ಉದಯಗಿರಿ ಗಲಭೆ: ಸತೀಶ್​ ಗಡಿಪಾರು ನೋಟಿಸ್ ವಜಾಗೊಳಿಸಿದ ಕೋರ್ಟ್​

| Updated By: ಗಂಗಾಧರ​ ಬ. ಸಾಬೋಜಿ

Updated on: Mar 15, 2025 | 10:30 PM

ಮೈಸೂರಿನಲ್ಲಿ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ ವಿರುದ್ಧ ಹೊರಡಿಸಲಾಗಿದ್ದ ಗಡಿಪಾರು ನೋಟಿಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ. ಪೊಲೀಸರು ಸರಿಯಾದ ಕಾರ್ಯವಿಧಾನವನ್ನು ಪಾಲಿಸದಿರುವುದರಿಂದ ಈ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಪರ ವಕೀಲರು ಪೊಲೀಸರ ಕ್ರಮ ಕಾನೂನುಬಾಹಿರ ಎಂದು ವಾದಿಸಿದ್ದಾರೆ.

ಉದಯಗಿರಿ ಗಲಭೆ: ಸತೀಶ್​ ಗಡಿಪಾರು ನೋಟಿಸ್ ವಜಾಗೊಳಿಸಿದ ಕೋರ್ಟ್​
ಉದಯಗಿರಿ ಗಲಭೆ: ಸತೀಶ್​ ಗಡಿಪಾರು ನೋಟಿಸ್ ವಜಾಗೊಳಿಸಿದ ಕೋರ್ಟ್​
Follow us on

ಮೈಸೂರು, ಮಾರ್ಚ್​ 15: ಮೈಸೂರಿನಲ್ಲಿ ವಿವಾದಿತ ಪೋಸ್ಟ್​ನಿಂದ ಉದಯಗಿರಿಯಲ್ಲಿ (Udayagiri)  ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಡಿಪಾರು ಕೋರಿ ಪೊಲೀಸರು ಸಲ್ಲಿಸಿದ್ದ ನೋಟಿಸ್​​ನ್ನು ಸೆಷನ್ಸ್ ಕೋರ್ಟ್​ ವಜಾಗೊಳಿಸಿದೆ. ಗಡಿಪಾರು (Exile) ನೋಟಿಸ್ ನೀಡುವಾಗ ಕಾರ್ಯವಿಧಾನ ಲೋಪದಿಂದ ಕೂಡಿದೆ ಎಂಬ ಅಂಶ ಉಲ್ಲೇಖಿಸಿ ಸೆಷನ್ಸ್ ಕೋರ್ಟ್ ಗಡಿಪಾರು ನೋಟಿಸ್ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ​ಇದರಿಂದ ಮೈಸೂರು ಪೊಲೀಸರಿಗೆ ಹಿನ್ನಡೆಯಾದಂತಾಗಿದೆ.

ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್​​ ಮಾಡಿ ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟದ ಆರೋಪ ಎದುರಿಸುತ್ತಿರುವ ಸತೀಶ್​ ಗಡಿಪಾರಿಗೆ ಪೊಲೀಸರು ಸಿದ್ಧತೆ ಮಾಡಿದ್ದರು. ಆದರೆ ಪೊಲೀಸರ ಕ್ರಮ ಪ್ರಶ್ನಿಸಿ ಸತೀಶ್ ಪರ ವಕೀಲ ಮೈಸೂರು ಜಿಲ್ಲಾ ಕೋರ್ಟ್​ ಮೆಟ್ಟಿಲೇರಿದ್ದರು. ಬಳಿಕ ಆರೋಪಿ ಸತೀಶ್​​ನನ್ನು ಗಡಿಪಾರು ಮಾಡುವ ಸಲುವಾಗಿ ಪೊಲೀಸರು ನೀಡಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ನಿರ್ಬಂಧ ತೆರವುಗೊಳಿಸುವ ಸಲುವಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ರಿವಿಜನ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಉದಯಗಿರಿ ಗಲಭೆ: ಮೈಸೂರು ಚಲೋಗೆ ಅನುಮತಿ ನಿರಾಕರಣೆ, ಕೋರ್ಟ್ ಮೊರೆ ಹೋದ ಬಿಜೆಪಿ

ಇದನ್ನೂ ಓದಿ
ಉದಯಗಿರಿ ಗಲಭೆ: ಸತೀಶ್​ನನ್ನು ಗಡಿಪಾರು ಮಾಡದಂತೆ ಕೋರ್ಟ್ ಆದೇಶ
ಉದಯಗಿರಿ ಗಲಭೆ: ಮೈಸೂರು ಚಲೋಗೆ ಅನುಮತಿ ನಿರಾಕರಣೆ, ಕೋರ್ಟ್ ಮೊರೆ ಹೋದ bjp
ಉದಯಗಿರಿ ಗಲಭೆ: ಪೊಲೀಸರ ಸಾಹಸಮಯ ಕಾರ್ಯದ ವಿಡಿಯೋ ವೈರಲ್
ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಮಾಹಿತಿ

ಆರೋಪಿ ಪರ ವಕೀಲ ಅ.ಮ.ಭಾಸ್ಕರ್ ತಡೆಯಾಜ್ಞೆ ತೆರವಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಆರೋಪಿ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶ ಕಾನೂನುಬಾಹಿರ. ಈ ಆದೇಶ ಹೊರಡಿಸುವ ಮುನ್ನ ಪೊಲೀಸರು ನಿಯಮವನ್ನು ಪಾಲಿಸಿಲ್ಲ. ಸತೀಶ್ ಅಲಿಯಾಸ್ ಪಾಂಡುರಂಗ ವಿರುದ್ಧ ಆರೋಪದ ಬಗ್ಗೆ ಉಲ್ಲೇಖವಿಲ್ಲ. ತನಿಖಾ ವರದಿ ಸಹ ಇಲ್ಲ. ಜೊತೆಗೆ ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ. ಇಷ್ಟಾದರೂ ಯಾವ ಕಾರಣಕ್ಕಾಗಿ ಗಡಿಪಾರು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ವಕೀಲ ಅ.ಮ.ಭಾಸ್ಕರ್ ವಾದಿಸಿದ್ದಾರೆ.

ಪ್ರಕರಣದ ವಿಚಾರಣೆ ಆಲಿಸಿದ್ದ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಉದಯಗಿರಿ ಗಲಭೆ: ಸತೀಶ್ ಗಡಿಪಾರಿಗೆ ಸಿದ್ಧತೆ ನಡೆಸಿದ್ದ ಪೊಲೀಸರಿಗೆ ಹಿನ್ನಡೆ!

ಮೈಸೂರಿನ ಉದಯಗಿರಿ ಗಲಾಟೆ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಠಾಣೆ, ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ ದಾಂದಲೆ ಮಾಡಿದ್ದರು. ಬಂಧಿತರ ವಿರುದ್ಧ UAPA ಕಾಯ್ದೆಯಡಿ ಕೇಸ್ ದಾಖಲಿಸಬೇಕು ಮತ್ತು ಎನ್​​ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ವತಿಯಿಂದ ಮೈಸೂರು ಚಲೋ ಜನಾಂದೋಲನ ರ್ಯಾಲಿ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:29 pm, Sat, 15 March 25