್,ಗುರು,ಅಜಿತ್,ಶ್ರೀನಿವಾಸ್,ಪುನೀತ ಎಂಬುಬವವರನ್ನು ಬಂಧಿಸಲಾಗಿದೆ. ಬಂಧಿತರಿಂದ 20ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 4 ಟಿಸಿಐ ಅಂಡರ್ ಪಾಸ್ ಬಳಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಆನ್ಲೈನ್ ಮುಖಾಂತರ ಅವರು ಬೆಟ್ಟಿಂಗ್ ಆಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಹಾಸನ: ಸಾರ್ವಜನಿಕ ದರ್ಶನದ ಕೊನೆದಿನ; ನಾಳೆ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ದೇಗುಲ ಕ್ಲೋಸ್
Bengaluru: ಪಟಾಕಿ ಸಿಡಿದು ಮಕ್ಕಳಿಗೂ ಸೇರಿದಂತೆ ಒಟ್ಟು 9 ಮಂದಿ ಕಣ್ಣಿಗೆ ಹಾನಿ
Published On - 9:34 am, Fri, 5 November 21