ಮೈಸೂರು, ಜ.03: ನಾಳೆ(ಜ.4) ಮೈಸೂರು ಜಿಲ್ಲೆಯ ನಂಜನಗೂಡು ಬಂದ್(Nanjangud Bandh)ಗೆ ಕರೆ ನೀಡಿದ ವಿಚಾರ ‘ಬಂದ್ಗೆ ಬೆಂಬಲಿಸುವಂತೆ ನಂಜುಂಡೇಶ್ವರ ಭಕ್ತರು ಅಂಗಡಿಗಳಿಗೆ ತೆರಳಿ ಕರಪತ್ರ ಹಂಚಿಕೆ ಚಳವಳಿ ನಡೆಸಿದ್ದಾರೆ. ‘ಇದು ನಂಜನಗೂಡು ಜನರಿಗೆ ಆಗಿರುವ ಅವಮಾನ, ಆದ್ದರಿಂದ ಅದನ್ನು ಖಂಡಿಸಿ ಬಂದ್ಗೆ ಕರೆ ನೀಡಿದ್ದೇವೆ. ನಂಜನಗೂಡು ಜನರು ಬಂದ್ಗೆ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ನಾಳೆ ನಂಜನಗೂಡು ಬಂದ್ಗೆ ಕರೆಕೊಟ್ಟ ಹಿನ್ನೆಲೆ ಬಂದ್ ವಿಫಲಗೊಳಿಸಲು ಕೆಲವರು ಹುನ್ನಾರ ಮಾಡಿದ್ದಾರೆ ಎಂದು ನಂಜನಗೂಡು ಶ್ರೀಕಂಠೇಶ್ವರ ಭಕ್ತರು ಆರೋಪಿಸಿದ್ದು, ಯಾರಿಂದಲೂ ಬಂದ್ ವಿಫಲಗೊಳಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ವೈರಲ್ ಆಗಿದೆ. ಯಾರು ಎಷ್ಟೇ ರಾಜಕೀಯ ಹುನ್ನಾರ ಮಾಡಿ ತಪ್ಪಿತಸ್ಥರ ರಕ್ಷಣೆಗಾಗಿ ಬಂದ್ ವಿಫಲ ಮಾಡಲು ಇನ್ನಷ್ಟು ಹುನ್ನಾರ ಮಾಡಿದರು, ಬಂದ್ ಆಗುತ್ತೆ. ಯಾಕೆಂದರೆ ಬಂದ್ ಮಾಡುತ್ತಿರುವುದು ಯಾವುದೋ ಸಂಘ,ಸಂಸ್ಥೆ, ಪಕ್ಷವಲ್ಲ, ನಂಜುಂಡಪ್ಪನ ಭಕ್ತರು. ಅವನ ಹೆಸರಲ್ಲಿ ಅನ್ನ ತಿನ್ನುತ್ತಿರುವ ಭಕ್ತ ಗಣ ಎಂಬಂತಹ ಪೋಸ್ಟ್ ವೈರಲ್ ಆಗಿದೆ.
ಇದನ್ನೂ ಓದಿ:ಅಂದಕಾಸುರ ಸಂಹಾರ: ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿರುವ ಆರೋಪ
ಜ.4ರಂದು ಮೈಸೂರು ಜಿಲ್ಲೆ ನಂಜನಗೂಡು ಬಂದ್ಗೆ ಕರೆ ವಿಚಾರ ‘ನಾವು ಸರ್ಕಾರಿ ನೌಕರರು ಹೇಳಿದ ಕಡೆ ಸಹಿ ಹಾಕಿದ್ದೇವೆ ಅಷ್ಟೇ. ಅದನ್ನು ಬಿಟ್ಟರೆ ನಮಗೆ ಬೇರೆ ಯಾವುದೇ ಮಾಹಿತಿ ಇಲ್ಲ ಎಂದು ನಂಜುಂಡೇಶ್ವರ ದೇವಸ್ಥಾನದ ಅರ್ಚಕರು ವಿಡಿಯೋ ಮೂಲಕ ನಂಜನಗೂಡು ಪ್ರಕರಣದ ಬಗ್ಗೆ ಜನರಿಗೆ ಗೊತ್ತಿದೆ, ಅರ್ಥೈಸಿಕೊಳ್ತಾರೆ ಎಂದಿದ್ದರು. ಅರ್ಚಕರ ಮಾಧ್ಯಮ ಪ್ರಕಟಣೆ ಬಗ್ಗೆ ಭಕ್ತರು ಅನುಮಾನ ವ್ಯಕ್ತಪಡಿಸಿದ್ದು, ಇದೀಗ ಮತ್ತಷ್ಟು ಅನುಮಾನಕ್ಕೆ ಅರ್ಚಕರ ಹೇಳಿಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Wed, 3 January 24