ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಮುಡಾ ನಿವೇಶನ ಅಡವಿಟ್ಟು 14 ಕೋಟಿ ಸಾಲ ಪಡೆದ ಭೂಗಳ್ಳರ ವಿರುದ್ಧ ಎಫ್​ಐಆರ್

ಹಾಸನದ ಬ್ಯಾಂಕ್ ಆಫ್ ಬರೋಡಾದಲ್ಲಿ ಮುಡಾ ನಿವೇಶನ ಅಡವಿಟ್ಟು ವಂಚಕರು 14 ಕೋಟಿ ಸಾಲ ಪಡೆದಿರುವ ಘಟನೆ ನಡೆದಿದೆ. ಈ ಸಂಬಂಧ M/S RJDJ ಪ್ರಾಪರ್ಟಿಸ್​​ ಮಾಲೀಕರಾದ ಲಕ್ಷ್ಮೇಗೌಡ, ಶಶಿ, ಜಗದೀಶ್​​​, ನಂಜಪ್ಪ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಮುಡಾ ನಿವೇಶನ ಅಡವಿಟ್ಟು 14 ಕೋಟಿ ಸಾಲ ಪಡೆದ ಭೂಗಳ್ಳರ ವಿರುದ್ಧ ಎಫ್​ಐಆರ್
ಮುಡಾ ನಿವೇಶನ
Follow us
TV9 Web
| Updated By: ಆಯೇಷಾ ಬಾನು

Updated on:Nov 10, 2022 | 9:57 AM

ಮೈಸೂರು: ಮುಡಾ(Mysuru Urban Development Authority) ನಿವೇಶನ ಅಡವಿಟ್ಟು ಭೂಗಳ್ಳರು ಹಾಸನದ ಬ್ಯಾಂಕ್ ಆಫ್ ಬರೋಡಾದಲ್ಲಿ(Bank Of Baroda) 14 ಕೋಟಿ ಸಾಲ ಪಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. M/S RJDJ ಪ್ರಾಪರ್ಟಿಸ್​​ ಮಾಲೀಕರಾದ ಲಕ್ಷ್ಮೇಗೌಡ, ಶಶಿ, ಜಗದೀಶ್​​​, ನಂಜಪ್ಪ ವಿರುದ್ಧ $14 ಕೋಟಿ ವಂಚನೆ ಆರೋಪ ಕೇಳಿ ಬಂದಿದೆ.

ಮೈಸೂರಿನಲ್ಲಿರುವ ಇಂಡಸ್ಟ್ರಿಯಲ್ ಸಬರ್ಬ್​ 2ನೇ ಹಂತದಲ್ಲಿರುವ ಮುಡಾಗೆ ಸೇರಿದ ಸುಮಾರು 25 ಕೋಟಿ ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಡವಿಟ್ಟ ಭೂಗಳ್ಳರು 14 ಕೋಟಿ ಸಾಲ ಪಡೆದಿದ್ದಾರೆ. ಇನ್ನು ಆರೋಪಿಗಳು ಸಾಲ ಪಡೆದ ಬಳಿಕ ದಾನಪತ್ರವನ್ನೂ ಮಾಡಿದ್ದಾರೆ. ಆರ್.ಟಿ.ಐ.ಕಾರ್ಯಕರ್ತ ನಾಗೇಂದ್ರ ಎಂಬುವವರು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದು ಮುಡಾ ಆಯುಕ್ತ ದಿನೇಶ್​ ಕುಮಾರ್​ ದೂರು ಆಧರಿಸಿ ಸಾಲ ಪಡೆದವರ ವಿರುದ್ಧ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ: ಏಕಕಾಲದ ಚುನಾವಣೆಯ ಅಂತಿಮ ನಿರ್ಧಾರ ಶಾಸಕಾಂಗಕ್ಕೆ ಬಿಟ್ಟದ್ದು: ಕೇಂದ್ರ ಚುನಾವಣಾ ಆಯೋಗ

ಮೈಸೂರು ನಗರ ಇಂಡಸ್ಟ್ರಿಯಲ್ ಸಬರ್ಬ್ 2ನೇ ಹಂತ ವಿಶ್ವೇಶ್ವರನಗರದ ಶ್ರೀ ಜಯಚಾಮರಾಜೇಂದ್ರ ಪಿಯು ಕಾಲೇಜು, ಶಾರದಾ ವಿದ್ಯಾಮಂದಿರ ಮುಂಭಾಗವಿರುವ ಕೈಗಾರಿಕಾ ನಿವೇಶನ ಸಂಖ್ಯೆ 36/A 285 X 200 ಅಡಿ ವಿಸ್ತೀರ್ಣ (57,000 ಚದರಡಿ) ಅಳತೆಯ ನಿವೇಶನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿಯಾಗಿದೆ. ಪ್ರಾಧಿಕಾರದ ದಾಖಲೆಗಳ ಪ್ರಕಾರ ಈ ವರೆಗೆ ಈ ನಿವೇಶನ ಯಾರಿಗೂ ಮಂಜೂರಾಗಿಲ್ಲ. ಹಲವು ಬಾರಿ ಹರಾಜಿಗೆ ಆಹ್ವಾನಿಸಿದರೂ ಪ್ರಕ್ರಿಯೆ ಯಶಸ್ವಿಯಾಗಲಿಲ್ಲ.

ಇದನ್ನೇ ಬಂಡವಾಳ ಮಾಡಿಕೊಂಡ M/S RJDJ ಪ್ರಾಪರ್ಟೀಸ್ ನ ಮಾಲೀಕರಾದ ಲಕ್ಷ್ಮೇಗೌಡ, ಜಗದೀಶ್, ಶಶಿ ಹಾಗೂ ನಂಜಪ್ಪ ಇವರುಗಳು ಸದರಿ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದೇ ನಕಲಿ ದಾಖಲೆಗಳನ್ನು ಹಾಸನದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಬ್ರಾಂಚ್ ನಲ್ಲಿ ಅಡವಿಟ್ಟು ಬರೋಬರಿ 14 ಕೋಟಿ ಸಾಲ ಪಡೆದಿದ್ದಾರೆ. ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸದ ಬ್ಯಾಂಕ್ ಅಧಿಕಾರಿಗಳು 20-10-2018 ರಲ್ಲಿ ಭಾರೀ ಮೊತ್ತದ ಹಣವನ್ನೇ ಸಾಲವಾಗಿ ಕೊಟ್ಟಿದ್ದಾರೆ.

Published On - 9:57 am, Thu, 10 November 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್