ಮೈಸೂರು: ಇಂದಿನಿಂದ ಮೈಸೂರು ಟು ಹುಬ್ಬಳ್ಳಿ, ಹುಬ್ಬಳ್ಳಿ ಟು ಮೈಸೂರು ಹೊಸ ವಿಮಾನ ಹಾರಾಟ ಪ್ರಾರಂಭಿಸಲಿದ್ದು, ಹೊಸ ವಿಮಾನಕ್ಕೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರಿಸಿದ್ದಾರೆ. ಮಂಗಳವಾರ, ಗುರುವಾರ, ಶನಿವಾರ ವಾರಕ್ಕೆ ಮೂರು ದಿನ ಪ್ರಯಾಣ ಬೆಳೆಸಲಿರುವ ವಿಮಾನ, ಹುಬ್ಬಳ್ಳಿಯಿಂದ ಸಂಜೆ 5 ಗಂಟೆಗೆ ಹೊರಡುತ್ತದೆ. ಸಂಜ 6.05ಕ್ಕೆ ಮೈಸೂರು ತಲುಪುತ್ತದೆ. ಸಂಜೆ 6.25ಕ್ಕೆ ಮೈಸೂರಿನಿಂದ ಹೊರಟು 7.35 ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲಪುತ್ತದೆ. ಮೇಯರ್ ಸುನಂದಾ ಪಾಲನೇತ್ರ, ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಮಂಜುನಾಥ್ ಸೇರಿ ಹಲವರು ಭಾಗಿಯಾಗಿದ್ದರು.
ಪ್ರಯಾಣಿಕರಿಗೆ ಸಿಹಿ ಸುದ್ದಿ; ಮಂಗಳೂರು-ಹುಬ್ಬಳ್ಳಿ ಮಧ್ಯೆ ಇಂಡಿಗೋ ವಿಮಾನ ಸಂಚಾರ ಆರಂಭ
ಮಂಗಳೂರು-ಹುಬ್ಬಳ್ಳಿ ನಡುವೆ ನಿನ್ನೆ (ಮೇ 1) ಸಂಜೆಯಿಂದ ವಿಮಾನ ಸಂಚಾರ ಆರಂಭವಾಗಿದೆ. ಹುಬ್ಬಳ್ಳಿಯಲ್ಲಿ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ನಡೆದ ಬಳಿಕ 48 ಮಂದಿ ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ಭಾನುವಾರ ಸಂಜೆ 6.50ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಮಂಗಳೂರು-ಹುಬ್ಬಳ್ಳಿ ಮಧ್ಯೆ ಸೋಮವಾರ, ಬುಧವಾರ, ಶುಕ್ರವಾರ, ರವಿವಾರ ಸಹಿತ ವಾರದಲ್ಲಿ 4 ದಿನ ಇಂಡಿಗೋ ವಿಮಾನವು ಸಂಚಾರ ನಡೆಸಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ಟೇಕಾಫ್ ಆಗುವ ವಿಮಾನವು ಸಂಜೆ 6.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಮಂಗಳೂರಿನಿಂದ ಸಂಜೆ 6.35 ಕ್ಕೆ ಟೇಕಾಫ್ ಆಗಲಿರುವ ವಿಮಾನವು ರಾತ್ರಿ 7.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಭಾನುವಾರ ಮೊದಲ ವಿಮಾನ ಲ್ಯಾಂಡ್ ಆಗಿ ಪಾರ್ಕಿಂಗ್ ಜಾಗಕ್ಕೆ ಬರುತ್ತಿದ್ದಂತೆ ವಾಟರ್ ಸೆಲ್ಯೂಟ್ ಸ್ವಾಗತ ನೀಡಲಾಯಿತು. ಟರ್ಮಿನಲ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಕೇಕ್ ಕತ್ತರಿಸಿ ಪ್ರಯಾಣಿಕರೊಂದಿಗೆ ಸಂಭ್ರಮಿಸಿದರು. ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿರನ್ನು ಹೂ ಹಾಗೂ ಕೇಕ್ ನೀಡಿ ಸ್ವಾಗತಿಸಲಾಯಿತು. ಅಲ್ಲದೆ ಮಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಸಿದ್ಧರಾಗಿದ್ದ 36 ಮಂದಿ ಪ್ರಯಾಣಿಕರನ್ನು ಬೀಳ್ಕೊಟ್ಟು ಶುಭ ಹಾರೈಸಲಾಯಿತು.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 pm, Tue, 3 May 22